ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳು ಇವೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ ಎನ್.ಎಸ್.ಬೋಸರಾಜು ಹಿಡಿತ ಹೊಂದಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೇ ಅಸಮಾಧಾನಗಳು ಇದ್ರೂ ಎನ್.ಎಸ್.ಬೋಸರಾಜು ಕಳೆದ 32 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ನಂಬಿಕೊಂಡು ಬಂದಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಮೇ.27) : ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳು ಇವೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ ಎನ್.ಎಸ್.ಬೋಸರಾಜು ಹಿಡಿತ ಹೊಂದಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೇ ಅಸಮಾಧಾನಗಳು ಇದ್ರೂ ಎನ್.ಎಸ್.ಬೋಸರಾಜು ಕಳೆದ 32 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ನಂಬಿಕೊಂಡು ಬಂದಿದ್ದಾರೆ.
undefined
ಎನ್.ಎಸ್. ಬೋಸರಾಜು(NS Bosaraju) ಪಕ್ಷ ಸಂಘಟನೆ ಮತ್ತು ಪಕ್ಷನಿಷ್ಠೆಯನ್ನ ಗುರುತಿಸಿ ಈಗ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ನೀಡಿದ್ದಾರೆ. 2023ರಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರ(Raichur assembly constituency)ದಿಂದ ಚುನಾವಣೆ ಸ್ಪರ್ಧೆ ಮಾಡಲು ಆಸಕ್ತಿ ತೋರಿಸಿದ್ರು. ಟಿಕೆಟ್ ಪಡೆಯಲು ನಾನಾ ಕಸರತ್ತು ಸಹ ನಡೆಸಿದರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯದ ನೆಪ ಹೇಳಿ ಎನ್. ಎಸ್. ಬೋಸರಾಜು ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರು. ಇದೇ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ(BV Nayak) ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಆಗಿ ಮಾನ್ವಿಯಿಂದ ಸ್ಪರ್ಧೆ ಮಾಡಿದ್ರು. \
ರಾಯಚೂರು: ಗಡಿ ಭಾಗದ ಅಭಿವೃದ್ಧಿಗೆ ಖರ್ಗೆ ಕೊಡುಗೆ ಅಪಾರ, ದದ್ದಲ್
ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಎನ್.ಎಸ್. ಬೋಸರಾಜು ಬದಲು ಮುಸ್ಲಿಂ ಅಭ್ಯರ್ಥಿ ಮಹಮ್ಮದ್ ಶಾಲಂಗೆ ಟಿಕೆಟ್ ಘೋಷಣೆ ಮಾಡಿದ್ರು. ಅಷ್ಟೇ ಅಲ್ಲದೇ ಮಾನ್ವಿ ಮತ್ತು ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಭರವಸೆ ಕೂಡ ಎನ್.ಎಸ್. ಬೋಸರಾಜು ಹೆಗಲಿಗೆ ಹಾಕಿದ್ರು. ಕಾಂಗ್ರೆಸ್ ಹೈಕಮಾಂಡ್ ನೀಡಿದ ಜವಾಬ್ದಾರಿ ವಹಿಕೊಂಡ ಎನ್.ಎಸ್. ಬೋಸರಾಜು ಮತ್ತು ಮಗ ರವಿ ಬೋಸರಾಜು(Ravi bosaraju) ಎರಡು ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ನಿಂತು ಪಕ್ಷ ಸಂಘಟನೆ ಮಾಡಿದ್ರು.
ಮಾನ್ವಿ ಕ್ಷೇತ್ರ(Manvi assembly constituency)ದಲ್ಲಿ ಭಾರೀ ಹಿಡಿತ ಹೊಂದಿರುವ ಎನ್.ಎಸ್.ಬೋಸರಾಜು ತಮ್ಮ ಬೆಂಬಲಿಗರಾದ ಹಂಪಯ್ಯ ನಾಯಕ(G Hampayya nayak MLA)ಗೆ ಟಿಕೆಟ್ ಕೊಡಿಸಿ ಹಂಪಯ್ಯ ನಾಯಕ ಗೆಲುವಿಗಾಗಿ ಎನ್.ಎಸ್.ಬೋಸರಾಜು ಪ್ರಚಾರ ನಡೆಸಿ ಮಾನ್ವಿಯಿಂದ ಹಂಪಯ್ಯ ನಾಯಕಗೆ ಗೆಲ್ಲಿಸಿದ್ರು. ಇತ್ತ ರಾಯಚೂರು ನಗರದಲ್ಲಿ ಮಹಮ್ಮದ್ ಶಾಲಂ ಗೆಲುವಿಗಾಗಿ ರವಿ ಬೋಸರಾಜು ಶ್ರಮಿಸಿದರು. ಆದ್ರೆ ಕೆಲವೇ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶಾಲಂ ಸೋಲು ಅನುಭವಿಸಿದ್ರು.
ಯಾರು ಈ ಎನ್.ಎಸ್. ಬೋಸರಾಜು?
ನದ್ಮಿಪಲ್ಲಿ ಸುಭಾಶಚಂದ್ರ ಬೋಸರಾಜು. ಮೂಲತಃ ಆಂಧ್ರದಿಂದ ರಾಯಚೂರು ಜಿಲ್ಲೆಗೆ ವಲಸೆ ಬಂದವರು. ವಲಸೆ ಬಂದ ಎನ್.ಎಸ್.ಬೋಸರಾಜು ಕುಟುಂಬವೂ ಹಾಲಿನ ವ್ಯಾಪಾರ ಮಾಡಿಕೊಂಡು ಮಾನ್ವಿ ಪಟ್ಟಣದಲ್ಲಿ ಹೆಸರುವಾಸಿಯಾಗಿದ್ರು. ಡಿಪ್ಲೊಮಾ ಆಟೋಮೊಬೈಲ್ ಮಾಡಿದ ಎನ್.ಎಸ್.ಬೋಸರಾಜು ಸ್ನೇಹಜೀವಿ ಆಗಿದ್ರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President mallikarjun kharge) ಮತ್ತು ಧರಂಸಿಂಗ್(Dharmasingh) ಅವರ ಪರಿಚಯದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದ್ರು.
ಎನ್.ಎಸ್. ಬೋಸರಾಜು ರಾಜಕೀಯ ಜೀವನ:
ಎನ್.ಎಸ್.ಬೋಸರಾಜು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ್ರು. ಆಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಧರಂಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸ್ನೇಹ ಹೊಂದಿದ್ದ ಎನ್.ಎಸ್. ಬೋಸರಾಜು ಅವರ ಪಕ್ಷ ಸಂಘಟನೆ ಮತ್ತು ಬುದ್ಧಿವಂತಿಕೆ ಗಮನಿಸಿದ ನಾಯಕರು 1972ರಲ್ಲಿ ಎನ್.ಎಸ್. ಬೋಸರಾಜುಗೆ ರಾಯಚೂರು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ರು. ಯೂತ್ ಕಾಂಗ್ರೆಸ್ ಲೀಡರ್ ಆಗಿ ಗುರುತಿಸಿಕೊಂಡ ಎನ್.ಎಸ್.ಬೋಸರಾಜು ಮುಂದೆ 1976ರಲ್ಲಿ ಮಾನ್ವಿ ಕಾಂಗ್ರೆಸ್ ತಾಲೂಕು ಕಮಿಟಿ ಅಧ್ಯಕ್ಷರಾಗಿ ನೇಮಕಗೊಂಡರು.
1980ರಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸೆಕ್ರೆಟರಿ ಆಗಿದ್ರು. ಇದೇ ವೇಳೆ ಅಂದ್ರೆ 1985ರಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿ 3,700 ಮತಗಳು ಪಡೆದು ಸೋಲು ಅನುಭವಿಸಿದರು. ಸೋಲು ಅನುಭವಿಸಿದ್ರು ಸಹ ಪಕ್ಷ ಸಂಘಟನೆ ಮಾಡುತ್ತಾ 1991ರಲ್ಲಿ ರಾಯಚೂರು- ಕೊಪ್ಪಳ ಜಿಲ್ಲೆಗಳಿಗೆ ಜನರಲ್ ಸೆಕ್ರೆಟರಿ ಆಗಿ ಕಾರ್ಯ ನಿರ್ವಹಿಸಿದರು. ಮತ್ತೆ 1999ರಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಮೊದಲ ಬಾರಿ ಆಯ್ಕೆಗೊಂಡರು.
ಶಾಸಕರಾದ ಬಳಿಕವೂ ಸಹ 2002ರವರೆಗೆ ರಾಯಚೂರು- ಕೊಪ್ಪಳ ಜಿಲ್ಲೆಯ ಜನರಲ್ ಸೆಕ್ರೆಟರಿ ಆಗಿ ಪಕ್ಷ ಸಂಘಟನೆ ಮಾಡಿದ್ರು. ಅದು ಆದ ಬಳಿಕ 2004ರಲ್ಲಿ ಮತ್ತೆ ಮಾನ್ವಿಯ ಶಾಸಕರಾಗಿ ಆಯ್ಕೆಯಾದರು. 2009ರಿಂದ 2017ರವರೆಗೆ ಕೆಪಿಸಿಸಿ ಆಡಳಿತ ಕಚೇರಿಯ ಜನರಲ್ ಸೆಕ್ರೆಟರಿ ಆಗಿ ಪಕ್ಷಗಾಗಿ ದುಡಿದರು. 2014ರಲ್ಲಿ ಎಂಎಲ್ ಸಿ ಸಹ ಆದ್ರು. 2017-18ರವರೆಗೆ ಕೆಪಿಸಿಸಿ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ರು. 2018ರಲ್ಲಿ ಎಐಸಿಸಿ ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೇ ಎನ್.ಎಸ್.ಬೋಸರಾಜು ಮಾಜಿ ಸಿಎಂ ಬಂಗಾರಪ್ಪನವರ ಅವಧಿ ವೇಳೆ ಹಾಗೂ ವೀರಪ್ಪ ಮೊಯ್ಲಿ ಅವಧಿಯಲ್ಲಿ TBP ಕಾಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇನ್ನೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವಧಿಯಲ್ಲಿ HKDB ಅಧ್ಯಕ್ಷರಾಗಿ, ಮಾಜಿ ಸಿಎಂ ಧರಂಸಿಂಗ್ ಅವಧಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ ಅನುಭವ ಎನ್.ಎಸ್.ಬೋಸರಾಜುಗೆ ಇದೆ. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಕುಟುಂಬದ ಜೊತೆಗೆ ಉತ್ತಮ ಓಡಾಟ ಹೊಂದಿದ್ದಾರೆ. ಇತ್ತೀಚೆಗೆ ಅಷ್ಟೇ ನಡೆದ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಉದ್ದಕ್ಕೂ ಎನ್.ಎಸ್.ಬೋಸರಾಜು ಪುತ್ರ ರವಿ ಬೋಸರಾಜು ಜವಾಬ್ದಾರಿವಹಿಸಿಕೊಂಡು ಪಕ್ಷ ಸಂಘಟನೆ ಮಾಡಿದ್ರು.
ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ: 4 ಶಾಸಕರ ಪೈಕಿ ಯಾರಿಗೆ ಸಿಗಲಿದೆ ಪಟ್ಟ, ಚರ್ಚೆ ಜೋರು !
ಎನ್.ಎಸ್.ಬೋಸರಾಜುಗೆ ಯಾಕೆ ಮಂತ್ರಿ ಸ್ಥಾನ ಕೊಟ್ಟಿದೆ
ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದ್ರೂ ನಾಲ್ಕು ಜನ ಶಾಸಕರನ್ನು ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಶಾಸಕ ಅಲ್ಲದಿದ್ದರೂ ಎನ್.ಎಸ್.ಬೋಸರಾಜುಗೆ ಮಂತ್ರಿ ಮಾಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆದ್ರೆ ಪಕ್ಷದ ಹಿತದೃಷ್ಟಿಯಿಂದ ಇದು ಒಂದು ಕಡೆ ಲಾಭವೇ ಎನ್ನಬಹುದು. ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಈಗ ಒಡೆದ ಮನೆಯ ಮೂರು ಬಾಗಿಲು ಎಂಬುವಂತೆ ಆಗಿದೆ. ಪಕ್ಷ ಮತ್ತು ಕಾರ್ಯಕರ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರಬಹುದು ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಶಾಸಕರಾಗಿ ಆಯ್ಕೆ ಆಗದಿದ್ದರೂ ಕಾಂಗ್ರೆಸ್ ಹೈಕಮಾಂಡ್ ಎನ್.ಎಸ್.ಬೋಸರಾಜುಗೆ ಮಂತ್ರಿ ಎಂದು ಘೋಷಣೆ ಮಾಡಿದೆ. ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ನ ಭದ್ರಬುನಾದಿ ಇದೆ. ಆದ್ರೆ ಇತ್ತೀಚಿನ ಕೆಲ ರಾಜಕೀಯ ಬದಲಾವಣೆಯಿಂದ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ.
ಸಚಿವರಾದ ಎನ್.ಎಸ್.ಬೋಸರಾಜು ಮುಂದೆ ಇರುವ ಸವಾಲುಗಳೇನು??