ಸುಪ್ರೀಂ ಜಡ್ಜ್ ವರ್ಷದ ವೇತನ ವಕೀಲರ 1 ದಿನದ ಸಂಭಾವನೆಗೆ ಸಮ

By Web DeskFirst Published Oct 4, 2018, 11:20 AM IST
Highlights

ವಕೀಲರು ತಮ್ಮ ಕಕ್ಷೀದಾರರಿಂದ ಸಂಭಾವನೆ ಪಡೆಯುವುದಕ್ಕೆ ಯಾವುದೇ ಮಿತಿ ಇಲ್ಲ. ಸುಪ್ರೀಂಕೋರ್ಟ್‌ನ ಕೆಲವು ಹಿರಿಯ ವಕೀಲರು ದಿನವೊಂದಕ್ಕೆ 50 ಲಕ್ಷದ ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ನ್ಯಾಯಾಧೀಶರು ಸರ್ಕಾರಿ ವೇತನ ಪಡೆಯುವುದರಿಂದ ಅವರಿಗಿಂತ ಕಡಿಮೆ ವೇತನ ಇವರು ಪಡೆಯುತ್ತಾರೆ. 

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶರು ವರ್ಷವಿಡೀ ಪಡೆಯುವ ವೇತನ ವಕೀಲರು ಒಂದೇ ದಿನದ ಸಂಭಾವನೆಗ ಸಮ ಅಂದರೆ ನಂಬುತ್ತೀರಾ. ಹೌದು, ಸುಪ್ರೀಕೋರ್ಟ್‌ ನ್ಯಾಯಾಧೀಶರ ವೇತವನ್ನು ಕಳೆದ ವರ್ಷ 1 ಲಕ್ಷ ರು.ನಿಂದ 2.8 ಲಕ್ಷ ರು.ಗಳಿಗೆ ಏರಿಸಲಾಗಿದೆ. ನ್ಯಾಯಾಧೀಶರ ವಾರ್ಷಿಕ ವೇತನ ಸುಮಾರು 33 ಲಕ್ಷ ರು. 

ಆದರೆ, ವಕೀಲರು ತಮ್ಮ ಕಕ್ಷೀದಾರರಿಂದ ಸಂಭಾವನೆ ಪಡೆಯುವುದಕ್ಕೆ ಯಾವುದೇ ಮಿತಿ ಇಲ್ಲ. ಸುಪ್ರೀಂಕೋರ್ಟ್‌ನ ಕೆಲವು ಹಿರಿಯ ವಕೀಲರು ದಿನವೊಂದಕ್ಕೆ 50 ಲಕ್ಷದ ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರು ಹಿಂದೊಮ್ಮೆ ನ್ಯಾಯಾಧೀಶರ ವೇತನವನ್ನು ಮೂರುಪಟ್ಟು ಅಧಿಕಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಸಿಜೆಐ ನ್ಯಾ. ಗೊಗೋಯ್‌ ಬಳಿ ಮನೆ, ಅಭರಣ, ವಾಹನ ಇಲ್ಲ!

46ನೇ ಸಿಜೆಐ ಆಗಿ ಬುಧವಾರ ಅಧಿಕಾರ ಸ್ವೀಕರಿಸಿದ, ರಂಜನ್‌ ಗೊಗೋಯ್‌ ಅವರ ಬಳಿ ಯಾವುದೇ ಆಭರಣಗಳು ಇಲ್ಲ. ಅವರ ಪತ್ನಿಯ ಬಳಿ ಇರುವ ಆಭರಣವೂ ಮದುವೆಯ ವೇಳೆಯಲ್ಲಿ ಆಕೆಯ ತಂದೆ ಮತ್ತು ತಾಯಿ ನೀಡಿದ ಉಡುಗೊರೆಯಾಗಿದೆ. ಗೊಗೋಯ್‌ ಅವರ ಬಳಿ ಸ್ವಂತ ಮನೆ ಅಥವಾ ವೈಯಕ್ತಿಕ ವಾಹನವಾಗಲಿ ಇಲ್ಲ. ಅಲ್ಲದೆ ವೈಯಕ್ತಿಕವಾಗಿ ಯಾವುದೇ ಸಾಲವನ್ನು ಅವರು ಮಾಡಿಲ್ಲ.

ಇದೇ ವೇಳೆ ನಿವೃತ್ತ ಸಿಜೆಐ ದೀಪಕ್‌ ಮಿಶ್ರಾ ಅವರು ಎರಡು ಚಿನ್ನದ ಉಂಗುರಗಳನ್ನು ಹಾಗೂ ಒಂದು ಚಿನ್ನದ ಚೈನ್‌ ಅನ್ನು ಹೊಂದಿದ್ದಾರೆ. 21 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ನಿವೃತ್ತ ಸಿಜೆಐ ನ್ಯಾ

ದೀಪಕ್‌ ಮಿಶ್ರಾ, ದೆಹಲಿಯ ಮಯೂರ್‌ ವಿಹಾರ್‌ ಪ್ರದೇಶದಲ್ಲಿ ವಕೀಲರ ಸಹಕಾರಿ ಸಮಾಜದ ಫ್ಲ್ಯಾಟ್‌ವೊಂದನ್ನು ಖರೀದಿಸಲು ಮಾಡಿದ 22.5 ಲಕ್ಷ ರು. ಸಾಲದ ಹಣವನ್ನು ಕಂತುಗಳಲ್ಲಿ ಪಾವತಿಸುತ್ತಿದ್ದಾರೆ. ಕಟಕ್‌ನಲ್ಲಿ ಇನ್ನೊಂದು ಮನೆಯನ್ನು ದೀಪಕ್‌ ಮಿಶ್ರಾ ಅವರು ಹೊಂದಿದ್ದು, ಅವರು ಹೈಕೋರ್ಟ್‌ ನ್ಯಾಯಾಧೀಶರಾಗುವ ದಶಕಗಳ ಮುನ್ನವೇ ಈ ಮನೆಯನ್ನು ಕಟ್ಟಲಾಗಿತ್ತು. ಗೊಗೊಯ್‌ ಅವರಂತೆ ಮಿಶ್ರಾ ಅವರ ಬಳಿ ಯಾವುದೇ ವೈಯಕ್ತಿಕ ವಾಹನ ಇಲ್ಲ. ಇಬ್ಬರೂ ಷೇರು ಮಾರುಕಟ್ಟೆಯಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ನ್ಯಾ.ಗೋಗೊಯ್‌ ಮತ್ತು ಪತ್ನಿ ಬ್ಯಾಂಕಿನಲ್ಲಿ 30 ಲಕ್ಷ ರು. ಹಣ ಇಟ್ಟಿದ್ದಾರೆ.

click me!