ಸೆಕ್ಸ್ ವೇಳೆ ಮಹಿಳೆಗೆ ಕಷ್ಟವಾಗುವ ಸಂಗತಿಗಳು ಹಾಗೂ ಕಾರಣಗಳು

First Published Apr 25, 2018, 9:07 PM IST
Highlights

ಸಂಭೋಗದ ವೇಳೆ ಬಲವಾಗಿ ಶಿಶ್ನವನ್ನು ಒಳಗೆ ನೂಕಿದರೆ ಇದು ಸಾಮಾನ್ಯವಾಗಿ ಹರಿದುಬಿಡುತ್ತದೆ. ಈ ವೇಳೆ ಸ್ವಲ್ಪ ರಕ್ತ ಸ್ರವಿಸುತ್ತದೆ, ಮತ್ತು ನೋವು ಬರುತ್ತದೆ. ಈ ನೋವು ಮತ್ತು ರಕ್ತ ಎರಡೂ ಕೂಡ ಮಹಿಳೆಯನ್ನ ಸೆಕ್ಸ್'ನಿಂದ ಮಾನಸಿಕವಾಗಿ ದೂರ ಮಾಡಿಬಿಡಬಹುದು.

ಮಹಿಳೆಯರಿಗೆ ಸಂಭೋಗದ ವೇಳೆ ತುಂಬಾ ಬಾಧೆ ಪಡುತ್ತಾರೆ. ಹೀಗಾಗಿ, ಗಂಡ ಧಾವಿಸಿ ಬಂದರೂ ಹೆಂಡತಿ ದೂರ ದೂರ ಸರಿಯುತ್ತಾಳೆ. ಸೆಕ್ಸ್'ನಿಂದ ಮಹಿಳೆಗೆ ನೋವಾಗುವುದು ಹೇಗೆ..? ಇಲ್ಲಿದೆ ಒಂದಷ್ಟು ಕಾರಣಗಳು.

ಸರಿಯಾದ ಸಿದ್ಧಗೊಳ್ಳದಿರುವುದು
ಸೆಕ್ಸ್ ವಿಷಯಕ್ಕೆ ಬಂದರೆ ಪುರುಷ ಬಹಳ ಬೇಗ ಸಜ್ಜಾಗಿಬಿಡುತ್ತಾನೆ. ಆದರೆ, ಮಹಿಳೆ ಉನ್ಮತ್ತ ಸ್ಥಿತಿಗೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಸಂಭೋಗಕ್ಕೆ ಅರ್ಧಗಂಟೆ ಮುಂಚಿನಿಂದಲೇ ಮಹಿಳೆಯನ್ನ ರಮಿಸಿ ಅಣಿಗೊಳಿಸಬೇಕಾಗುತ್ತದೆ. ಮಹಿಳೆಯ ಯೋನಿ ತೇವಗೊಂಡಿದೆ ಎಂದರೆ ಆಕೆ ಸಂಭೋಗಕ್ಕೆ ಸಿದ್ಧಳಿದ್ದಾಳೆಂದೇ ಅರ್ಥ. ಆಗ ಸಂಭೋಗ ಯಾವುದೇ ನೋವಿಲ್ಲದೇ ಸುಸೂತ್ರವಾಗಿ ನಡೆಯುತ್ತದೆ.

ಯೋನಿ ಪದರ
ಪ್ರತಿಯೊಬ್ಬ ಕನ್ಯೆಯೂ ತನ್ನ ಯೋನಿಯ ದ್ವಾರದಲ್ಲಿ ಚಿಕ್ಕ ಪದರವೊಂದಿರುತ್ತದೆ. ಇದು ಹರಿದರೆ ಮಾತ್ರ ವಸ್ತುವೊಂದು ಒಳಗೆ ಪ್ರವೇಶಿಸಲು ಸಾಧ್ಯ. ಸಂಭೋಗದ ವೇಳೆ ಬಲವಾಗಿ ಶಿಶ್ನವನ್ನು ಒಳಗೆ ನೂಕಿದರೆ ಇದು ಸಾಮಾನ್ಯವಾಗಿ ಹರಿದುಬಿಡುತ್ತದೆ. ಈ ವೇಳೆ ಸ್ವಲ್ಪ ರಕ್ತ ಸ್ರವಿಸುತ್ತದೆ, ಮತ್ತು ನೋವು ಬರುತ್ತದೆ. ಈ ನೋವು ಮತ್ತು ರಕ್ತ ಎರಡೂ ಕೂಡ ಮಹಿಳೆಯನ್ನ ಸೆಕ್ಸ್'ನಿಂದ ಮಾನಸಿಕವಾಗಿ ದೂರ ಮಾಡಿಬಿಡಬಹುದು.

ಬಾಲ್ಯದಲ್ಲಾದ ಶೋಷಣೆ..
ಬಾಲ್ಯಾವಸ್ಥೆಯಲ್ಲಿ ಯಾರಾದರೂ ಲೈಂಗಿಕವಾಗಿ ಶೋಷಣೆ ಮಾಡಿದ್ದರೆ ಅದು ಮನಸಿನ ಮೇಲೆ ದೊಡ್ಡ ಘಾಸಿ ಮಾಡಿಬಿಡುತ್ತದೆ. ಸೆಕ್ಸ್ ಅಂದರೆ ಸಾಕು ಹೇಸಿಗೆ ಮತ್ತು ಭಯ ಆವರಿಸುತ್ತದೆ. ಹೀಗಾಗಿ, ಆ ಮಹಿಳೆ ಮನಸೋಯಿಚ್ಛೆ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ವಜೈನಸ್ಮಸ್ ಎಂಬ ತೊಂದರೆ
ಸಂಭೋಗದ ವೇಳೆ ಯೋನಿ ಸಡಿಲಗೊಂಡರೆ ಶಿಶ್ನ ಸುಲಭವಾಗಿ ಒಳಗೆ ಹೋಗಲು ಸಾಧ್ಯ. ಆದರೆ, ವಜೈನಸ್ಮಸ್ ಎಂಬ ತೊಂದರೆಯಿಂದ ಬಳಲುವ ಮಹಿಳೆಯರಲ್ಲಿ ಸಂಭೋಗದ ವೇಳೆ ಯೋನಿ ತನ್ನಂತಾನೆ ಬಿಗಿಗೊಂಡುಬಿಡುತ್ತದೆ. ಇದರಿಂದ ಶಿಶ್ನ ಒಳಗೆ ತೂರುವುದು ಕಷ್ಟವಾಗುತ್ತದೆ. ಬಲವಂತವಾಗಿ ತೂರಿಸಲು ಹೋದಾಗ ನೋವಾಗುತ್ತದೆ. ಗೈನೆಕಾಲಜಿಸ್ಟ್ ಬಳಿ ಇದಕ್ಕೆ ಸೂಕ್ತ ಚಿಕಿತ್ಸೆಗಳಿವೆ.

ಮತ್ತೊಂದು ಮುಖ್ಯ ಸಂಗತಿ ಮತ್ತು ಸಲಹೆ ಎಂದರೆ, ಸಂಭೋಗದ ವೇಳೆ ನೋವಿನ ಭಯವಿರುವ ಮಹಿಳೆಯರು ತಮ್ಮ ಕೈಬೆರಳನ್ನ ಯೋನಿಯ ಒಳಗೆ ತೂರಿಸಿಕೊಂಡು ಪರೀಕ್ಷಿಸಬಹುದು. ಬೆರಳು ತೂರಿಸಿದಾಗ ಯಾವುದೇ ನೋವು ಆಗುವುದಿಲ್ಲವೆಂಬುದನ್ನ ಖಚಿತಪಡಿಸಿಕೊಳ್ಳಬಹುದು. ಹೆರಿಗೆಯಾಗುವಾಗ ಒಂದಿಡೀ ಮಗುವಿನ ಶರೀರವೇ ಯೋನಿ ಮೂಲಕ ಹೊರಗೆ ಬರುವಾಗ, ಪುರುಷನ ಶಿಶ್ನ ಒಳಗೆ ಹೋಗಲು ಕಷ್ಟವೇ..? ಮಹಿಳೆಯರು ಇದನ್ನ ಅರ್ಥ ಮಾಡಿಕೊಂಡರೆ, ಸಂಭೋಗದ ಮೇಲಿನ ಭಯವನ್ನ ದೂರ ಮಾಡಿಕೊಳ್ಳಬಹುದು.

click me!