ಭೂವಿವಾದ: ಗುಂಡಿಟ್ಟು 10 ಜನರ ಭೀಕರ ಹತ್ಯೆ!

By Web DeskFirst Published Jul 17, 2019, 7:22 PM IST
Highlights

ಭೂವಿವಾದಕ್ಕೆ ಬಲಿಯಾಯ್ತು 10 ಜೀವಗಳು| ಭೂವಿವಾದ ಕಾಳಗದಲ್ಲಿ ಗುಂಡಿಟ್ಟು 10 ಜನರ ಹತ್ಯೆ| ಉತ್ತರಪ್ರದೇಶದ ಸೋನಭದ್ರಾ ಜಿಲ್ಲೆಯ ಘೋರಾವಾಲ್ ಬಳಿ ಘೋರ ಕೃತ್ಯ| ಉಬಾ ಗ್ರಾಮಸ್ಥರ ಮೇಲೆ ಮನಬಂದಣತೆ ಗುಂಡು ಹಾರಿಸಿದ ಯೋಗಾ ದತ್ತಾ ಬೆಂಬಲಿಗರು| ಪ್ರಕರಣದ ವಿಚಾರಣೆ ನಡೆಸಿಸ ತಪ್ಪಿಸ್ಥರ ಬಂಧನಕ್ಕೆ ಸಿಎಂ ಯೋಗಿ ಆದೇಶ| 
 

ಲಕ್ನೋ(ಜು.17): ಭೂವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ಮಂದಿಯನ್ನು ಗುಂಡಿಕ್ಕಿ ಕೊಂದಿರುವ ಘೋರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Sonbhadra: Casualties reported after firing between two groups over a land dispute in Ghorawal today; District Magistrate Ankit Kumar Agarwal says, "We can't tell exact numbers as of now. 9 persons brought to District Hospital. Some are injured & some are dead." pic.twitter.com/QDeL1QylFK

— ANI UP (@ANINewsUP)

ಇಲ್ಲಿನ ಸೋನಭದ್ರಾ ಜಿಲ್ಲೆಯ ಘೋರಾವಾಲ್’ನ ಉಬಾ ಗ್ರಾಮದಲ್ಲಿ ಯೋಗಾ ದತ್ತಾ ಎಂಬಾತ 36 ಎಕರೆ ಭೂಮಿ ಖರೀದಿಸಿದ್ದ. ಇಂದು ತನ್ನ ಜಾಗವನ್ನು ಪಡೆಯಲು ಆತ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಿಂದ ಕುಪಿತಗೊಂಡ ದತ್ತಾ ಬೆಂಬಲಿಗರು, ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ವೇಳೆ 10 ಜನ ಮೃತಪಟ್ಟು 24 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

CM takes cognisance of the incident in Sonbhadra (firing b/w 2 groups over a land dispute) & expressed condolences to family of deceased; directed DM to provide immediate medical attention to injured. He also directed DGP to personally monitor the case & ensure effective action. pic.twitter.com/qfG1tk7XP4

— ANI UP (@ANINewsUP)

ಘಟನೆಯ ಕುರಿತು ಮಾಹಿತಿ ಪಡೆದಿರುವ ಸಿಎಂ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಆದೇಶ ನೀಡಿದ್ದಾರೆ. 

click me!