enba 2018 ಅವಾರ್ಡ್ಸ್: ರೇಸ್‌ನಲ್ಲಿ ಕೊಡಗು ಪ್ರವಾಹ ವರದಿಗಾರಿಕೆ

Dec 26, 2018, 2:53 PM IST

ಮಾಧ್ಯಮ ಲೋಕದಲ್ಲಿ ಸುದ್ದಿ ವಾಹಿನಿಗಳ ಪಾತ್ರ ಮಹತ್ವದ್ದು.  ಉತ್ತಮ ಸುದ್ದಿವಾಹಿನಿಗಳನ್ನು ಗುರುತಿಸಿ, ಬೇರೆ ಬೇರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತು  ಸಾಧಕರಿಗೆ ಗೌರವಿಸುವ ಕೆಲಸವನ್ನು ಪ್ರತಿಷ್ಠಿತ enba ಸಂಸ್ಥೆ ಪ್ರತಿವರ್ಷ ಮಾಡುತ್ತಾ ಬಂದಿದೆ. ಈ ಬಾರಿಯೂ ಸುವರ್ಣನ್ಯೂಸ್  ವಿವಿಧ ವಿಭಾಗದಲ್ಲಿ ಎಂಟ್ರಿ ನೀಡಿದೆ.

ಕಳೆದ ಆಗಸ್ಟ್‌ನಲ್ಲಿ ಕೊಡಗನ್ನು ಭೀಕರವಾಗಿ ಕಾಡಿದ್ದ ನೆರೆ ಪರಿಸ್ಥಿತಿ ಬಗ್ಗೆ ನಿರಂತರವಾಗಿ ಸುದ್ದಿ ಹಾಗೂ ಪರಿಹಾರ ಕಾರ್ಯದ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದ ಸುವರ್ಣನ್ಯೂಸ್‌ನ ‘ಕೊಡಗು ಪ್ರವಾಹ ವರದಿಗಾರಿಕೆಯು ಬೆಸ್ಟ್ ನ್ಯೂಸ್ ಕವರೇಜ್ ವಿಭಾಗದಲ್ಲಿದೆ.