ಬಿಷಪ್‌ ರೇಪ್‌ ವಿರುದ್ಧ ಬೀದಿಗಿಳಿದಿದ್ದ ಸನ್ಯಾಸಿನಿಗೆ ವ್ಯಾಟಿಕನ್‌ನಲ್ಲೂ ಸೋಲು!

By Web DeskFirst Published Oct 17, 2019, 9:03 AM IST
Highlights

ಬಿಷಪ್‌ ರೇಪ್‌ ವಿರುದ್ಧ ಬೀದಿಗಿಳಿದಿದ್ದ ಸನ್ಯಾಸಿನಿಗೆ ವ್ಯಾಟಿಕನ್‌ನಲ್ಲೂ ಸೋಲು| ಜಲಂಧರ್‌ ಮಾಜಿ ಬಿಷಪ್‌ ಲೈಂಗಿಕ ದೌರ್ಜನ್ಯ ಖಂಡಿಸಿ ಸಂತ್ರಸ್ತೆ ಪರ ಹೋರಾಟಕ್ಕೆ ಧುಮುಕಿದ್ದ ಕ್ರೈಸ್ತ ಸನ್ಯಾಸಿಸಿ ಸಿಸ್ಟರ್‌ ಲೂಸಿ ಕಾಲಪ್ಪುರ

ಕೊಚ್ಚಿ[ಅ.17]: ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಂಜಾಬ್‌ನ ಜಲಂಧರ್‌ ಚರ್ಚ್‌ನ ಮಾಜಿ ಬಿಷಪ್‌ ವಿರುದ್ಧದ ಹೋರಾಟಕ್ಕೆ ಧುಮುಕಿ ಉಚ್ಚಾಟನೆ ಶಿಕ್ಷೆಗೆ ಗುರಿಯಾದ ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯೊಬ್ಬರಿಗೆ ವ್ಯಾಟಿಕನ್‌ ಸಿಟಿ ಚರ್ಚ್‌ನಲ್ಲಿಯೂ ನ್ಯಾಯ ಸಿಕ್ಕಿಲ್ಲ.

ಜಲಂಧರ್‌ ಮಾಜಿ ಬಿಷಪ್‌ ಲೈಂಗಿಕ ದೌರ್ಜನ್ಯ ಖಂಡಿಸಿ ಸಂತ್ರಸ್ತೆ ಪರ ಹೋರಾಟಕ್ಕೆ ಧುಮುಕಿದ್ದ ಕ್ರೈಸ್ತ ಸನ್ಯಾಸಿಸಿ ಸಿಸ್ಟರ್‌ ಲೂಸಿ ಕಾಲಪ್ಪುರ ಎಂಬುವರೇ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದವರು. ಸಿಸ್ಟರ್‌ ಲೂಸಿ ಅವರು ಪದ್ಯಗಳನ್ನು ಪ್ರಕಟಿಸಿ ಮತ್ತು ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಈ ಮೂಲಕ ಅವರು ಫ್ರಾನ್ಸಿಸ್ಕನ್‌ ಕ್ಲಾರಿಸ್ಟ್‌ ಕಾಂಗ್ರಿಗೇಷನ್ಸ್‌(ಎಫ್‌ಸಿಸಿ)(ಕ್ರೈಸ್ತರ ಧಾರ್ಮಿಕ ಸಭೆ) ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಲ್ಲದೆ, ಅವರನ್ನು ಉಚ್ಚಾಟನೆ ಸಹ ಮಾಡಲಾಗಿತ್ತು. ಇದರ ವಿರುದ್ಧವಾಗಿ ಲೂಸಿ ಅವರು ವ್ಯಾಟಿಕನ್‌ ಸಿಟಿ ಚಚ್‌ರ್‍ ಮೊರೆ ಹೋಗಿದ್ದರು. ಆದರೆ, ವ್ಯಾಟಿಕನ್‌ ಸಿಟಿ ಚಚ್‌ರ್‍ ಸಹ ಲೂಸಿ ಅವರ ಮನವಿಯನ್ನು ತಿರಸ್ಕರಿಸಿದೆ. ಆದಾಗ್ಯೂ, ಸನ್ಯಾಸಿನಿ ಲೂಸಿ ಅವರಿಗೆ ಮತ್ತೊಂದು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

click me!