ಬಿಹಾರದಲ್ಲೇಕೆ ಮೆದುಳು ಜ್ವರ ಇನ್ನೂ ಇದೆ?

By Web DeskFirst Published Jun 28, 2019, 1:37 PM IST
Highlights

ಉತ್ತರದ ಕೆಲ ರಾಜ್ಯಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಕಾಡುವ ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌ (ಎಇಎಸ್‌) ಅಥವಾ ಮೆದುಳು ಜ್ವರಕ್ಕೆ ಈ ಬಾರಿ ಬಿಹಾರವೊಂದರಲ್ಲೇ 150ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆಯ ಅವ್ಯವಸ್ಥೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರು ‘ಇಂಡಿಯಾ ಟುಡೇ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಉತ್ತರದ ಕೆಲ ರಾಜ್ಯಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಕಾಡುವ ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌ (ಎಇಎಸ್‌) ಅಥವಾ ಮೆದುಳು ಜ್ವರಕ್ಕೆ ಈ ಬಾರಿ ಬಿಹಾರವೊಂದರಲ್ಲೇ 150ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆಯ ಅವ್ಯವಸ್ಥೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರು ‘ಇಂಡಿಯಾ ಟುಡೇ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಬಿಹಾರದಲ್ಲೇಕೆ ಮೆದುಳು ಜ್ವರ ಇನ್ನೂ ಇದೆ?

ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮನ್ನು ಜಗತ್ತಿನ ಯಾವುದೇ ಭಾಗದಲ್ಲೂ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಬಿಹಾರದ ಭಾಗದಲ್ಲೀಗ ಅದು ಹೆಚ್ಚಾಗಿ ಕಂಡುಬರುತ್ತಿದೆ. ಅದನ್ನು ನಿರ್ಮೂಲನೆ ಮಾಡಲು ಈಗಿರುವ ಆರೋಗ್ಯ ಸೌಲಭ್ಯಗಳು ಮತ್ತಷ್ಟುಹೆಚ್ಚಾಗಬೇಕು. ರೋಗಕ್ಕೆ ತುತ್ತಾದ ಎಲ್ಲಾ ಮಕ್ಕಳಿಗೆ 100% ಪ್ರತಿರೋಧಕ ಔಷಧಿಗಳನ್ನು ನೀಡಬೇಕು.

ಬಿಹಾರದಲ್ಲಿ ಏನಾಗುತ್ತಿದೆ ಎಂಬುದು ನಿಮ್ಮ ಗಮನಕ್ಕೂ ಬಂದಿದೆ. ಅಲ್ಲಿನ 150ಕ್ಕೂ ಹೆಚ್ಚಿನ ಮಕ್ಕಳು ಜಪಾನೀಸ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌ಗೆ ಬಲಿಯಾಗಿದ್ದಾರೆ. ಈ ಸಂಖ್ಯೆ ಏರುತ್ತಲೇ ಇದೆ. ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ತಲೆತಗ್ಗಿಸುವ ಸಂಗತಿ. ನೀವೇನು ಹೇಳುತ್ತೀರಿ?

ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟುಬದಲಾವಣೆಗಳಾಗಬೇಕಾದ ಅಗತ್ಯವಿದೆ. ಕಳೆದೈದು ವರ್ಷದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟುಪರಿವರ್ತನೆಯಾಗಿದೆ.

2014ರಲ್ಲಿ ನೀವು ಬಿಹಾರಕ್ಕೆ ಭೇಟಿ ನೀಡಿದ್ದಾಗ 100 ಹಾಸಿಗೆಗಳ ಮಕ್ಕಳ ಆಸ್ಪತ್ರೆ ಹಾಗೂ ಐಸಿಯುವನ್ನು ಮುಜಾಫರ್‌ಪುರದಲ್ಲಿ ಸ್ಥಾಪಿಸಲಾಗುತ್ತದೆ ಎಂದಿದ್ದಿರಿ. ಅಲ್ಲದೆ ಈಗಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಿರಿ. ಆದರೆ ವಾಸ್ತವವಾಗಿ ಅಲ್ಲಿ ಏನೂ ಬದಲಾಗಿಲ್ಲ. 5 ವರ್ಷದ ಹಿಂದೆ ನೀವು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಏಕೆ?

ನೀವು ಹೇಳಿದ ಅಂಕಿಅಂಶಗಳು ಸರಿಯಿಲ್ಲ. ಮೊದಲನೆಯದಾಗಿ ಶ್ರೀಕೃಷ್ಣ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವೊಂದು ತಲೆ ಎತ್ತುತ್ತಿದೆ. ಈ ವರ್ಷದ ಅಂತ್ಯದೊಳಗೆ ಅದರ ಉದ್ಘಾಟನೆಯಾಗಲಿದೆ.

ಮುಜಾಫರ್‌ಪುರ ಜನರಿಗೆ ಈ ಆಸ್ಪತ್ರೆ ಸೇವೆ ದೊರಕಲಿದೆ. ನಾನೇ ಅಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ್ದೇನೆ. ಮಕ್ಕಳ ಐಸಿಯುವನ್ನು ಪ್ರತ್ಯೇಕವಾಗಿ ನಿರ್ಮಿಸುವಂತೆ ಸಲಹೆ ನೀಡಿದ್ದೇನೆ. ಕೇಂದ್ರದ ಸಹಾಯದಲ್ಲಿ 10 ಹಾಸಿಗೆಗಳ ಪೀಡಿಯಾಟ್ರಿಕ್‌ ಐಸಿಯು ಸಿದ್ಧವಾಗುತ್ತಿವೆ.

ಈ ಮೂಲಕ ಉತ್ತಮ ಚಿಕಿತ್ಸೆ ನೀಡಬಹುದಾಗಿದೆ. ಹಾಗಾಗಿ ಶ್ರೀ ಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮೇಲೆ ಯಾವುದೇ ಅನವಶ್ಯಕ ಹೊರೆ ಬೀಳುವುದ್ಲಿ. ಮಲ್ಟಿಡಿಸಿಪ್ಲಿನರಿ ರೀಸಚ್‌ರ್‍ ಸೆಂಟರ್‌ಗಳು ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ಬಿಹಾರದಲ್ಲಿ 5 ವೈರಾಲಜಿಕಲ್‌ ಲ್ಯಾಬ್‌ಗಳು ವಿವಿಧ ಜಿಲ್ಲೆಗಳಲ್ಲಿ ಸ್ಥಾಪನೆಯಾಗುತ್ತಿವೆ. ಒಂದು ಪಟನಾದ ಏಮ್ಸ್‌ ಮತ್ತೊಂದು ಮುಜಾಫರ್‌ಪುರದಲ್ಲಿ ಸ್ಥಾಪನೆಯಾಗುತ್ತಿವೆ.

ಇವೆಲ್ಲಾ ಇನ್ನೂ ನಿರ್ಮಾಣ ಹಂತದಲ್ಲಿವೆ. ಆದರೆ ಬಿಹಾರದ ಸದ್ಯದ ಪರಿಸ್ಥಿತಿ ನೋಡಿ. ಒಬ್ಬ ಡಾಕ್ಟರ್‌ 2,900 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಡಾಕ್ಟರ್‌ ಮತ್ತು ರೋಗಿಗಳ ಅನುಪಾತ ಅತ್ಯಂತ ಕಳಪೆ ಮಟ್ಟದಲ್ಲಿದೆ.

ನಾನು ಒಪ್ಪಿಕೊಳ್ಳುತ್ತೇನೆ. ಆದಾಗ್ಯೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸಾಕಷ್ಟುಕ್ರಮ ಕೈಗೊಳ್ಳಲಾಗುತ್ತಿದೆ. ಬಜೆಟ್‌ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹಣ ಮೀಸಲಿಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. 5 ಇದ್ದ ಏಮ್ಸ್‌ಗಳು 21ಕ್ಕೆ ಏರಿಕೆಯಾಗಿವೆ. 100 ಜಿಲ್ಲಾ ಆಸ್ಪತ್ರೆಗಳು ಮೆಡಿಕಲ್‌ ಕಾಲೇಜುಗಳಾಗಿ ಪರಿವರ್ತನೆಯಾಗಿವೆ. 1000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಇವುಗಳ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಹಲವಾರು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ತಲೆ ಎತ್ತುತ್ತಿವೆ.

2015 ರಲ್ಲಿ ಈ ರೀತಿಯ ರೋಗಳಿಂದ ಮಕ್ಕಳು ಇನ್ನುಮುಂದೆ ಸರಣಿ ಸಾವನ್ನಪ್ಪುವುದಿಲ್ಲ ಎಂಬ ಭರವಸೆ ನೀಡಿದ್ದಿರಿ. 4 ವರ್ಷ ಕಳೆದರೂ ಎನ್ಸೆಫಲಿಟೀಸ್‌ ನಿಯಂತ್ರಣಕ್ಕೆ ಬೇಕಾದ ಕನಿಷ್ಠ ಸೌಕರ‍್ಯವೂ ಇಲ್ಲವಲ್ಲ. ಈಗಿನ ಪರಿಸ್ಥಿತಿಗೆ ನಿಮ್ಮ ಬಳಿ ಉತ್ತರವಿದೆಯೇ?

ಈಗಿರುವ ಆರೋಗ್ಯ ಸೌಲಭ್ಯಗಳು ಮತ್ತಷ್ಟುಹೆಚ್ಚಾಗಬೇಕು. ರೋಗಕ್ಕೆ ತುತ್ತಾದ ಎಲ್ಲಾ ಮಕ್ಕಳಿಗೆ 100% ಪ್ರತಿರೋಧಕ ಔಷಧಿಗಳನ್ನು ನೀಡಬೇಕು. ಅದನ್ನು ಒಪ್ಪಿಕೊಳ್ಳುತ್ತೇನೆ. ಎನ್ಸೆಫಲಿಟೀಸ್‌ಗೆ ತುತ್ತಾದ ಎಲ್ಲ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಆದರೆ ಭಾರತದ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಬದಲಾವಣೆಗಳಾಗಬೇಕಾದ ಅಗತ್ಯವಿದೆ. ಆಯುಷ್ಮಾನ್‌ ಭಾರತ ಯೋಜನೆಯ ಪ್ರಾಥಮಿಕ ಪರಿಣಾಮವನ್ನು ನೀವಿಲ್ಲಿ ಕಾಣುತ್ತಿದ್ದೀರಿ. ಇದರ ಜೊತೆಗೆ ಪ್ರಾಥಮಿಕ ಹಂತದಲ್ಲಿ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ. ಅದರಲ್ಲಿ 18,000 ಈಗಾಗಲೇ ಸ್ಥಾಪನೆಯಾಗಿವೆ.

ನಮ್ಮ ದೇಶದಲ್ಲಿ ಜಿಡಿಪಿಯ 1.5% ಹಣವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ. ಹಾಗಾಗಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗೆ ತಕ್ಕಂತ ಬಂಡವಾಳವೂ ಹೂಡಿಕೆಯಾಗುತ್ತಿಲ್ಲ, ಆ ಕುರಿತ ಬದ್ಧತೆಯೂ ಕಾಣುತ್ತಿಲ್ಲ ಅಲ್ಲವೇ?

ನೀವು ಹೇಳುತ್ತಿರುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಹೆಲ್ತ್‌ ಬಜೆಟ್‌ ಅನ್ನು 2.5%ಗೆ ಏರಿಸುವ ಯೋಚನೆ ಇದೆ. ಒಬ್ಬ ಡಾಕ್ಟರ್‌ ಆಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚೆಚ್ಚು ಹಣ ಮೀಸಲಿಡಬೇಕೆಂದು ನಾನು ಬಯಸುತ್ತೇನೆ.

ಆರೋಗ್ಯಕ್ಕೂ ಅಪೌಷ್ಟಿಕತೆಗೆ ನೇರ ಸಂಬಂಧವಿದೆ. ಈ ಅಪೌಷ್ಟಿಕತೆಯೇ ಎನ್ಸೆಫಲಿಟೀಸ್‌ನಂತಹ ಕಾಯಿಲೆಗೆ ಕಾರಣ ಎನ್ನಲಾಗುತ್ತಿದೆ. ಅಲ್ಲಿನ ಮಕ್ಕಳು ರಾತ್ರಿ ಊಟ ಮಾಡದೇ ಮಲಗುತ್ತಿದ್ದರು ಎಂದು ವರದಿಗಳು ಹೇಳುತ್ತಿವೆ. ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿವೆ. ನಾವಿವತ್ತು ‘ನ್ಯೂ ಇಂಡಿಯಾ’ ಬಗ್ಗೆ ಮಾತನಾಡುತ್ತಿದ್ದೇವೆ. ಆದರೂ ತಿನ್ನಲು ಅನ್ನವಿಲ್ಲದೆ ಮಕ್ಕಳು ಸಾಯುತ್ತಿದ್ದಾರಲ್ಲ?

2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿವಿಧ ಕ್ಷೇತ್ರಗಳ ಸುಧಾರಣೆಗೆ ಪ್ರಯತ್ನಪಟ್ಟಿದೆ. ಈಗಾಗಲೇ ಅಂತಹ ಕಾರ‍್ಯಗಳು ನಡೆದಿವೆ ಮತ್ತು ನಡೆಯುತ್ತಿವೆ. ನ್ಯೂ ಇಂಡಿಯಾ ಪರಿಕಲ್ಪನೆಯು ಮೊಳಕೆಯೊಡೆಯುತ್ತಿದ್ದು, 2022ರ ಒಳಗಾಗಿ ದೇಶದಲ್ಲಿ ಸಾಕಷ್ಟುಬದಲಾವಣೆಗಳು ಕಂಡುಬರುತ್ತವೆ. ಸ್ವತಃ ಪ್ರಧಾನಮಂತ್ರಿಗಳೇ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಅದ್ಕಕಾಗಿಯೇ ಆಯುಷ್ಮಾನ್‌ ಭಾರತ ಯೋಜನೆ ಜಾರಿಗೆ ತಂದಿದ್ದಾರೆ.

ಮುಜಾಫರ್‌ಪುರ ಘಟನೆ ಬಗ್ಗೆ ನಿತೀಶ್‌ ಕುಮಾರ್‌, ಸುಶೀಲ್‌ ಮೋದಿ ಎಲ್ಲರೂ ಮೌನವಾಗಿದ್ದಾರೆ. 2013ರಲ್ಲಿ ಬಿಹಾರದಲ್ಲಿ 143, 2014ರಲ್ಲಿ 355, 2015ರಲ್ಲಿ 90, 2016ರಲ್ಲಿ 102, 2017ರಲ್ಲಿ 54, 2018ರಲ್ಲಿ 33, ಈಗ 150ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದಕ್ಕೆ ಹೊಣೆ ಯಾರು?

ಈ ರೋಗವನ್ನು ಜಗತ್ತಿನ ಯಾವುದೇ ಭಾಗದಲ್ಲೂ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಇದು ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಂತ ಇಲ್ಲಿ ಮಾತ್ರ ಕಂಡುಬರುತ್ತಿದೆ ಎಂದಲ್ಲ. ದೇಶದ ಅನೇಕ ಕಡೆಗಳ, ಜಗತ್ತಿನ ಅನೇಕ ದೇಶಗಳ ಮಕ್ಕಳು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ 2 ವರ್ಷದ ಹಿಂದೆ ಈ ಕಾಯಿಲೆಗೆ ತುತ್ತಾಗಿ ಅನೇಕ ಮಕ್ಕಳು ಸಾವನ್ನಪ್ಪುತ್ತಿದ್ದರು. ಆದರೆ ಆ ಸಂಖ್ಯೆ ಇಳಿಮುಖವಾಗಿತ್ತಿದೆ. ಆದರೆ ಮುಜಾಫರ್‌ಪುರದಲ್ಲಿ ಎನ್ಸೆಫಲಿಟೀಸ್‌ ಐತಿಹಾಸಿಕವಾಗಿದೆ. ಆದರೂ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ?

ನಮ್ಮ ಕೈಲಾಗುವಷ್ಟುಪ್ರಯತ್ನ ಪಡುತ್ತಲೇ ಇದ್ದೇವೆ. ನನ್ನ ಜಂಟಿ ಕಾರ‍್ಯದರ್ಶಿಗಳಲ್ಲಿ ಒಬ್ಬರನ್ನು ಮುಜಾಫರ್‌ಪುರಕ್ಕೆ ಕಳುಹಿಸಿದ್ದೇನೆ. ಸಾಧ್ಯವಾದಷ್ಟುಮಕ್ಕಳ ತಜ್ಞರು, ವೈರಾಲಜಿಸ್ಟ್‌, ಸೊಂಕು ಶಾಸ್ತ್ರಜ್ಞರನ್ನು ಕಳುಹಿಸಿದ್ದೇವೆ. ಈ ಇಲಾಖೆಗೆ ನಾನು ಹೊಸಬ. ಆದರೂ ಮುಜಾಫರ್‌ಪುರಕ್ಕೆ ಅತ್ಯುನ್ನತ ಟೀಮ್‌ ಅನ್ನು ಕಳುಹಿಸಿದ್ದೇನೆ. ದಿನನಿತ್ಯ ಅಲ್ಲಿನ ಸ್ಥಿತಿಗತಿ ಬಗ್ಗೆ ಅವರಿಂದಲೇ ನೇರವಾಗಿ ವರದಿ ಪಡೆಯುತ್ತಿದ್ದೇನೆ.

ಬಿಹಾರದಲ್ಲಿ ಒಂದು ಬೆಡ್‌ನಲ್ಲಿ 4-5 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪರಿಸ್ಥಿತಿ ಮುಂದಿನ ಒಂದು ವರ್ಷದಲ್ಲಿ ಸುಧಾರಿಸುತ್ತದೆಯೇ?

ಡಾ. ಹರ್ಷವರ್ಧನ್‌ 2019ರಲ್ಲಿ ನೀಡಿದ ಭರವಸೆಗಳೆಲ್ಲವೂ ಈಡೇರುವಂತೆ ನೋಡಿಕೊಳ್ಳುತ್ತೇನೆ ಎಂಬ ಗ್ಯಾರಂಟಿ ಕೊಡುತ್ತೇನೆ.

- ಸಂದರ್ಶನ

ಡಾ. ಹರ್ಷವರ್ಧನ್‌ , ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

click me!