ಹಳ್ಳಿ ಹೆಣ್ಣುಮಗಳು ರಾಷ್ಟ್ರಪ್ರಶಸ್ತಿ ಗೆದ್ದಳು!

By Suvarna Web DeskFirst Published Feb 6, 2018, 2:16 PM IST
Highlights

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ... ಈ ಮಾತಿಗೆ ಅನ್ವರ್ಥವಾಗಿದ್ದಾರೆ ಮೊಣಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಎ....ಎ. ರೋಜ.

ಬೆಂಗಳೂರು (ಫೆ. 06): ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ... ಈ ಮಾತಿಗೆ ಅನ್ವರ್ಥವಾಗಿದ್ದಾರೆ ಮೊಣಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಎ....ಎ. ರೋಜ.

ತೀವ್ರ ಬರಗಾಲ ಮತ್ತು ಅಂತರ್ಜಲ ದ ಕೊರತೆಯ ನಡುವೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿ ದ ದಿನಗಳಲ್ಲಿ ಹೊಸ ಹುರುಪಿನೊಂದಿಗೆ ಹೈನುಗಾರಿಕೆ ಪ್ರಾರಂಭ ಮಾಡಿ ಲಭ್ಯವಿದ್ದ  ಕಡಿಮೆ ನೀರಿನಲ್ಲಿಯೇ ಮೇವು  ಬೆಳೆದು ೪೦ ಹಸುಗಳ ಸಾಕಣೆ ಮಾಡುವ ಮೂಲಕ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತ ಮಹಿಳೆ ಎಂಬ ಹೆಗ್ಗಳಿಕೆ ಪಡೆದು, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡು ಬಯಲು ಸೀಮೆಯ ರೈತರಿಗೆ ಮಾದರಿಯಾಗಿದ್ದಾರೆ. 

ಬರವೇ ವರವಾಯ್ತು: ಆರು ಎಕರೆ ಭೂಮಿಯಲ್ಲಿ ತರಕಾರಿಗಳನ್ನು  ಬೆಳೆ ದು ಜೀವನ ದ ಬಂಡಿ ಸಾಗಿಸುತ್ತಿದ್ದ  ರೋಜಾ- ಅಮರೇಶ  ದಂಪತಿಗಳ ಪಾಲಿಗೆ ಬರಗಾಲ ಎದುರಾಗಿ ಇದ್ದ  ಒಂದು  ಬೋರ್’ವೆಲ್  ಕೈಕೊಟ್ಟಿದ್ದು  ಮುಂದೆ  ನೀರಿನ ಮಿತ ಬಳಕೆ ಮಾಡಿಕೊಂಡು ಮಾದರಿ ಹೈನುಗಾರಿಕೆ ಮಾಡಲು ಸಹಕಾರಿಯಾಯಿತು.  ನೀರಿನ ಅಭಾವ ಎದುರಾದಾಗ  ಇನ್ನೇನು ಕೃಷಿ ಮಾಡಲು  ಸಾಧ್ಯವಾಗುವುದಿಲ್ಲ  ಎಂದೆನಿಸಿ ಎರಡು ಹಸುಗಳಿಂದ  ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಅಂದು ಕೈಗೊಂಡ  ಕಾಯಕ ಹತ್ತು ವರ್ಷಗಳಿಂದ ನಿರಂತರವಾಗಿ ಸಾಗಿ ಇಂದು ೪೦ ಕ್ಕೂ  ಹೆಚ್ಚು ಹಸುಗಳ ತನಕ ಬಂದು ತಲುಪಿದೆ. ಶಿವಮೊಗ್ಗ  ಹಾಲು ಒಕ್ಕೂಟಕ್ಕೆ  ನಿತ್ಯ 250 ಕ್ಕೂ ಹೆಚ್ಚು ಲೀಟರ್  ಹಾಲು ಮಾರಾಟ ಮಾಡುವ ಹಂತ ತಲುಪಿದೆ.

ಮೈ ತೊಳೆದ  ನೀರಿನಲ್ಲೇ ಮೇವು  ಬೆಳೆ: ಹೇಳಿ ಕೇಳಿ  ನೀರಿಗೆ ಅತೀವ ಸಮಸ್ಯೆ ಇರುವುದರಿಂದ ಹಸುಗಳನ್ನು  ಸಾಕಿದರೆ ಅವಕ್ಕೆ  ಬೇಕಾ ದ ಮೇವು ಪೂರೈಕೆ ಮಾಡುವುದು ಕಷ್ಟವಾಗುತ್ತ ದೆ. ಅದಕ್ಕಾಗಿ ಬಳಸಿದ  ನೀರನ್ನೇ ಸಂಗ್ರಹಿಸಿಕೊಂಡು ಮೇವು  ಬೆಳೆಯಲು ವಿಶಿಷ್ಟ  ಪದ್ಧತಿಯನ್ನು ಕಂಡುಕೊಂಡರು ರೋಜಾ. ಹಸುಗಳ ಮೈ  ತೊಳೆದ  ನೀರು ಒಂದಡೆ ಸಂಗ್ರಹವಾಗುವಂತೆ ಗುಂಡಿ ನಿರ್ಮಿಸಿ, ಹಸುಗಳ ಗಂಜಲವು ಅದರೊಳಗೆ ಹೋಗುವಂತ ವ್ಯವಸ್ಥೆ ಮಾಡಿ, ಅದಕ್ಕೆ ಪಂ... ಅಳವಡಿಸಿ ಮೇವು  ಬೆಳೆಗೆ  ಹಾಯಿಸುವ ಕಾರ್ಯ ಮಾಡುತ್ತಾರೆ. ಇದುವರೆಗೂ ಯಾವುದೇ ಗೊಬ್ಬರ, ರಾಸಾಯನಿಕಗಳನ್ನು ಬಳಕೆ ಮಾಡ ದೇ ಸಮೃದ್ಧ ಮೇವು  ಬೆಳೆದು ಯಶ ಕಂಡಿದ್ದಾರೆ. 

ಒಬಟರ ದೇ ಉಸ್ತುವಾರಿ: ನಲವತ್ತು ಹಸುಗಳನ್ನು ಒಬಟರೇ  ನೋಡಿಕೊಳ್ಳುವ ರೋಜಾ ಅವರು, ಹಸುಗಳಿಗೆ  ಬೇಕಾದ ಖನಿಜಯುಕ್ತ ಪೌಷ್ಟಿಕ, ಸಾವಯವ ಆಹಾರಗಳನ್ನು ಸ್ವತಃ  ತಯಾರಿಸಿಕೊಂಡು ಸ್ವಾವಲಂಬಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಶಿವಮೊಗ್ಗ, ಚಿತ್ರ ದುರ್ಗ,  ದಾವಣಗೆರೆ ಮೂರು ಜಿಲ್ಲೆಗಳ ಪೈಕಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ  ರೈತ ಮಹಿಳೆಯಾಗಿ ಹೊರಹೊಮ್ಮಿರುವ ಇವರು ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 

ಶಿವಮೊಗ್ಗ ಹಾಲು ಒಕ್ಕೂಟ ದಲ್ಲಿಯೇ ಅತಿ ಹೆಚ್ಚು ಹಾಲು ಮಾರಾಟ ಮಾಡುವ ರೈತ ಮಹಿಳೆ ಎನ್ನುವ ಹೆಗ್ಗಳಿಕೆಯೂ ಇವರ ಪಾಲಿಗಿದೆ. ರೈತರು ಕೃಷಿ ಚಟುವಟಿಕೆಗಳ ಜೊತೆಯಲ್ಲಿ  ಹೈನುಗಾರಿಕೆಯಂತಹ ಉಪ ಕಸುಬುಗಳನ್ನೂ ಮಾಡ ಬೇಕು. ಆಸಕ್ತಿ ಇ ದರೆ ಹೈನುಗಾರಿಕೆಯನ್ನೇ ಮುಖ್ಯ ವೃತ್ತಿಯನ್ನಾಗಿಯೂ ಆಯ್ಕೆ ಮಾಡಿಕೊಳ್ಳಬಹುದು.  ಪ್ರಾರಂಭದಲ್ಲಿ  ನೀರಿನ ಕೊರತೆಯಿಂದ ಆರಂಭಿಸಿದ ಹಸು ಸಾಕಾಣಿಕೆ ಇಂ ದು ನಮ೩/೪ ಇಡೀ ಕುಟುಂಬ ದ ಆರ್ಥಿಕ  ಸ್ಥಿತಿಯನ್ನೇ  ದಲಾಯಿಸಿ ದೆ. ಶ್ರ ದ್ಧೆಯಿಂದ ಹತ್ತು  ವರ್ಷಗಳಿಂದಲೂ  ದುಡಿದ ಶ್ರಮಕ್ಕೆ ಒಳ್ಳೆಯ ಪ್ರತಿಫಲ  ದೊರಕಿದೆ ಎಂದು ಹೇಳುವ ಸಾಧಕಿ ರೋಜಾ ಅವರೊಂದಿಗೆ  ನೀವೂ ಮಾತನಾಡಿ.  ದೂ. 9480269365

 

click me!