ಬ್ರಾ ಧರಿಸಲು ಒಪ್ಪದ ಯುವತಿಗೆ ಸಿಕ್ಕ ‘ಬಹುಮಾನ’

By Web DeskFirst Published Sep 3, 2018, 9:37 PM IST
Highlights

ಬ್ರಾ ಧರಿಸಲು ಒಪ್ಪದ ಮಹಿಳೆಯೊಬ್ಬರನ್ನು ಕೆಲಸದಿಂದ ತೆಗೆದು  ಹಾಕಲಾಗಿದೆ. ಎಲ್ಲಿ ಅಂತೀರಾ? ಈ ಸುದ್ದಿ ಓದಿ ಗೊತ್ತಾಗುತ್ತೆ.

ಬ್ರಾ ಧರಿಸಲು ಒಪ್ಪದ ಮಹಿಳೆ ಕೆಲಸ ಕೆನಡಾದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಮಹಿಳೆ ಇದೀಗ ಮಾನವ ಹಕ್ಕುಗಳ ಆಯೋಗದ ಮುಂದೆ ಹೋಗಿದ್ದಾರೆ.

ಬ್ರಿಟಿಷ್ ಕೋಲಂಬಿಯಾದ 25 ವರ್ಷದ ಕ್ರಿಸ್ಟೀನಾ ಸ್ಖೆಲ್  ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಹೇಳಿದ ಅಪ್ ಡೇಟೆಡ್ ಡ್ರೇಸ್ ಧರಿಸಲು ತಿರಸ್ಕಾರ ಮಾಡಿದ್ದಕೆ ಕೆಲಸ ಕಳೆದುಕೊಳ್ಳುವ ಶಿಕ್ಷೆಗೆ ಗುರಿಯಾಗಿದ್ದಾರೆ.

ಮೇಲಂಗಿಯ ಒಳಗೆ ಬ್ರಾ ಧರಿಸುವುದು ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಮಹಿಳೆ ಎರಡು ವರ್ಷಗಳಿಂದ ಬ್ರಾ ಧರಿಸದೇ ಕೆಲಸಕ್ಕೆ ಬರುತ್ತಿದ್ದರು. ಈ ಸಂಗತಿ ಗೊತ್ತಾದ ಮೇಲೆ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದು ಲಿಂಗ ತಾರತಮ್ಯದ ಇನ್ನೊಂದು ಮುಖವಾಗಿದೆ. ಪುರುಷರಿಗೆ ಇಲ್ಲದ ಕಾನೂನು ನಮಗೇಕೆ? ಎಂದು ಪ್ರಶ್ನೆ ಮಾಡಿರುವ ಮಹಿಳೆ ಆಯೋಗದ ಬಾಗಿಲು ತಟ್ಟಿದ್ದಾರೆ. ಗ್ರಾಹಕರೊಬ್ಬರು ಆಕೆಯ ಕುರಿತು ಮಾಡಿದ ಕೆಲ ಅಶ್ಲೀಲ ಕಮೆಂಟ್ ಗಳ ನಂತರ ಮ್ಯಾನೇಜರ್ ಜತೆ ಜಗಳವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಇನ್ನುಳಿದ ಸಿಬ್ಬಂದಿ ಹೇಳಿದ್ದಾರೆ.

click me!