ಮೋದಿ ವಿರುದ್ಧ ದೇವೇಗೌಡರು ವೋಟ್ ಹಾಕಿದ್ರಾ?

By Web DeskFirst Published Aug 7, 2018, 11:46 AM IST
Highlights

ಕೆಲ ಕರ್ನಾಟಕದ ಬಿಜೆಪಿ ಸಂಸದರು ಮತ್ತು ದಿಲ್ಲಿ ಹಿಂದಿ ಪತ್ರಕರ್ತರ ಪ್ರಕಾರ ದೇವೇಗೌಡರು ವೋಟ್ ಹಾಕುವ ಗೊಡವೆಗೇ ಹೋಗಿಲ್ಲ. 

ಮೋದಿ ಸರ್ಕಾರದ ವಿರುದಟಛಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಪೂರ್ತಿ ದಿನ ಚರ್ಚೆ ಕೇಳುತ್ತಾ ಸದನದಲ್ಲಿ ಕುಳಿತಿದ್ದದೂ ಒಂದಕ್ಷರ ಮಾತನಾಡದ ದೇವೇಗೌಡರು, ಕೊನೆಗೆ ಮೋದಿ ವಿರುದ್ಧ ವೋಟ್ ಹಾಕಿದರೋ ಇಲ್ಲವೋ ಎಂಬುದು ಮಾತ್ರ ಸ್ಪಷ್ಟವಾಗುತ್ತಿಲ್ಲ. ಕೆಲ ಕರ್ನಾಟಕದ ಬಿಜೆಪಿ ಸಂಸದರು ಮತ್ತು ದಿಲ್ಲಿ ಹಿಂದಿ ಪತ್ರಕರ್ತರ ಪ್ರಕಾರ ದೇವೇಗೌಡರು ವೋಟ್ ಹಾಕುವ ಗೊಡವೆಗೇ ಹೋಗಿಲ್ಲ.

ಆದರೆ ಇದೇ ಪ್ರಶ್ನೆ ದೇವೇಗೌಡರಿಗೆ ಕೇಳಿದರೆ ಸಿಟ್ಟಾಗುವ ಗೌಡರು, ‘ಅಯ್ಯೋ ರಾಮ, ಒಬ್ಬ ಮಾಜಿ ಪ್ರಧಾನಿ 12 ಗಂಟೆ ಸತತವಾಗಿ ಸದನದಲ್ಲಿ ಕುಳಿತರೂ ಸ್ಪೀಕರ್ ಕೇವಲ ಒಂದು ನಿಮಿಷ ಮಾತನಾಡಬಹುದು ಎನ್ನುತ್ತಾರೆ. ಯಾಕೆ ಗೊಡವೆ ಅಂತ ಮಾತನಾಡಲೇ ಇಲ್ಲ ಬಿಡಿ ಬೇಡ’ ಎನ್ನುತ್ತಾರೆ. ಆದರೆ ವೋಟ್ ಹಾಕಿದರೋ ಇಲ್ಲವೋ ಎಂಬ ಬಗ್ಗೆ ಮಾತ್ರ ಗೌಡರು ಪಿಕ್ಚರ್ ಕ್ಲಿಯರ್ ಮಾಡೋಲ್ಲ. ಅಂದ ಹಾಗೆ ದೇವೇಗೌಡರು ವೋಟ್ ಹಾಕಿದ್ದರೂ ಕೂಡ ಫಲಿತಾಂಶ ಬೇರೆ ಏನು ಆಗುತ್ತಿರಲಿಲ್ಲ. ಆದರೆ ಗೌಡರ ಕುಟುಂಬದ ಚಂಚಲತೆಯ ಕಾರಣದಿಂದ ಕುತೂಹಲದ ಪ್ರಶ್ನೆ ಅಷ್ಟೇ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

click me!