ಇನ್ನು ಮುಂದೆ ಅಮೆರಿಕಾದಲ್ಲಿ ಕೆಲಸ ಮಾಡಬೇಕಾದರೆ ಮದುವೆಯಾಗುವಂತಿಲ್ಲ !

First Published Apr 26, 2018, 8:17 PM IST
Highlights

ಟ್ರಂಪ್ ಆಡಳಿತ ಜಾರಿಗೊಳಿಸಲು ಹೊಡಟಿರುವ ಕಾನೂನಿನಿಂದ 1 ಲಕ್ಷ ಭಾರತೀಯ ಕಾರ್ಮಿಕರ ಪತ್ನಿಯರು ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಟ್ರಂಪ್  'ಅಮೆರಿಕದಲ್ಲಿ ಖರೀದಿಸಿ, ಅಮೆರಿಕಾದವರನ್ನು ನೇಮಿಸಿಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಏರಿದ್ದರು. 

ಮುಂಬೈ(ಏ.26):  ಅಮೆರಿಕಾದಲ್ಲಿ ಕೆಲಸ ಮಾಡುವವರು ಇನ್ನು ಮುಂದೆ ಮದುವೆಯಾಗುವಂತಿಲ್ಲ. ಇಲ್ಲವೆ ಪತ್ನಿಯನ್ನು ಬಿಟ್ಟು ಅಲ್ಲಿಗೆ ಹಾರಬೇಕು.  ಇದೇನಪ್ಪ ಹೀಗೆ ಅಂತೀರಾ ಯುಎಸ್ಎ ಸರ್ಕಾರ ಹೆಚ್-1ಬಿ ಕಾರ್ಮಿಕರ ಪತ್ನಿಯರಿಗೆ ವಿಸಾ ನಿರಾಕರಿಸಿರುವ ಕಾರಣ ಇನ್ನು ಮುಂದೆ ಈ ಪರಿಸ್ಥಿತಿ ಉದ್ಭವಿಸಬಹುದು.
ಹೆಚ್-1ಬಿ ವಿಸಾ ಸ್ಥಗಿತಗೊಳಿಸಿರುವುದರಿಂದ ಕೆಲಸಗಾರರ ಪತ್ನಿಯರು  ಅಮೆರಿಕಾದಲ್ಲಿ ಕೆಲಸ ನಿರ್ವಹಿಸಲು ಅಥವಾ ಇನ್ಯಾವುದೇ ಸ್ವತಃ ವ್ಯವಹಾರ ಮಾಡುವುದು ಸಾಧ್ಯವಾಗುವುದಿಲ್ಲ.
ಟ್ರಂಪ್ ಆಡಳಿತ ಜಾರಿಗೊಳಿಸಲು ಹೊಡಟಿರುವ ಕಾನೂನಿನಿಂದ 1 ಲಕ್ಷ ಭಾರತೀಯ ಕಾರ್ಮಿಕರ ಪತ್ನಿಯರು ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಟ್ರಂಪ್  'ಅಮೆರಿಕದಲ್ಲಿ ಖರೀದಿಸಿ, ಅಮೆರಿಕಾದವರನ್ನು ನೇಮಿಸಿಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಏರಿದ್ದರು. ಮಾಜಿ ಅಧ್ಯಕ್ಷ ಒಬಾಮಾ ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ಟ್ರಂಪ್ ಹಿಂತೆಗೆದುಕೊಳ್ಳುತ್ತಾ ಬಂದಿದ್ದಾರೆ.
ಹೆಚ್ 1ಬಿ ವಿಸಾ ಕಾನೂನಿನಿಂದ ಹೆಚ್ಚು ತೊಂದರೆ ಅನುಭವಿಸುವವರು ಭಾರತದ ಐಟಿ ಉದ್ಯೋಗಿಗಳು. ಈಗಾಗಲೇ ಈ ಕಾನೂನಿಗೆ ಶೀಘ್ರದಲ್ಲಿಯೇ ಅಂಕಿತಾ ಬೀಳಲಿದೆ.  ಇದರಿಂದ ಹೆಚ್ 1ಬಿ ವಿಸಾ ಕಾರ್ಮಿಕರ ಪತ್ನಿಯರು ಹೆಚ್ ೪ ವಿಸಾ ಪಡೆದುಕೊಳ್ಳಬೇಕು. ಆದರೆ ಈಗ ಅದು ಸಾಧ್ಯವಾಗುವುದಿಲ್ಲ.

click me!