ಕೆಲವೊಮ್ಮೆ ಪತಿಯ ಅರಿವಿಗೆ ಬಾರದೆಯೇ ಆತ ಮಾಡುವ ಕೆಲಸಗಳು ಪತ್ನಿಯ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಡುತ್ತವೆ. ಆಕೆ ಎಷ್ಟೇ ಚೆಲುವೆಯಾದರೂ ತನ್ನಲ್ಲಿ ಏನೋ ಕೊರತೆಯಿದೆಯೇನೋ ಎಂದು ವೃಥಾ ಕೊರಗುವಂತೆ ಮಾಡುತ್ತವೆ. ಅಂಥ ತಪ್ಪುಗಳು ಯಾವುವು ಎಂದು ತಿಳಿದರೆ, ಮುಂದೆ ಈ ವಿಷಯದಲ್ಲಿ ಪತಿರಾಯರು ಜಾಗರೂಕತೆಯಿಂದಿರಬಹುದು.
ಯುವತಿಯೊಬ್ಬಳಿಗೆ ಮದುವೆ ಎಂದರೆ ಇನ್ನು ಜೀವನದಲ್ಲಿ ತಾನು ಯಾರಿಗೂ ಬೇಡದವಳು ಅಥವಾ ಆಕರ್ಷಕತೆ ಇಲ್ಲದವಳು ಎಂಬ ಯೋಚನೆಗಳು ಕಾಡುವುದಿಲ್ಲ ಎಂಬ ಖುಷಿ ಇರುತ್ತದೆ. ಏಕೆಂದರೆ, ಇಷ್ಟ ಪಟ್ಟು ಮದುವೆಯಾಗುವ ಸಂಗಾತಿಯೊಬ್ಬ ಸದಾ ಸಾಥ್ ನೀಡುತ್ತಾನೆ. ಅವನಿಗೆ ತಾನು ಆಕರ್ಷಕವೆನಿಸಿದರೆ ಸಾಕು ಎಂಬುದು ಅವಳ ಯೋಚನೆ.
ಹಳೆಪ್ರೇಮಿ ಇನ್ನೂ ಮೆಸೇಜ್ ಮಾಡೋದ್ಯಾಕೆ?
undefined
ಆದರೆ, ರಿಯಾಲಿಟಿ ಎಂದರೆ ವಿವಾಹದ ಬಳಿಕ ಪತಿ ಅರಿಯದೆ ಮಾಡಿದ ಕೆಲ ಕೆಲಸಗಳಿಂದ, ಅಥವಾ ಮಾಡದ ಕೆಲಸಗಳಿಂದಲೂ ಆಕೆಗೆ ತಾನು ಚೆಲುವೆಯಲ್ಲ, ತನ್ನ ಮೇಲೆ ಪತಿಗೆ ಪ್ರೀತಿ ಇಲ್ಲ, ನಾನು ಆತನಿಗೆ ಆಕರ್ಷಕವೆನಿಸುವುದಿಲ್ಲ ಎಂಬೆಲ್ಲ ಕೀಳರಿಮೆಗಳು ಕಾಡಬಲ್ಲವು. ಆಕೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಎಷ್ಟು ಮುಖ್ಯವೋ, ಪತಿಯಾದವನು ಆಕೆಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವುದು, ಅವಳ ಕೀಳರಿಮೆಗೆ ಕಾರಣವಾಗದಿರುವುದು ಕೂಡಾ ಅಷ್ಟೇ ಮುಖ್ಯ. ನಿಮಗೆ ಗೊತ್ತಿಲ್ಲದೆಯೇ ಆಕೆಯ ಕೀಳರಿಮೆಗೆ ಕಾರಣವಾಗುತ್ತಿರುವ ನಿಮ್ಮ ನಡೆಗಳಿವು...
1. ಆಕೆಯ ಪ್ರಯತ್ನಗಳನ್ನು ಶ್ಲಾಘಿಸದಿರುವುದು
ಪತಿ ಪತ್ನಿಗೆ ಕೊಡಬಹುದಾದ ಅತಿ ಮಧುರ ವಿಷಯಗಳಲ್ಲಿ ಶ್ಲಾಘನೆಯೂ ಒಂದು. ಆಕೆ ಸದಾ ನಿಮ್ಮ ಗುಂಗಿನಲ್ಲೇ ರೆಡಿಯಾಗುತ್ತಾಳೆ, ಅಡುಗೆ ಮಾಡುತ್ತಾಳೆ, ಮನೆ ಸ್ವಚ್ಛ ಮಾಡುತ್ತಾಳೆ ಇತ್ಯಾದಿಯ ಕುರಿತು ನಿಮ್ಮ ಮನಸ್ಸಿನಲ್ಲೇ ಮೆಚ್ಚುಗೆ ಒಂದು ಕ್ಷಣ ಪಾಸಾಗಬಹುದು. ಆದರೆ, ಅದನ್ನು ಬಾಯಿ ಬಿಟ್ಟು ಹೇಳುವುದಕ್ಕೆ ಸ್ವಲ್ಪ ಪ್ರಜ್ಞಾಪೂರ್ವಕ ಪ್ರಯತ್ನ ಹಾಕಬೇಕು. ಏಕೆಂದರೆ ಎಲ್ಲಕ್ಕಿಂತ ಹೆಚ್ಚಾಗಿ ಪತ್ನಿಯಾದವಳಿಗೆ ಪತಿ ತನ್ನನ್ನು ಪ್ರೀತಿಸುತ್ತಾನೆ, ಬಯಸುತ್ತಾನೆ ಎಂಬ ವಿಷಯವೇ ಆತ್ಮವಿಶ್ವಾಸ ನೀಡುವುದು. ಆಕೆ ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕೊಡುತ್ತಾಳೆ. ಅದಕ್ಕಾಗಿಯೇ ಬಟ್ಟೆ ಹಾಕುವಾಗಲೂ ಯಾವುದು ಹಾಕಲಿ ಎಂದು ನಿಮ್ಮನ್ನು ಪ್ರಶ್ನಿಸುವುದು. ಯಾವುದೋ ಒಂದು ಹಾಕು ಎನ್ನುವುದಕ್ಕಿಂತ ಇಂಥದು ನಿನಗೆ ಚೆನ್ನಾಗಿ ಕಾಣುತ್ತದೆ ಎಂದರೆ ಆಕೆ ಹೆಚ್ಚು ಖುಷಿಯಾಗಿರುತ್ತಾಳೆ.
ನೀನು ಇಂದು ಅದ್ಭುತವಾಗಿ ಕಾಣಿಸುತ್ತಿದ್ದಿ, ಇವತ್ತಿನ ಅಡುಗೆ ಸಖತ್ತಾಗಿದೆ, ನೀನು ಅತ್ಯುತ್ತಮ ತಾಯಿ, ಇತ್ತೀಚೆಗೆ ತೂಕ ಕಡಿಮೆಯಾದಂತೆ ಕಾಣಿಸುತ್ತಿದ್ದಿ...ಇಂಥ ಸಣ್ಣ ಪುಟ್ಟ ಶ್ಲಾಘನೆಗಳು ಆಕೆಯ ಬದುಕಿನಲ್ಲಿ ದೊಡ್ಡ ಮಟ್ಟದ ನೆಮ್ಮದಿಯನ್ನು ತರುತ್ತವೆ. ಮತ್ತಾಕೆ, ಈ ಎಲ್ಲ ವಿಷಯಗಳಿಗೆ ಇನ್ನೂ ಹೆಚ್ಚಿನ ಪ್ರಯತ್ನ ಹಾಕಿ ನಿಮ್ಮನ್ನು ಖುಷಿಪಡಿಸುತ್ತಾಳೆ. ಯಾವಾಗ ನೀವು ಅವಳಿಗೆ ಅತಿ ದೊಡ್ಡದೆನಿಸುವ ಸಣ್ಣ ವಿಷಯಗಳಿಗೂ ಮೆಚ್ಚುಗೆ ಸೂಚಿಸುತ್ತೀರೋ, ಆಗ ಆಕೆಗೆ ನೀವು ಸಂಪೂರ್ಣ ಗಮನ ಕೊಡುತ್ತಿದ್ದೀರಿ, ಅವಳನ್ನು ಗೌರವಿಸುತ್ತಿದ್ದೀರಿ ಎಂಬ ಸಂದೇಶ ರವಾನೆಯಾಗುತ್ತದೆ.
ಮನೆ ಒಳಗೂ ಹೊರಗೂ ದುಡಿಯುವ ಹೆಣ್ಣಿನ ವ್ಯಥೆಯಿದು!
2. ಇನ್ನೊಬ್ಬ ಮಹಿಳೆಯನ್ನು ಅತಿಯಾಗಿ ಹೊಗಳುವುದು
ನಿಮ್ಮ ಬದುಕಿನ ಅತಿ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿ ಪತ್ನಿ ಮೊದಲಿಗಳಾಗಿರಬೇಕು. ಪ್ರತಿದಿನ ನೀವು ವಾಕಿಂಗ್ ಹೋದಾಗ, ಜಿಮ್‌ನಲ್ಲಿ, ಕಚೇರಿಯಲ್ಲಿ ಬಹಳಷ್ಟು ಯುವತಿಯರೊಂದಿಗೆ ಫ್ರೆಂಡ್ಲಿಯಾಗಿ ಮಾತನಾಡಬಹುದು. ಆದರೆ, ಈ ಯಾವ ಗೆಳೆತನ ಕೂಡಾ ವಿವಾಹ ಜೀವನಕ್ಕೆ ಅಡ್ಡಗಾಲಾಗಬಾರದು. ಹೆಣ್ಣೊಬ್ಬಳಿಗೆ ಸುಂದರವಾಗಿ ಕಾಣುತ್ತಿದ್ದೀಯಾ ಎಂದರೆ ಆಕೆ ಖಂಡಿತಾ ಖುಷಿ ಪಡುತ್ತಾಳೆ. ಆದರೆ, ಪತ್ನಿಯ ಹೊರತಾಗಿ ಮತ್ತೊಬ್ಬಾಕೆಯ ದೇಹದ ಸೌಂದರ್ಯ ವರ್ಣಿಸುವುದು, ಹೊಗಳುವ ಮಟ್ಟಿಗೆ ಸಲುಗೆ ತೆಗೆದುಕೊಳ್ಳಬಾರದು.
ಇನ್ನೊಬ್ಬ ಮಹಿಳೆಯ ಪ್ರತಿಭೆಯನ್ನು ಹೊಗಳುವುದರಲ್ಲಿ ತಪ್ಪಿಲ್ಲವಾದರೂ ಇದು ಅತಿಯಾದರೆ, ಆಗ ನಿಮ್ಮ ಪತ್ನಿಗೆ ನೀವು ಆಕೆಯೊಂದಿಗೆ ಬೇರೆ ಮಹಿಳೆಯನ್ನು ಹೋಲಿಸಿ ಮಾತನಾಡುತ್ತಿದ್ದೀರಿ ಎನಿಸಲಾರಂಭಿಸುತ್ತದೆ. ನೀವು ಮತ್ತೊಬ್ಬ ಮಹಿಳೆಯ ಬಗ್ಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾತನಾಡುವುದೆಲ್ಲವೂ ಪತ್ನಿ ಹಾಗೂ ಆ ಮಹಿಳೆಗೆ ಯಾವುದೋ ಸಂದೇಶಗಳನ್ನು ರವಾನಿಸುತ್ತಿರುತ್ತದೆ ಎಂಬ ಬಗ್ಗೆ ಎಚ್ಚರವಿರಲಿ. ಇದರಿಂದ ಪತಿಗೆ ತನ್ನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎನಿಸಿ ಪತ್ನಿಯು ಕೀಳರಿಮೆಗೆ ಜಾರಬಹುದು.
3. ಇನ್ನೊಬ್ಬ ಮಹಿಳೆ ಪಾಸಾದಾಗ ಎರೆಡೆರಡು ಬಾರಿ ತಿರುಗಿ ನೋಡುವುದು
ಹೆಣ್ಣಿನ ಸೌಂದರ್ಯ ಗಮನಿಸದೆ ಇರುವುದು ಕಷ್ಟವೇ. ಆದರೆ, ನಿಮ್ಮ ಪತ್ನಿಯ ಸಲುವಾಗಿಯಾದರೂ ಮತ್ತೆ ಮತ್ತೆ ತಿರುಗಿ ನೋಡುವುದು, ನೋಡುತ್ತಲೇ ಇರುವುದು ಇಂಥ ಅಭ್ಯಾಸಗಳನ್ನು ಬಿಟ್ಟುಬಿಡಿ. ನೀವು ಯಾರಿಗೂ ತಿಳಿಯದಂತೆ ನೋಡಿದೆ ಎಂದುಕೊಳ್ಳಬಹುದು. ಆದರೆ ಪತ್ನಿಯ ದುರ್ಬೀನಿನಂಥ ಕಣ್ಣುಗಳು ಖಂಡಿತಾ ಅದನ್ನು ಗಮನಿಸಿರುತ್ತವೆ. ಆಕೆ ಎಲ್ಲ ಬಾರಿ ಈ ಬಗ್ಗೆ ಬಾಯಿ ಬಿಚ್ಚದಿರಬಹುದು. ಆದರೆ ಇದರಿಂದ ಆಕೆಯೊಳಗೆ ಕಸಿವಿಸಿ ಆಗೇ ಆಗುತ್ತದೆ. ಇದು ಪದೇ ಪದೆ ನಡೆದಾಗ ಪತ್ನಿಯ ಆತ್ಮವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ತರುತ್ತದೆ.
ಕೆಸರು ಗದ್ದೆಗೆ ಇಳಿದ ನವಜೋಡಿ, ಇದು ಪ್ರೀ ವೆಡ್ಡಿಂಗ್ ಪೋಟೋಶೂಟಾ... ನೋಡಿ!
4. ಪೋರ್ನ್ ವಿಡಿಯೋ ನೋಡುವುದು
ಸ್ವಲ್ಪ ಪೋರ್ನ್ ನೋಡುವುದರಿಂದ ಅಂಥ ಅಪಾಯವೇನೂ ಇಲ್ಲ ನಿಜ. ಕೆಲ ಪತ್ನಿಯರಿಗೆ ಇದರಿಂದ ಸಮಸ್ಯೆಯೂ ಇಲ್ಲ. ಆದರೆ, ಮತ್ತೆ ಕೆಲವರಿಗೆ ತನ್ನ ಬಗ್ಗೆ ಪತಿಗೆ ತೃಪ್ತಿ ಇಲ್ಲ ಎಂಬ ಸಂದೇಶ ರವಾನೆಯಾಗತೊಡಗುತ್ತದೆ. ಒಂದು ವೇಳೆ ನೀವು ಅಷ್ಟೊಂದು ಪೋರ್ನ್ ನೋಡುತ್ತೀರೆಂದು ಆಕೆಗೆ ಗೊತ್ತಿಲ್ಲವಾದರೂ, ಈ ಅಭ್ಯಾಸ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಅಧ್ಯಯನಗಳ ಪ್ರಕಾರ, ಪೋರ್ನ್ ನೋಡುವವರಲ್ಲಿ ಸೆಕ್ಸ್ ವಿಷಯದ ಫ್ಯಾಂಟಸಿಗಳು ಹೆಚ್ಚು. ಇದರಿಂದ ಪಾರ್ಟ್ನರ್ ಬಳಿ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತಾಗುತ್ತದೆ. ಪೋರ್ನ್‌ನಿಂದಾಗಿ ನಿಜಜೀವನದ ಸಂಗಾತಿಯೊಡನೆ ನಿಜವಾದ ಸಂಬಂಧ ಹೊಂದುವುದು ಕಷ್ಟ ಎನಿಸತೊಡಗುತ್ತದೆ.
5. ದೈಹಿಕವಾಗಿ ಪ್ರೀತಿ ತೋರದಿರುವುದು
ಒಂದು ಅಪ್ಪುಗೆ, ಒಂದು ಮುತ್ತು ನಿಮ್ಮ ಪ್ರೀತಿಯನ್ನು ಚೆನ್ನಾಗಿ ತಲುಪಿಸಬಲ್ಲದು. ಸಂಬಂಧ ಹಳೆಯದಾದಂತೆಲ್ಲ ಇವೆಲ್ಲ ಕಡಿಮೆಯಾಗಬಹುದು, ಆದರೆ ಅದೇ ಮುಂದುವರಿಯದಂತೆ ನೋಡಿಕೊಳ್ಳಿ. ಕೇವಲ ಲೈಂಗಿಕ ಕ್ರಿಯೆಗಾಗಿ ಮಾತ್ರ ಆಕೆಯ ಹತ್ತಿರ ಹೋಗಿ ನಂತರ ಆಕೆಯಿಂದ ದೂರ ನಿಂತರೆ ನೀವು ಆಕೆಯನ್ನು ಬಳಸಿಕೊಂಡಂತೆ ಹಾಗೂ ಆಕೆ ನಿಮಗೆ ಅನಾಕರ್ಷಕಳೆನಿಸಿದ ಭಾವ ಅವಳನ್ನು ಕಾಡುತ್ತದೆ. ಆಕೆಯನ್ನು ಕೇವಲ ಬೆಡ್‌ರೂಂನಲ್ಲಿ ಮುದ್ದಿಸುವುದಲ್ಲ, ಅದರ ಹೊರತಾಗಿಯೂ ಆಕೆಯನ್ನು ಪ್ರೀತಿಸುತ್ತೀರಿ ಎಂಬುದನ್ನು ತೋರಿಸುವುದು ಮುಖ್ಯ.