ರಾಜೀವ್‌ ಗಾಂಧಿಗೆ ಡ್ರೈವರ್ ಆಗಿದ್ದ ಕಮಲ್‌ನಾಥ್ ಈಗ ಮ.ಪ್ರದೇಶ ಸಿಎಂ!

By Web DeskFirst Published Dec 22, 2018, 9:48 AM IST
Highlights

ಸದ್ಯ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಕಮಲನಾಥ್ ಹಿಂದೆ ರಾಜೀವ್ ಗಾಂಧಿ ಅವರ ಕಾರು ಚಾಲಕರಾಗಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಈ ಸುದ್ದಿ? 

ಬೆಂಗಳೂರು (ಡಿ. 22): ಸದ್ಯ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಕಮಲನಾಥ್ ಹಿಂದೆ ರಾಜೀವ್ ಗಾಂಧಿ ಅವರ ಕಾರು ಚಾಲಕರಾಗಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ರಾಜೀವ್ ಗಾಂಧಿಯೊಂದಿಗೆ ಕುಳಿತು ಕಮಲ್ ನಾಥ್ ಡ್ರೈವ್ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ರಾಜೀವ್ ಗಾಂಧಿ ಕಾರು ಚಾಲಕರಾಗಿದ್ದ ಕಮಲ್‌ನಾಥ್ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.

ಇನ್ನೂ ಎಷ್ಟು ಒಳ್ಳೆಯ ದಿನಗಳು ಬೇಕು. ಸ್ನೇಹಿತರೇ ಈ ಫೋಟೋ ಅಪರೂಪದಲ್ಲಿ ಅಪರೂಪದ್ದು’ ಎಂದು ಒಕ್ಕಣೆ ಬರೆದು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಅನಂತರ ಟ್ವೀಟರ್, ಫೇಸ್‌ಬುಕ್‌ನಲ್ಲಿ ಫೋಟೋ ವೈರಲ್ ಆಗಿದೆ. ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ದೃಢವಾಗಿದೆ. ಕಮಲ್ ನಾಥ್ ಆಗಸ್ಟ್ 20 ರಂದು ರಾಜೀವ್ ಗಾಂಧಿ ಹುಟ್ಟಿದ ಹಬ್ಬದಂದು ಈ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಈ ಬಗ್ಗೆ ಹಿರಿಯ ಪತ್ರಕರ್ತ ನಿಲಾಂಜನ್ ಮುಖ್ಯೋಪಾಧ್ಯಾಯ ಅವರು ಕ್ವಿಂಟ್‌ಗೆ ಸ್ಪಷ್ಟೀಕರಣ ನೀಡಿದ್ದು, ‘ಕಮಲ್ ನಾಥ್ ರಾಜೀವ್ ಗಾಂಧಿಗೆ ಕಾರು ಚಾಲಕರಾಗಿದ್ದರು ಎಂದು ನಾನೆಂದೂ ಕೇಳಿಲ್ಲ.

ಅವರು ಸಂಜಯ್‌ಗಾಂಧಿಯ ರಾಜಕೀಯ ಸಹಾಯಕ ಮತ್ತು ಅವರಿಗೆ ಬಹಳ ವಿಧೇಯರಾಗಿದ್ದರು. ಸಂಜಯ್ ಮರಣದ ಬಳಿಕ ರಾಜೀವ್ ಗಾಂಧಿಯವರೊಂದಿಗೆ ಸ್ನೇಹಪರವಾಗಿದ್ದರು’ಎಂದಿದ್ದಾರೆ. ಕಮಲನಾಥ್ ಮತ್ತು ಸಂಜಯ್ ಗಾಂಧಿ ಶಾಲೆಯಲ್ಲಿ ಓದುತ್ತಿರುವಾಗಿನಿಂದ ಸ್ನೇಹಿತರಾಗಿದ್ದರು. ಅನಂತರ 1968 ರಲ್ಲಿ ನಾಥ್ ಯುವ ಕಾಂಗ್ರೆಸ್ ಸದಸ್ಯರಾದರು. ಅನಂತರ ಚುನಾವಣೆಯಲ್ಲಿ ಸ್ಪರ್ಧಿಸಿ 9 ಬಾರಿಗೆ ಪಾರ್ಲಿಮೆಂಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಕೇಂದ್ರ ಮಂತ್ರಿಯಾಗಿಯೂ ಹಲವು ಬಾರಿ ಕಾರ್ಯನಿರ್ವಹಿಸಿದ್ದಾರೆ.

-ವೈರಲ್ ಚೆಕ್ 

click me!