ಸಖತ್‌ ವೈರಲ್‌ ಆಯ್ತು ಕಡಲೆಕಾಯಿ ವ್ಯಾಪಾರಿಯ ಕಚ್ಚಾ ಬಾದಾಮ್‌ ಹಾಡು

By Suvarna NewsFirst Published Jan 9, 2022, 11:45 PM IST
Highlights
  • ಕಚ್ಚಾ ಬಾದಾಮ್‌ ಹಾಡು ಹಾಡಿದ್ಯಾರು ಗೊತ್ತಾ...
  • ವೈರಲ್‌ ಆಯ್ತು ಆಕರ್ಷಕ ಸ್ವರ
  • ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಈತ

ಕೋಲ್ಕತ್ತಾ(ಜ.9): ನೀವು ಈಗಾಗಲೇ ಎಲ್ಲೆಡೆ ವೈರಲ್‌ ಆಗಿರುವ ಈ ಹಾಡನ್ನು ಕೇಳಿರಬಹುದು.  ಅದೇ ಈ ಈ ಕಚ್ಚಾ ಬಾದಾಮ್‌ ಹಾಡು, ಯಾರ ವಾಟ್ಸಾಪ್‌ ಸ್ಟೇಟಸ್‌ ನೋಡಲಿ ಇನ್ಸ್ಟಾಗ್ರಾಮ್‌  ಅಥವಾ ಯೂಟ್ಯೂಬ್‌ ರೀಲ್ಸ್‌ಗಳೇ ಆಗಲಿ ಎಲ್ಲಿ ನೋಡಿದರಲ್ಲಿ ಈ ಹಾಡು ಕಾಣ ಸಿಗುತ್ತಿದೆ. ವಿಡಿಯೋ ಬೇರೆ ಬೇರೆಯದಾಗಿದ್ದರೂ ಹಾಡು ಮಾತ್ರ ಇದೇ. ಆದರೆ ಈ ಹಾಡು ಯಾರು ಹೇಳಿದ್ದು ಎಲ್ಲಿಂದ ಬಂತು ಎಂಬ ಕುತೂಹಲ ಇರಬಹುದು ಅಲ್ಲವೇ ಆ ಬಗ್ಗೆ ಇಲ್ಲಿದೇ ನೋಡಿ ಡಿಟೇಲ್ಸ್‌...

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಬೇಕೆಂದೇ ಕೆಲವರು ಏನೆನೋ ಮಾಡಿ ವಿಡಿಯೋಗಳನ್ನು ಹರಿಯ ಬಿಡುವುದುಂಟು. ಆದರೆ ಏನೂ ಮಾಡದೆಯೇ ಕೆಲವರು ಫೇಮಸ್‌ ಆಗಿದ್ದಾರೆ. ಅಂತಹವರಲ್ಲಿ ಈ ಕಚ್ಚಾ ಬಾದಾಮ್‌ ಹಾಡು ಹಾಡಿದ ಕಡಲೆಕಾಯಿ ವ್ಯಾಪಾರಿ ಕೂಡ ಒಬ್ಬ. ಪಶ್ಚಿಮ ಬಂಗಾಳದ ಭೂಬನ್ ಬಡ್ಯಾಕರ್ (Bhuban Badyakar) ಹೆಸರಿನ ಈ ಕಡಲೆಕಾಯಿ ವ್ಯಾಪಾರಿ ತನ್ನ ದೈನಂದಿನ ಹೊಟ್ಟೆಪಾಡಿಗಾಗಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದು, ಕಡಲೆಕಾಯಿ ಮಾರಿ ಹೋಗುವ ಸಲುವಾಗಿ ಈ ಹಾಡನ್ನು ಹಾಡಿ ಆತ ಜನರನ್ನು ಸೆಳೆಯುತ್ತಿದ್ದ. ಈ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ಕಡಲೆಕಾಯಿಗಳನ್ನು ಮಾರಾಟ ಮಾಡಲು ಹಳ್ಳಿಗಳಿಗೆ ಬರಿಗಾಲಿನಲ್ಲಿ ಸೈಕಲ್‌ನಲ್ಲಿ ಭೂಬನ್ ಬಡ್ಯಾಕರ್ ಹೋಗುತ್ತಾರೆ. ಆದರೆ ಅವರ ಆ ಹಾಡಿನ ಸ್ವರ ಎಲ್ಲರನ್ನು ಸೆಳೆಯುತ್ತದೆ. ಭೂಬನ್  ಅವರ ಈ  ಆಕರ್ಷಕ ಹಾಡು ಅವರನ್ನುಆನ್‌ಲೈನ್‌ನಲ್ಲಿ ಹಿಟ್ ಮಾಡಿದೆ. ವೀಡಿಯೋದಲ್ಲಿ, ಭುವನ್ ತನ್ನಿಂದ ಕಡಲೆಕಾಯಿ  ಖರೀದಿಸಲು ಬರುವ ಗ್ರಾಹಕರನ್ನು ಆಕರ್ಷಿಸಲು 'ಬದಮ್ ಬದಮ್ ಕಚಾ ಬದಮ್' ಎಂದು ಹಾಡುತ್ತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿ ತೋರಿಸುವಂತೆ ಆತ ತನ್ನ ಸೈಕಲ್‌ನಲ್ಲಿ ಬಿಳಿಚೀಲವನ್ನು ಇಟ್ಟುಕೊಂಡಿದ್ದು, ಜೊತೆಗ ತೂಗುವ ತ್ರಾಸ್‌ ಅನ್ನು ಕೂಡ ಅದರಲ್ಲಿಟ್ಟುಕೊಂಡು ಸೈಕಲ್‌ ತಳ್ಳುತ್ತಾ ಬರಿಗಾಲಿನಲ್ಲಿ ತೆರಳುತ್ತಾನೆ.  ಸುತ್ತಮುತ್ತಲಿನ ಜನರು ಬಹುಶಃ ಖರೀದಿಸಲು ಮತ್ತು ಅವರ ಹಾಡುಗಳನ್ನು ಸಂತೋಷದಿಂದ ಕೇಳಲು ಕಾಯುತ್ತಿರುವ ಹಳ್ಳಿಯು ಆಗಮಿಸುತ್ತಿದ್ದಂತೆ ಅವನು ನಿಲ್ಲುತ್ತಾನೆ. ನಂತರ, 'ಬದಮ್ ಬಾದಮ್... ಹಾಡನ್ನು ಹಾಡುತ್ತಾ ಮಾರಾಟ ಮಾಡಲು ಪ್ರಾರಂಭಿಸುತ್ತಾನೆ. 

ಯೂಟ್ಯೂಬ್ ಚಾನೆಲ್ ಎಕ್ತಾರಾ ( Ektara) ಪ್ರಕಾರ, ಭುಬನ್ ಬಿರ್ಭುಮ್ (Birbhum) ಜಿಲ್ಲೆಯ ದುಬ್ರಾಜ್‌ಪುರ ಬ್ಲಾಕ್‌ (Dubrajpur block) ನಲ್ಲಿರುವ ಕುರಲ್ಜುರಿ (Kuraljuri) ಗ್ರಾಮದ ನಿವಾಸಿ. ಕಡಲೆಕಾಯಿ ಮಾರುವ ಸಲುವಾಗಿ ಅವರು ನೆರೆಯ ಜಾರ್ಖಂಡ್ ರಾಜ್ಯಕ್ಕೂ ಭೇಟಿ ನೀಡುತ್ತಾರೆ. ಕಡಲೆಕಾಯಿ ಮಾರುವುದರ ಜೊತೆಗೆ ಜನರನ್ನು ರಂಜಿಸಲು ಹಾಡುತ್ತಾರೆ. ಪ್ರತಿದಿನ ಬೇರೆ ಬೇರೆ ಹಳ್ಳಿಗಳಿಗೆ ಕಡಲೆಕಾಯಿ ಮಾರಲು ಹೋಗುತ್ತೇನೆ. ಈ ಕಡಲೆಕಾಯಿ ಮಾರುವ ಮೂಲಕ ದಿನಕ್ಕೆ 200-250 ರೂಪಾಯಿ ಗಳಿಸುತ್ತೇನೆ, ಕಳೆದ 10 ವರ್ಷಗಳಿಂದ ಕಡಲೆಕಾಯಿ ಮಾರಾಟ ಮಾಡುತ್ತಿದ್ದೇನೆ, ಮಾರಲು ಹೋದಾಗ ಹಳ್ಳಿಯಲ್ಲಿ ಈ ಹಾಡನ್ನು ಹಾಡುತ್ತೇನೆ.  ಎಂದು ಭುಬನ್ ಯುಟ್ಯೂಬ್ ಚಾನೆಲ್‌ಗೆ ತಿಳಿಸಿದರು.

Manike mage hithe; ಮನಿಕಾ ಮಗೆ ಹಿತೆ ಹಿಂದಿ ವರ್ಶನ್ ಹಾಡಿದ ಮಾಜಿ ಸಿಎಂ ಫಡ್ನವಿಸ್ ಪತ್ನಿ, ವಿಡಿಯೋ ವೈರಲ್!

ಕಳೆದ ತಿಂಗಳು ತಮ್ಮ ಹಾಡನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಅವರು ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದರು. ನಾನು ಹಳ್ಳಿಯ ಒಬ್ಬ ಸರಳ ವ್ಯಕ್ತಿ. ಹಾಡಿನ ಶ್ರೇಯಸ್ಸು ಮತ್ತು ಲಾಭವನ್ನು ಪಡೆಯಲು ಪೊಲೀಸರು ನನಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು. ಅಲ್ಲದೇ ನನಗೆ ಪೊಲೀಸರ ಬಳಿ ತೆರಳಿದ್ದಕ್ಕೆ ಅನೇಕರು ಎಚ್ಚರಿಕೆ ನೀಡಿದ್ದರು. ತಮ್ಮ ಹಾಡನ್ನು ರೆಕಾರ್ಡ್ ಮಾಡಲು ಹಲವಾರು ಜನರು ತನ್ನ ಹತ್ತಿರ ಬರುತ್ತಿರುವುದಕ್ಕೆ ಭಯವಾಗುತ್ತಿದೆ kಎಂದೂ ಅವರು ಹೇಳಿದ್ದಾರೆ. 

ತಾಯಿ ಆನೆಯೊಂದು ಮರಿಯಾನೆಗೆ ತಿನಿಸುವ ಸುಂದರ ವಿಡಿಯೋ...

ಒಟ್ಟಿನಲ್ಲಿ ಈತ ಈಗಲೂ ಕಡಲೆಕಾಯಿ ಮಾರಿಯೇ ಬದುಕುತ್ತಿದ್ದಾನೆ. ಆದರೆ ಈತನ ಹಾಡನ್ನು ರೆಕಾರ್ಡ್‌ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟವರು, ಅದಕ್ಕೆ ರಿಮಿಕ್ಸ್‌ ಮಾಡಿದವರು ಸೇರಿದಂತೆ ಈ ಸೋಶಿಯಲ್‌ ಮೀಡಿಯಾ ಕಲೆಯನ್ನು ಲೀಲಾಜಾಲವಾಗಿಸಿಕೊಂಡವರು ದುಡ್ಡು ಮಾಡಿಕೊಂಡಿದ್ದಾರೆ. ಆದರೆ ಈತನಿಗೆ ಮಾತ್ರ ಕಡಲೆಕಾಯಿ ಮಾರಾಟವೇ ಗತಿಯಾಗಿದೆ. 

click me!