ಝೀರೋ ಟ್ರಾಫಿಕ್: ಸಿಎಂಗಿರೋದು ನಂಗ್ಯಾಕಿಲ್ಲ ಅಂತಾ ಸುತ್ತೋಲೆಯನ್ನೇ ಹೊರಡಿಸಿದ ಪರಂ!

Sep 27, 2018, 1:42 PM IST

ಬೆಂಗಳೂರು(ಸೆ.27): ಕಳೆದ ಎರಡು ದಿನಗಳಿಂದ ಡಿಸಿಎಂ ಜಿ. ಪರಮೇಶ್ವರ್ ಅವರ ಝೀರೋ ಟ್ರಾಫಿಕ್ ಸೌಲಭ್ಯ ಕುರಿತೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಭಾರೀ ಮಳೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರೂ, ಡಿಸಿಎಂ ಝೀರೋ ಟ್ರಾಫಿಕ್ ಸೌಲಭ್ಯ ಬಳಸಿ ಸಂಚರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಪರಂ, ರಾಜ್ಯದ ಮುಖ್ಯಮಂತ್ರಿಗಳಿಗೆ ಇರುವಂತೆ ಉಪ ಮುಖ್ಯಮಂತ್ರಿಗಳಿಗೂ ಎಲ್ಲಾ ಶಿಷ್ಟಾಚಾರ ಪಾಲನೆ ಆಗಬೇಕು ಎಂದು ಸುತ್ತೋಲೆ ಹೊರಡಿಸಿಕೊಂಡಿದ್ದಾರೆ. ಸಿಎಂ ಗೆ ಇರುವ ಎಲ್ಲಾ ಶಿಷ್ಟಾಚಾರವನ್ನು ಡಿಸಿಎಂ ಗೂ ಶಿಷ್ಟಾಚಾರ ಪಾಲನೆ ಕುರಿತು ಡಿಪಿಎಆರ್ (ರಾಜ್ಯ ಶಿಷ್ಟಾಚಾರ ವಿಭಾಗ)ದಿಂದ ಮಹತ್ವದ ಸುತ್ತೋಲೆ ಪ್ರಕಟವಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..