ಹೊಸ ಆಲೋಚನೆ,  ಹಾಸನದಲ್ಲಿ ಕಾವೇರಿ ಜಲವಿವಾದ ಬಗೆಹರಿಸಿದ ಗಡ್ಕರಿ!

By Web DeskFirst Published Dec 1, 2018, 10:54 PM IST
Highlights

ಕರ್ನಾಟಕ ತಮಿಳುನಾಡಿನ ಜಲವಿವಾದಕ್ಕೆ ಪರಿಹಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಮಾರ್ಗ ಹೇಳಿದ್ದಾರೆ. ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗಡ್ಕರಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು.

ಹಾಸನ[ಡಿ.01]   ‌ಕರ್ನಾಟಕ ತಮಿಳುನಾಡಿನ ಜಲವಿವಾದಕ್ಕೆ ಪರಿಹಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಮಾರ್ಗ  ಒಂದನ್ನು ಹೇಳಿದ್ದಾರೆ.  ಕೇಂದ್ರ‌ ಸರ್ಕಾರದ ಸಂಪೂರ್ಣ ಅನುದಾನದಲ್ಲಿ ಬೃಹತ್‌ ಜಲಾಶಯ ನಿರ್ಮಾಣ ಮಾಡುವ ಮಾತನ್ನಾಡಿದ್ದಾರೆ.

ಆಂಧ್ರ ಪ್ರದೇಶದ‌ ಪೋಲಾವರಂ ಬಳಿ 60 ಸಾವಿರ ಕೋಟಿ  ರೂ. ವೆಚ್ಚದ ಡ್ಯಾಂ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು  ಹಾಸನದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ.

ಕರ್ನಾಟಕ ದ ಜನ‌‌ ನೀರಿನೊಂದಿಗೆ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದಾರೆ. ನಾನು ಜಲ ಸಂಪನ್ಮೂಲ ಸಚಿವನಾಗಿ ಹೇಳುತ್ತಿದ್ದೇನೆ. ಗೋದಾವರಿಯ 11 ಸಾವಿರ ಟಿಎಂಸಿ ನೀರು ಸಮುದ್ರ ಸೇರುತ್ತಿದೆ.  ಆದರೆ ಇತ್ತ ಎಂದರೆ ಕರ್ನಾಟಕ ತಮಿಳುನಾಡು ಪ್ರತಿವರ್ಷ ಕೇವಲ 60 ರಿಂದ 70 ಟಿಎಂ ನೀರಿಗಾಗಿ ಹೋರಾಟ ಮಾಡುತ್ತಿವೆ. 

ಪೋಲಾವರಂ ಬಳಿ ಡ್ಯಾಂ ಕಟ್ಟಿದರೆ ಸಮಸ್ಯೆ ಪರಿಹಾರ ಸಿಗಲಿದೆ. ಈ ಬಗ್ಗೆ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಅಂತಿಮ‌ ಹಂತದಲ್ಲಿದೆ. ಪೋಲಾವರಂ ಹಿನ್ನೀರಿನ ನೀರನ್ನ‌ ಕೃಷ್ಣಾ ಗೆ ಹರಿಸೋದು,ಕೃಷ್ಣಾದಿಂದ ಪೆನ್ನಾನದಿ,ಪೆನ್ನಾ ದಿಂದ ಕಾವೇರಿಗೆ ಹರಿಸೋದು. ಇದೊಂದು ಮಹತ್ವದ ಮತ್ತು ಐತಿಹಾಸಿಕ ಯೋಜನೆಯಾಗುತ್ತದೆ. ಹೀಗೆ ಮಾಡೋದ್ರಿಂದ 450 ಟಿಎಂಸಿ ನೀರು ಸಿಗಲಿದೆ,ಎರಡೂ ರಾಜ್ಯಗಳ ಜಲ‌ ವಿವಾದ ಬಗೆ ಹರಿಯಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

I congratulate Former PM H D Devegowda ji, CM HD Kumaraswami, Preetam Gowda MLA BJP. Because of their request and continuous followup, today we are doing foundation of more than 2000 crore NH projects in Hasan. pic.twitter.com/EGY1Wk5yc0

— Nitin Gadkari (@nitin_gadkari)
click me!