ಮಾಜಿ CM ಸಿದ್ದರಾಮಯ್ಯ ಅತ್ಯಾಪ್ತನ ಆಸ್ತಿ ಜಪ್ತಿ..!

By Web DeskFirst Published Jan 12, 2019, 6:51 PM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೊಬ್ಬರ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟಗೋಲು ಹಾಕಿಕೊಂಡಿದ್ದಾರೆ. ಯಾರು ಆ ಸಿದ್ದು ಆಪ್ತ..?

ಬೆಂಗಳೂರು, [ಜ.12]: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತರಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಎಲ್. ರಘು ಅವರಿಗೆ ಸೇರಿದ ಆಸ್ತಿಗಳನ್ನ ಜಾರಿ ನಿರ್ದೇಶನಾಲಯ [ಇಡಿ] ಜಪ್ತಿ ಮಾಡಿದೆ. 

ಎಂಜಿನಿಯರ್ ರಘು ಅವರಿಗೆ ಸೇರಿದ ಮಂಡ್ಯ ಹಾಗೂ ಬೆಂಗಳೂರಿನಲ್ಲಿರುವ 11 ವಿವಿಧ ಕಡೆ ಇರೋ ಒಟ್ಟು 1.92 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಇಡಿ ಜಪ್ತಿ ಮಾಡಿದೆ. 

ED attaches under PMLA, 11 immovable properties located in Bangalore and Mandya worth Rs.1.92 crores of L.Raghu, Executive Engineer, National Highways, Bengaluru in a .

— ED (@dir_ed)

ಈ ಹಿಂದೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ರಘು ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು 2012 ರಲ್ಲಿ ದಾಳಿ ನಡೆಸಿದ್ದರು. 

ಇನ್ನು ರಘು ಅವರು ಸಿದ್ದರಾಮಯ್ಯರಿಗೆ ದುಬಾರಿ ಹ್ಯೂಬ್ಲೋಟ್ ವಾಚ್ ಉಡುಗೊರೆ ನೀಡಿದ್ದರು ಎಂಬ ಆರೋಪದಲ್ಲಿ ಸಿಲುಕಿ, ರಾಷ್ಟ್ರಾದ್ಯಂತ ಸುದ್ದಿಯಾಗಿದ್ದರು.

click me!