ಗುಜರಾತ್ ಸಿಎಂ ಅಭ್ಯರ್ಥಿ ರೇಸ್'ನಲ್ಲಿ ಸ್ಮೃತಿ ಇರಾನಿ, ವಜುಭಾಯಿ ವಾಲಾ !

By Suvarna Web DeskFirst Published Dec 19, 2017, 2:33 PM IST
Highlights

ಪ್ರಸ್ತುತ ಇರಾನಿ ರಾಜ್ಯಸಭಾ ಸದಸ್ಯರಾಗಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಹೆಚ್ಚು ಆಪ್ತರಾಗಿರುವ ಅವರು ಮುಂದಿನ ಸಿಎಂ ಆಗುತ್ತಾರೆ' ಎಂದು ಮೂಲಗಳು ಹೇಳುತ್ತಿವೆ.

ಗಾಂಧಿನಗರ(ಡಿ.19): ಕಾಂಗ್ರೆಸ್ ಪ್ರಬಲ ಪೈಪೋಟಿ ನಡುವೆಯೂ ಬಿಜೆಪಿ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಸತತ 6ನೇ ಬಾರಿಗೆ ಗೆಲುವು ಸಾಧಿಸಿದೆ. ಆದರೆ ಈಗ ಪ್ರಶ್ನೆ ಎದುರಾಗಿರುವುದು ಮುಂದಿನ ನೂತನ ಸಿಎಂ ಯಾರು ಎಂಬುದು.

ಹಾಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪುನಃ ಅಧಿಕಾರ ಸ್ವೀಕರಿಸುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಅವರು ಕೂಡ ಪಶ್ಚಿಮ ರಾಜ್ ಕೋಟ್'ನಲ್ಲಿ ಕಾಂಗ್ರೆಸ್ ತಮ್ಮ ಪ್ರತಿಸ್ಪರ್ಧಿ ಇಂದ್ರನಿಲ್ ರಾಜ್ಯಗುರು ಅವರ ವಿರುದ್ಧ ಭರ್ಜರಿ ಅಂತರದಿಂದ ಜಯಗಳಿಸಿ ಮುಂದೆಯೂ ತಾನೆ ಮುಂದುವರಿಯುತ್ತೇನೆ ಎಂಬ ಹಂಬಲದಲ್ಲಿದ್ದಾರೆ.

ಆದರೆ ಸಿಎಂ ಹುದ್ದೆಗೆ ರೂಪಾನಿ ಬಿಟ್ಟು ಮತ್ತೊಂದು ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಅವರು ಮತ್ಯಾರು ಅಲ್ಲ ಕೇಂದ್ರ ಜವಳಿ ಹಾಗೂ ವಾರ್ತಾ ಸಚಿವೆ ಸ್ಪೃತಿ ಇರಾನಿ. ಪ್ರಸ್ತುತ ಇರಾನಿ ರಾಜ್ಯಸಭಾ ಸದಸ್ಯರಾಗಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಹೆಚ್ಚು ಆಪ್ತರಾಗಿರುವ ಅವರು ಮುಂದಿನ ಸಿಎಂ ಆಗುತ್ತಾರೆ' ಎಂದು ಮೂಲಗಳು ಹೇಳುತ್ತಿವೆ.

ವಜುಭಾಯಿ ವಾಲಾ ಕೂಡ ರೇಸ್'ನಲ್ಲಿ

ಆದಾಗ್ಯೂ, ಇರಾನಿ ಅವರು ತಾವು ಸಿಎಂ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವರ ಜೊತೆ ಗುಜರಾತ್ ಮೂಲದ ಕೇಂದ್ರ ಸಚಿವ ಮನುಸುಖ್ ಎಲ್ ಮಾಂಡವ್ಯ ಹಾಗೂ ಕರ್ನಾಟಕದ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ  ಅವರ ಹೆಸರು ಕೂಡ ಕೇಳಿ ಬರುತ್ತಿದೆ.

click me!