ಬುಸ್ ಬುಸ್ ನಾಗಪ್ಪ ಎಲ್ಲಿದ್ದೀಯಪ್ಪಾ..? ಬಿಸಿಲಿನ ತಾಪ ತಾಳಲಾರದೇ ನಿನ್ ಸ್ಕೂಟರ್ ಸೀಟ್ ಕೆಳಗೆ ಕೂತಿದ್ದೀನಪ್ಪಾ..

By Sathish Kumar KHFirst Published May 5, 2024, 12:52 PM IST
Highlights

ಬಿಸಿಲಿನ ಬೇಗೆಯನ್ನು ತಾಳಲಾರದೇ ನಾಗರ ಹಾವು ಮನೆಯ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಸೀಟಿನ ಕೆಳಗೆ ಬಂದು ಕುಳಿತುಕೊಂಡಿದ್ದು, ವಾಹನದ ಮಾಲೀಕರ ಹಾವು ನೋಡಿ ಬೆಚ್ಚಿ ಬಿದ್ದಿದ್ದಾರೆ.

ತುಮಕೂರು (ಮೇ 05): ರಾಜ್ಯದಲ್ಲಿ ಬಿಸಿಲಿನ ತಾಪ 46 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಆದರೆ, ಸರೀಸೃಪ ಜಾತಿಗೆ ಸೇರಿದ ವಿಷ ಜಂತುಗಳಾದ ಹಾವುಗಳು ಮಣ್ಣು ಹಾಗೂ ಕಲ್ಲಿನ ಪೊಟರೆಗಳಿಂದ ಹೊರಬರುತ್ತಿವೆ. ಹೀಗೆ, ಹೊರಬಂದ ಹಾವು ಮನೆಯ ಮುಂದೆ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಸೀಟಿನ ಕೆಳಗೆ ಅಡಗಿಕೊಂಡಿದ್ದು, ಇದನ್ನು ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದಾರೆ.

ಹೌದು, ರಾಜ್ಯದಲ್ಲಿ ಬಿಸಿಲ ತಾಪ ತುಂಬಾ ಹೆಚ್ಚಾಗಿದೆ. ಬೆಂಗಳೂರು ಸೇರಿ ರಾಜ್ಯದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಹೀಗಾಗಿ, ಹಾವು, ಚೇಳು ಹಾಗೂ ಝರಿ ಸೇರಿದಂತೆ ಅನೇಕ ವಿಷ ಜಂತುಗಳು ಮಣ್ಣಿನಡಿ ಇರಲಾಗದೇ ಬಯಲು ಪ್ರದೇಶಕ್ಕೆ ಹಾಗೂ ನೆರಳಿರುವ ಮನೆಯ ಆವರಣದೊಳಗೆ ಪ್ರವೇಶ ಮಾಡುತ್ತಿವೆ. ಈ ವೇಳೆ ತಿಳಿಯದೇ ಹಾವಿರುವ ಜಾಗಕ್ಕೆ ಹೋದಲ್ಲಿ ಹಾವು ಕಡಿತಕ್ಕೆ ಒಳಗಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಯಲು ಪ್ರದೇಶ, ಕಾಡಂಚಿನ ಪ್ರದೇಶ, ಕೆರೆ ಅಥವಾ ನದಿ ತೀರದ ಪ್ರದೇಶ, ಕಸ ಸುರಿಯುವ ಸುತ್ತಲಿನ ಪ್ರದೇಶಗಳ ಅಕ್ಕ-ಪಕ್ಕದಲ್ಲಿರುವ ಮನೆಗಳ ನಿವಾಸಿಗಳು ಎಚ್ಚರಿಕೆಯಾಗಿರಬೇಕು.

ಅರ್ಜೆಂಟ್ ಅಂತ ಓಡೋಗಿ ಕೂರೋ ಮೊದಲೊಮ್ಮೆ ಕಣ್ ಬಿಟ್ಟು ನೋಡಿ: ಟಾಯ್ಲೆಟ್ ಬೇಸಿನ್‌ನಲ್ಲಿತ್ತು ಹಾವು!

ತುಮಕೂರಿನಲ್ಲಿಯೂ ಬಿಸಿಲ ತಾಪ ತಾಳಲಾರದೆ ನಾಗರಹಾವು ಸ್ಕೂಟರ್ ಸೀಟಿನ ಕೆಳಗೆ ಸೇರಿಕೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಮಾಯರಂಗಯ್ಯ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕೆಳಗೆ ನಾಗರಹಾವು ಕುಳಿತುಕೊಂಡಿತ್ತು. ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಹಾವನ್ನು ತೆಗೆಯಲು ಸಾಧ್ಯವಾಗದ ಕಾರಣ ಉರುಗ ರಕ್ಷಕ ದಿಲೀಪ್ ಅವರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಅವರು ಬಂದು ಸುಮಾರು 30 ನಿಮಿಷಗಳ ಕಾಲ ಪರದಾಡಿ ನಾಗರಹಾವನ್ನು ಸ್ಕೂಟರ್ ಸೀಟಿನಿಂದ ರಕ್ಷಣೆ ಮಾಡಿದ್ದಾರೆ.

ಹಾವು ಸಂರಕ್ಷಣೆ ವಿಡಿಯೋ ವೈರಲ್: ಹಾವು ಸಂರಕ್ಷಣೆ ಮಾಡಲು ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಅವರು ಹಾವು ಹಿಡಿಯಲು ಮಾಡಿದ ಎಲ್ಲ ಪ್ರಯತ್ನಗಳನ್ನು ವಿಡಿಯೋ ಮಾಡಲಾಗಿದೆ. ನಾಗರಹಾವು ಸ್ಕೂಟರ್ ಸೀಟಿನೊಳಗೆ ನುಸುಳಿಕೊಂಡು ಹೊರಬರದೇ ಕಾಟ ಕೊಟ್ಟಿದೆ. ಕೊನೆಗೆ, ಸ್ಕೂಟರ್ ಡಿಕ್ಕಿಯನ್ನು ತೆರೆದು, ಸೀಟನ್ನು ಮೇಲಕ್ಕೆ ಎತ್ತಿದರೆ ಪುನಃ ಅಲ್ಲಿಂದ ತಪ್ಪಿಸಿಕೊಳ್ಳಲು ಹಿಂಭಾಗಕ್ಕೆ ಬಂದಿದೆ. ಇನ್ನು ನನಗೆ ತೊಂದರೆ ಕೊಡುತ್ತಾರೆ ಎಂದು ಭಾವಿಸಿದ ನಾಗರಹಾವು ಸ್ಕೂಟರ್ ಹಿಂಭಾಗಕ್ಕೆ ಬಂದು ಬುಸ್ಸೆಂದು ಹೆಡೆ ಬಿಚ್ಚಿ ಸಿಟ್ಟನ್ನು ತೋರಿಸಿದೆ. ಆಗ ಅಲ್ಲಿದ್ದ ಸುತ್ತಲಿನ ಜನ ಹಿಂದಕ್ಕೆ ಸರಿದಿದ್ದಾರೆ. ಆಗ ಉರಗ ತಜ್ಞ ದಿಲೀಪ್ ಹಾವು ಹಿಡಿಯಲು ಬಳಸುವ ಸ್ಟಿಕ್‌ ಬಳಸಿ ನಾಗರಹಾವನ್ನು ಹಿಡಿದು ಚೀಲದೊಳಗೆ ಹಾಕಿ ಸಂರಕ್ಷಣೆ ಮಾಡಿದ್ದಾರೆ.

ಮಹಿಳೆಯನ್ನು ರೇವಣ್ಣನೇ ಕಿಡ್ನಾಪ್ ಮಾಡಿಸಿದ್ದು ಎಸ್‌ಐಟಿ ಮುಂದೆ ಬಾಯಿಬಿಟ್ಟ A2 ಆರೋಪಿ

ಕಾಡಿಗೆ ಬಿಡುವುದಾಗಿ ಹೇಳಿದ ದಿಲೀಪ್: ಹಾವನ್ನು ಸಂರಕ್ಷಣೆ ಮಾಡಿದ ದಿಲೀಪ್ ಚೀಲದೊಳಗೆ ಅದನ್ನು ಹಾಕಿಕೊಂಡು ಸ್ಕೂಟರ್ ಮಾಲೀಕರು ಹಾಗೂ ಮನೆಯವರ ಆತಂಕ ದೂರು ಮಾಡಿದರು. ಜೊತೆಗೆ, ಬೇಸಿಗೆ ಅವಧಿಯಲ್ಲಿ ಹಾವುಗಳು ಭೂಮಿಯ ಆಳದಲ್ಲಿ ಇರಲಾಗದೇ ತಂಪಾದ ಪ್ರದೇಶಗಳನ್ನು ಹುಡುಕಿಕೊಂಡು ಹೊರಗೆ ಬರುತ್ತವೆ. ಆಗ ಅವುಗಳಿಗೆ ಹಾನಿ ಮಾಡದೇ ಕರೆ ಮಾಡಿದರೆ ನಾವು ಬಂದು ರಕ್ಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಜೊತೆಗೆ, ಈಗ ಸಂರಕ್ಷಣೆ ಮಾಡಿದ ಹಾವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಡಿನೊಳಗೆ ಬಿಡುವುದಾಗಿ ತಿಳಿಸಿದರು.

click me!