Co dependency Parenthood: ಮಕ್ಕಳನ್ನು ಕಂಟ್ರೋಲ್ ಮಾಡೋದು ಒಳ್ಳೇಯದಾ?

Suvarna News   | Asianet News
Published : Feb 10, 2022, 06:19 PM IST
Co dependency Parenthood: ಮಕ್ಕಳನ್ನು ಕಂಟ್ರೋಲ್ ಮಾಡೋದು ಒಳ್ಳೇಯದಾ?

ಸಾರಾಂಶ

ಕೋ-ಡಿಪೆಂಡೆಂಟ್ ಪಾಲಕರು ಹಲವಾರು ಅನಾರೋಗ್ಯಕರ ಪದ್ಧತಿಗಳಿಗೆ ಅಂಟಿಕೊಳ್ಳುತ್ತಾರೆ. ಅದರಿಂದಾಗಿ ಇಂದಿನ ಮಕ್ಕಳಿಗೂ ವಿಪರೀತ ಎನಿಸುವಷ್ಟು ತಲೆ ತಿನ್ನುತ್ತಾರೆ. ಈ ಪಾಲಕರಲ್ಲಿ ಒಂದು ರೀತಿಯ ಅಭದ್ರತೆ ಇರುತ್ತದೆ.  

ಮಕ್ಕಳ (Children) ಕುರಿತಾಗಿ ಅತಿಯಾಗಿ ತಲೆಕೆಡಿಸಿಕೊಳ್ಳುತ್ತೀರಾ? ಅವರ ವರ್ತನೆ, ಓದು ಇತ್ಯಾದಿಗಳ ಬಗ್ಗೆ ವಿಪರೀತ ಗಮನ ನೀಡುತ್ತೀರಾ? ಅವರು ಸ್ವಲ್ಪ ಕಷ್ಟ ಎದುರಿಸುವಂತಾದರೂ ನಿಮಗೆ ಸಂಕಟವಾಗುತ್ತದೆಯೇ? ಹಾಗಿದ್ದರೆ ನೀವು ಕೋ-ಡಿಪೆಂಡೆಂಟ್ ಪಾಲಕರು (Co dependency Parents) ಎಂದರ್ಥ. ಸಾಮಾನ್ಯವಾಗಿ, ಪಾಲಕರು ತಮ್ಮ ಹಿಂದಿನ ಸಂಬಂಧಗಳನ್ನು ಸೂಕ್ತವಾಗಿ ಪೂರೈಸಲು ಸಾಧ್ಯವಾಗದಿದ್ದಾಗ ಮಕ್ಕಳ ಮೇಲೆ ಹೆಚ್ಚಿನ ಅವಲಂಬಿತರಾಗುವ ಮೂಲಕ ಆ ಕೊರತೆಯನ್ನು ಪೂರೈಸಿಕೊಳ್ಳಲು ಯತ್ನಿಸುವಾಗ ಈ ಧೋರಣೆ ಬೆಳೆದುಬಿಡುತ್ತದೆ. ಕೋ-ಡಿಪೆಂಡೆಂಟ್ ಪಾಲಕರಲ್ಲಿ ಮಕ್ಕಳ ಕುರಿತಾಗಿ ಭಯ (Fear), ಆತಂಕದಿಂದ ಕೂಡಿದ ಬಾಂಧವ್ಯ (Relationship) ಹೊಂದಿರುತ್ತಾರೆ. ಇದನ್ನು ಬಹಳಷ್ಟು ತಜ್ಞರು ಸಂಬಂಧದ ವ್ಯಸನ (Addiction) ಎಂದೂ ಕರೆದಿದ್ದಾರೆ. ಅಂಥ ಪಾಲಕರು ಮಕ್ಕಳಿಂದ ಪ್ರತ್ಯೇಕವಾಗಿರುವಾಗ ನರ್ವಸ್ ಆಗುತ್ತಾರೆ. ನೀವೂ ಈ ಕೆಟೆಗರಿಗೆ ಸೇರಿದ ಪಾಲಕರೇ? ಒಮ್ಮೆ ಪರಿಶೀಲಿಸಿಕೊಳ್ಳಿ.

•  ಮಕ್ಕಳ ಕಷ್ಟ (Struggle) ನೋಡಲು ಹಿಂಜರಿಕೆ
ಮಕ್ಕಳ ಕಷ್ಟ ಅಥವಾ ಹೋರಾಟಗಳನ್ನು ನೋಡಲು ಯಾವ ಪಾಲಕರೂ ಇಷ್ಟಪಡುವುದಿಲ್ಲ. ಆದರೆ, ಜೀವನವೆಂದರೆ ಸವಾಲುಗಳು ಅನಿವಾರ್ಯ ಎನ್ನುವುದನ್ನು ಬಹಳಷ್ಟು ಪಾಲಕರು ಅರಿತಿರುವುದಿಲ್ಲ. ಕ್ಲಿಷ್ಟಕರ ಸಮಸ್ಯೆ ಎದುರಾದರೂ ಮಕ್ಕಳು ಅದನ್ನು ಬಗೆಹರಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಅವರನ್ನು ಬೆಳೆಸಬೇಕೇ ಹೊರತು ಅವರಿಗೆ ಸಮಸ್ಯೆಗಳೇ ಬರಬಾರದು ಎನ್ನುವ ನಿರೀಕ್ಷೆ ಸರಿಯಲ್ಲ. ಬಹಳಷ್ಟು ಪಾಲಕರು ಮಕ್ಕಳ ಸರ್ವ ಸಮಸ್ಯೆಗಳು ತಮ್ಮದೇ ಎನ್ನುವಂತೆ ವರ್ತಿಸುತ್ತಾರೆ, ಅದನ್ನು ಬಗೆಹರಿಸಲು ಮುಂದಾಗುತ್ತಾರೆ. ಅವರೇ ಎದುರಿಸುವಂತೆ ಒತ್ತಾಸೆ, ಧೈರ್ಯ (Courage) ನೀಡುವುದಿಲ್ಲ. ಇದು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ. 

ಮಕ್ಕಳ ಪರ ಮಾತನಾಡಿ, ಶಿಕ್ಷಕರನ್ನು ದೂರುವ ಪೋಷಕರಿಗೆ ಕಿವಿ ಮಾತು

•  ಮಕ್ಕಳ ಬದುಕಿನ (Life) ಪ್ರತಿ ವಿವರಣೆ ಬೇಕೆ?
ನಿಮ್ಮ ಮಗುವಿನ ಕುರಿತು ಅತಿಯಾಗಿ ಗಮನ ನೀಡುವಿರಾ? ಅವರ ಪ್ರತಿ ನಡೆನುಡಿಯನ್ನೂ ಫೋಕಸ್ (Focus) ಮಾಡುವಿರಾ? ಅವರ ಕೆರಿಯರ್ (Career) ರೂಪಿಸಿಕೊಳ್ಳುವುದು ನಿಮ್ಮದೇ ಆಯ್ಕೆಯೇ? ಅವರ ಬದುಕಿನ ಪ್ರತಿ ವಿವರವೂ ನಿಮಗೆ ಬೇಕೇ? ಇದಕ್ಕೆಲ್ಲ ನಿಮ್ಮ ಉತ್ತರ ಹೌದು ಎಂದಾದರೆ, ನಿಮ್ಮನ್ನು ಹೆಲಿಕಾಪ್ಟರ್ ಪೇರೆಂಟ್ (Helicopter Parent) ಎಂದು ಕರೆಯಬೇಕಾಗುತ್ತದೆ. ಅಂದರೆ, ನೀವು ಮಕ್ಕಳನ್ನು ಅತಿಯಾಗಿ ಗಮನಿಸುತ್ತೀರಿ.

•  ನಿಯಂತ್ರಣ(Control)ಕ್ಕೆ ತೆಗೆದುಕೊಳ್ಳುವ ತಂತ್ರವಾಗಿ ರೇಗುವುದು 
ಮಕ್ಕಳ ವರ್ತನೆ ತಿದ್ದುವುದು ಎಲ್ಲ ಪಾಲಕರ ಕರ್ತವ್ಯ. ಒಮ್ಮೊಮ್ಮೆ ಎಲ್ಲ ಪಾಲಕರೂ ರೇಗುತ್ತಾರೆ. ಆದರೆ, ನಿರಂತರವಾಗಿ ಮಕ್ಕಳ ವರ್ತನೆಯನ್ನು ಗಮನಿಸುತ್ತ ಕೋಪೋದ್ರಿಕ್ತರಾಗಿ ನಿಯಂತ್ರಣ ಕಳೆದುಕೊಳ್ಳುವುದು ಕೋ-ಡಿಪೆಂಡೆನ್ಸಿ ಪೇರೆಂಟ್ ಹುಡ್ ಲಕ್ಷಣಗಳಲ್ಲೊಂದು. ಮಕ್ಕಳ ವರ್ತನೆ ತಿದ್ದಲು ಹೆಚ್ಚಿನ ಗಮನ ನೀಡುತ್ತೀರಿ ಎಂದಾದರೆ ನಿಮ್ಮ ಭಾವನೆಗಳಿಗೆ ಮಕ್ಕಳನ್ನು ನೇರ ಕಾರಣವಾಗಿ ಪರಿಗಣಿಸುತ್ತೀರಿ. ಆಗಲೇ, “ಅಮ್ಮನಿಗೆ ಕೋಪ ತರಿಸಬೇಡ’ ಎನ್ನುವಂತಹ ಮಾತುಗಳನ್ನಾಡುವುದು.

•  ಸಾಂಪ್ರದಾಯಿಕ (Conventional) ವಿಧಾನಕ್ಕೆ ಅಂಟಿಕೊಳ್ಳುವುದು.
ಮಕ್ಕಳು ನೀಡುವ ಯಾವುದಾದರೂ ಹೊಸ ಐಡಿಯಾ, ವಿಚಾರಗಳನ್ನು ಒಪ್ಪಿಕೊಳ್ಳದೆ ನಿಮ್ಮದೇ ಹಳೆಯ ಸಾಂಪ್ರದಾಯಿಕ ನಿಲುವಿಗೆ ಅಂಟಿಕೊಳ್ಳುತ್ತೀರಾ? ಮಕ್ಕಳ ಹೊಸ ವಿಚಾರ ಭಾವನಾತ್ಮಕ ಅಗತ್ಯಕ್ಕೆ ಧಕ್ಕೆ ತರಬಹುದು ಎನ್ನುವ ಭಯ ನಿಮ್ಮಲ್ಲಿರುತ್ತದೆ ಎಂದು ವಿಶ್ಲೇಷಿಸುತ್ತಾರೆ ತಜ್ಞರು. ಮಕ್ಕಳ ಬೆಂಬಲವಾಗಿ ಪಾಲಕರು ನಿಲ್ಲಬೇಕೇ ವಿನಾ ನಿಮ್ಮ ಅಗತ್ಯಕ್ಕೆ ಮಕ್ಕಳು ಬೆಂಬಲವಾಗಬೇಕೆಂಬ ಧೋರಣೆ ಅಷ್ಟು ಉತ್ತಮವಲ್ಲ. ಅವರ ಬದುಕನ್ನು ಬಾಳಲು ಅವರಿಗೆ ಅವಕಾಶ ನೀಡಬೇಕು.

ತಪ್ಪು ಮಾಡೋ ಮಕ್ಕಳಿಗೆ ದೂಷಿಸೋ ಅಮ್ಮನಿಗ್ಯಾಕೆ ದೂಷಣೆಯ ಉಡುಗೊರೆ?

•  ಮಕ್ಕಳಲ್ಲಿ ಅಪರಾಧಿ (Guilt) ಪ್ರಜ್ಞೆ ಹುಟ್ಟಿಸುವುದು
ಮಕ್ಕಳಲ್ಲಿ ಅಪರಾಧಿ ಪ್ರಜ್ಞೆ ಹುಟ್ಟಿಸುವ ಕೆಲಸವನ್ನು ಬಹುತೇಕ ಪಾಲಕರು ಮಾಡುತ್ತಾರೆ. ನಿರ್ದಿಷ್ಟ ಕೆಲಸವನ್ನು ಅವರಿಂದ ಮಾಡಿಸಲು ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿ ಜವಾಬ್ದಾರಿ ಹೊರಿಸುವುದು ಸಾಮಾನ್ಯ. ಆದರೆ, ಸದಾಕಾಲ ಹೀಗೆಯೇ ಮಾಡುತ್ತಿರುವುದು ಒಳ್ಳೆಯದಲ್ಲ.   

•    ಬೆಳವಣಿಗೆಯ ಸಂಘರ್ಷದಲ್ಲಿ (Grown-up) ಮೂಗು ತೂರಿಸುವುದು
ಯೌವನಕ್ಕೆ ಕಾಲಿಡುವುದು ಸೇರಿದಂತೆ ಬೆಳವಣಿಗೆಯ ಸಮಯದಲ್ಲಿ ಅವರ ಎಲ್ಲ ವಿಚಾರಕ್ಕೂ ಮೂಗು ತೂರಿಸುವುದು ಬೇಡ.

•    ಮೂಡ್ (Mood) ಏರಿಳಿತ
ಒಮ್ಮೆ ಅತಿಯಾದ ಕೋಪ, ಮಗದೊಮ್ಮೆ ಭಾರೀ ಪ್ರೀತಿ ತೋರಿಸುವ ಪಾಲಕರು ನೀವಾಗಿದ್ದರೆ ನಿಮ್ಮದು ಖಂಡಿತವಾಗಿ ಕೋ-ಡಿಪೆಂಡೆನ್ಸಿ ಪೇರೆಂಟ್ ಹುಡ್. ಇದು ಅವರ ಗಮನವನ್ನು ನಿಮ್ಮೆಡೆಗೆ ಸೆಳೆಯುವ ತಂತ್ರವಷ್ಟೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌