ಕೇರಳ ಸರ್ಕಾರದಿಂದ ಹಿಂದುಗಳ ಮೇಲೆ ಅತ್ಯಾಚಾರ: ಹೆಗಡೆ ಹೇಳಿಕೆ

By Web DeskFirst Published Jan 2, 2019, 9:42 PM IST
Highlights

ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದ ನಂತರ ಇಡೀ ದಿನ ಬೆಳವಣಿಗೆ ನಡೆಯುತ್ತಲೆ ಇದೆ. ಈ ನಡುವಿನಲ್ಲಿ ಕೆಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಕೇರಳ ಸರ್ಕಾರದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು[ಜ.02] ಶಬರಿಮಲೆಗೆ ಹೆಂಗಸರು ಪ್ರವೇಶ ಮಾಡಿದ ವಿಚಾರಕ್ಕೆ ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದುಗಳ ಮೇಲೆ ಕೇರಳದ ಕಮ್ಯೂನಿಸ್ಟ್ ಸರಕಾರ ಹಗಲಿನಲ್ಲಿಯೇ ಅತ್ಯಾಚಾರ ಮಾಡಿದೆ ಎಂದಿದ್ದಾರೆ.

ಕಮ್ಯೂನಿಸ್ಟ್ ರು ಪೂರ್ವಾಗ್ರಹಪೀಡಿತರಾಗಿಯೇ ಯೋಚನೆ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಮುಂದಾಗಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದೇ ಅವರ ಮುಖ್ಯ ಉದ್ದೇಶ ಎಂದು ಆರೋಪಿಸಿದ್ದಾರೆ.

ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ

ಹಿಂದುಗಳ ಭಾವನೆಗೆ ಧಕ್ಕೆ ತರದಂತೆ ಈ ವಿಚಾರ ಬಗೆಹರಿಸಬಹುದಿತ್ತು. ಆ ಎಲ್ಲ ಸಾಧ್ಯತೆಗಳು ಇದ್ದವು. ಆದರೆ ಕೇರಳ ಸರಕಾರ ಎಲ್ಲ ವಿಚಾರದಲ್ಲಿಯೂ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
 

Union Minister Ananth Kumar Hegde on row says, "Kerala govt entirely failed. It’s totally daylight rape on Hindu people." pic.twitter.com/brKdVApSZ8

— ANI (@ANI)
click me!