ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಜಲಪಾತಗಳು..!

Jun 15, 2018, 7:59 PM IST

ಬೆಂಗಳೂರು(ಜೂ.15): ಸಾಕಪ್ಪಾ ಸಾಕು ಈ ಮಳೆ ಅಂತಾ ಬಹುತೇಕರು ಈ ಮಳೆಗಾಲವನ್ನು ಎಂಜಾಯ್ ಮಾಡದೇ ಕುಳಿತಿದ್ದಾರೆ. ಇದೇ ವೇಳೆ ಕೆಲವು ಪ್ರಕೃತಿ ಪ್ರೀಯರು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ಜಲಪಾತಗಳ ದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ವರುಣನ ಅಬ್ಬರದಿಂದಾಗಿ ರಾಜ್ಯದ ಬಹುತೇಕ ಜಲಪಾತಗಳು ಮೈದುಂಬಿಕೊಂಡಿವೆ.

ಅದರಲ್ಲೂ ಮಲೆನಾಡಿನ ಜಲಪಾತಗಳು ಹಾಲ್ನೊರೆಯಂತೆ ಭೋರ್ಗರೆಯುತ್ತಿವೆ. ಹಾಗಾದರೆ ರಾಜ್ಯದ ಯಾವ್ಯಾವ ಜಲಪಾತಗಳು ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಎಂಬ ಡಿಟೇಲ್ಸ್ ಇಲ್ಲಿದೆ..