ನಾನೂ ನಗರ ನಕ್ಸಲ್‌ ; ಗಿರೀಶ್ ಕಾರ್ನಾಡ್ ವಿರುದ್ಧ ದೂರು

By Web DeskFirst Published Sep 7, 2018, 1:21 PM IST
Highlights

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ‘ಚಿಂತಕರನ್ನು’ ಬಂಧಿಸಲಾಗಿದೆ. ಅವರನ್ನು ನಗರ ನಕ್ಸಲರು ಎಂದು ಕೆಲವರು ಬ್ರ್ಯಾಂಡ್‌ ಮಾಡಿದ್ದಕ್ಕೆ ಪ್ರತಿಯಾಗಿ ‘ನಾನೂ ನಗರ ನಕ್ಸಲ್‌’ ಎಂದು ಎಡಪಂಥೀಯರು ಹೋರಾಟ ಆರಂಭಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

ಬೆಂಗಳೂರು (ಸೆ. 07): ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ‘ಚಿಂತಕರನ್ನು’ ಬಂಧಿಸಲಾಗಿದೆ. ಅವರನ್ನು ನಗರ ನಕ್ಸಲರು ಎಂದು ಕೆಲವರು ಬ್ರ್ಯಾಂಡ್‌ ಮಾಡಿದ್ದಕ್ಕೆ ಪ್ರತಿಯಾಗಿ ‘ನಾನೂ ನಗರ ನಕ್ಸಲ್‌’ ಎಂದು ಎಡಪಂಥೀಯರು ಹೋರಾಟ ಆರಂಭಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

ಗೌರಿ ಹತ್ಯೆ ನಡೆದು ಒಂದು ವರ್ಷ ತುಂಬಿದ ಸಂದರ್ಭದಲ್ಲಿ ‘ನಾನು ಕೂಡ ನಗರ ನಕ್ಸಲ್" ಎಂದು ಸಾಹಿತಿ ಗಿರೀಶ್ ಕಾರ್ನಾಡ್ ನಾಮಫಲಕ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. 

"

ನಕ್ಸಲ್ ಸಂಘಟನೆ ನಿಷೇಧಿತ ಸಂಘಟನೆ.  ಹೀಗಾಗಿ ಇವರು ಬಹಿರಂಗವಾಗಿ ನಾನು ನಕ್ಸಲ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.  ಹಾಗಾಗಿ ಗಿರೀಶ್ ಕಾರ್ನಾಡ್ ರನ್ನು  ಬಂಧಿಸುವಂತೆ  ಹೈಕೋರ್ಟ್ ವಕೀಲ ಅಮೃತೇಶ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಮಹಾರಾಷ್ಟ್ರ ಕಬೀರ್ ಕಾಲಾ ಮಂಚ್ ಸಮಾವೇಶದಲ್ಲಿ ಕಾರ್ನಾಡ್ ಪಾಲ್ಗೊಂಡಿದ್ದರು. ಬೀರ್ ಕಾಲಾ ಮಂಚ್ ಕೂಡ ನಿಷೇಧಿತ ಸಂಘಟನೆ.  ಸಿಪಿಐ ಮಾವೋಯಿಸ್ಟ್ ಬೆಂಬಲಿಗ ಸಂಘಟನೆಯಾಗಿದೆ. ನಿಷೇಧಿತ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಶ್ಯಕತೆ ಏನು?  ಈ ಸಂಬಂಧ ಕೂಡ ತನಿಖೆ ನಡೆಸಬೇಕೆಂದು ಅಮೃತೇಶ್ ಆಗ್ರಹಿಸಿದ್ದಾರೆ. 

click me!