ಅರೇ ಇದೇನಿದು..! ಶಾಸಕರೊಬ್ಬರ ಫೋಟೋ ಇಟ್ಟು ಶಿಕ್ಷಕನಿಂದ ಪೂಜೆ ..!

By Web DeskFirst Published Nov 14, 2018, 10:35 PM IST
Highlights

ಶಾಲಾ ಶಿಕ್ಷಕನಿಗೆ ರಾಜಕೀಯದ ಅಮಲು..!. ಶಾಸಕರ ಫೋಟೊ ಮುಂದೆ ಶಿಕ್ಷಕನ ದೀರ್ಘ ದಂಡ ನಮಸ್ಕಾರ. ಶಾಸಕರೊಬ್ಬರ ಫೋಟೋ ಇಟ್ಟು ಶಿಕ್ಷಕನಿಂದ ಪೂಜೆ . ಸರ್ಕಾರಿ ಶಿಕ್ಷಕನಿಗೆ ಬೇಕಿತ್ತಾ ಈ ಪೂಜೆ ಮಾಡೋ ಕೆಲಸ..?

ಗದಗ, (ನ.14): ಇತ್ತೀಚಿನ ದಿನಗಳಲ್ಲಿ ರಾಜಕೀಯದ ನಶೆ ಶಾಲಾ ಶಿಕ್ಷಕರಿಗೂ ಆವರಿಸಿದೆ ಅನ್ನೊ ಅನುಮಾನ ಶುರುವಾಗಿದೆ. ದೇವರ ಮುಂದೆ ರಾಜಕೀಯ ನಾಯಕರ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ ಇಲ್ಲೊಬ್ಬ ಶಿಕ್ಷಕ. 

ಗದಗ ಜಿಲ್ಲೆ ರೋಣ ವಿಧಾನ ಸಭಾ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಫೋಟೊವನ್ನು ದೇವರ ಜೊತೆ ಇಟ್ಟು ಪೂಜೆ ಮಾಡಿದ್ದಾರೆ. ಸಾಲದಕ್ಕೆ ಕಳಕಪ್ಪ ಬಂಡಿಗೆ ರಾಜಕೀಯದಲ್ಲಿ ಓಳ್ಳೆ ಸ್ಥಾನ - ಮಾನ ಸಿಗಲಿ ಅಂತ ದೀಡ ನಮಸ್ಕಾರ ಹಾಕಿದ್ದಾರೆ. 

ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯ ಸಹ ಶಿಕ್ಷಕ ರಾಮನಗೌಡ ಪಾಟೀಲ್ ಹಾಗೂ ಜಕ್ಕಲಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಹ ಶಿಕ್ಷಕಿಯಾದ ಅವರ ಪತ್ನಿ  ಪ್ರಭಾವತಿ ಈ ಕೆಲಸ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ರಾಜಕೀಯ ನಾಯಕನಿಗೆ ದೀಡ ನಮಸ್ಕಾರ ಹಾಕುವ ಅವಶ್ಯಕತೆ ಏನಿತ್ತು ಅಂತ ಪ್ರಶ್ನೆ ಮಾಡ್ತಿದ್ದಾರೆ..

click me!