ಯಶ್ ಜೊತೆ ಮತ್ತೆ ಪೈಪೋಟಿಗೆ ಇಳಿದ ಅಲ್ಲು ಅರ್ಜುನ್! ಕೆಜಿಎಫ್2 ದಾಖಲೆ ಮುರಿಯಲು ಪುಷ್ಪ2 ದೊಡ್ಡ ಪ್ಲ್ಯಾನ್!

ಯಶ್ ಜೊತೆ ಮತ್ತೆ ಪೈಪೋಟಿಗೆ ಇಳಿದ ಅಲ್ಲು ಅರ್ಜುನ್! ಕೆಜಿಎಫ್2 ದಾಖಲೆ ಮುರಿಯಲು ಪುಷ್ಪ2 ದೊಡ್ಡ ಪ್ಲ್ಯಾನ್!

Published : May 03, 2024, 10:31 AM IST

ಅದ್ಯಾಕೋ ಗೊತ್ತಿಲ ನಮ್ಮ ಸ್ಯಾಂಡಲ್‌ವುಡ್ ನಟ ನ್ಯಾಷನಲ್ ಸ್ಟಾರ್ ಯಶ್ ಜೊತೆ ಟಾಲಿವುಡ್‌ನ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಪೈಪೋಟಿಗೆ ಇಳಿದಿದ್ದಾರೆ. ಯಾಶ್ ಮಾಡಿರೋ ದಾಖಲೆಗಳನ್ನೆಲ್ಲಾ ನಾನೇ ಪುಡಿಗಟ್ಟಬೇಕು ಅಂತ ಹಠ ಹಿಡಿದಿದ್ದಾರಂತೆ.

ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ಬಳಿಕ ಡಿಮ್ಯಾಂಡ್‌ಗೆ ತಕ್ಕಂತೆ ಮತ್ತಷ್ಟು ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಆದರೆ 'ಪುಷ್ಪ'-2 (Pushpa 2 Movie) ಬೆಂಗಾಲಿ ಸೇರಿ 6 ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಆ ಲೆಕ್ಕದಲ್ಲಿ 'KGF'-2 ಚಿತ್ರಕ್ಕಿಂತ 'ಪುಷ್ಪ'-2 ಒಂದು ಹೆಜ್ಜೆ ಮುಂದೆ ಹೋಗಿದೆ. ಮೊದ್ಲೇ 'ಪುಷ್ಪ' ಸರಣಿಯನ್ನು ಕನ್ನಡದ 'KGF' ಸರಣಿಗೆ ಹೋಲಿಕೆ ಮಾಡಲಾಗುತ್ತಿದೆ. 'ಪುಷ್ಪ' ದಿ ರೈಸ್ ಸಿನಿಮಾ ಬಿಡುಗಡೆ ಆದಾಗಲೇ ಕೆಲವರು ಸಿನಿಮಾ ಕಥೆಯನ್ನ 'KGF' ಚಿತ್ರಕ್ಕೆ ಹೋಲಿಸಿದ್ರು. ಅದಕ್ಕೂ ಮುನ್ನ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು ಎರಡೂ ಸಿನಿಮಾಗಳನ್ನು ಹೋಲಿಸಿ ಒಂದು ಹೇಳಿಕೆ ಕೊಟ್ಟಿದ್ದರು. 'ಪುಷ್ಪ' ಸಿನಿಮಾ 10 'KGF' ಸಿನಿಮಾಗಳಿಗೆ ಸಮ ಎಂದಿದ್ರು. ಆದ್ರೆ ಪುಷ್ಪ ಸಿನಿಮಾ ಕೆಜಿಎಫ್ ಸಿನಿಮಾದ ದಾಖಲೆಯನ್ನೇ ಬ್ರೇಕ್ ಮಾಡೋಕೆ ಆಗದೆ ಒದ್ದಾಡಿತ್ತು. ಕೆಜಿಎಫ್ ಚಾಪ್ಟರ್ ಸಿನಿಮಾ ಬಂದಿದ್ದು 2018ರಲ್ಲಿ. 80 ಕೋಟಿಯಲ್ಲಿ ಸಿದ್ಧವಾಗಿದ್ದ ಈ ಸಿನಿಮಾ 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಪುಷ್ಪ ಸಿನಿಮಾ ಸಿದ್ಧವಾಗಿದ್ದು 200 ಕೋಟಿಯಲ್ಲಿ ಆದ್ರೆ ಕಲೆಕ್ಷನ್ ಆಗಿದ್ದು 280 ಕೋಟಿ. ಅಲ್ಲಿಗೆ ಹೆಚ್ಚು ಲಾಭ ಪಡೆದ ಸಿನಿಮಾ ಕೆಜಿಎಫ್ ಆಗಿತ್ತು. ಈ ರೆಕಾರ್ಡ್ ನೋಡಿದ ಸಿನಿ ಪಡಸಾಲೆ ಮಂದಿ ಪುಷ್ಪನಿಂದ ರಾಕಿ(Yash) ರೆಕಾರ್ಡ್ ಬ್ರೇಕ್ ಮಾಡಲಾಗಲಿಲ್ಲ ಅಂತ ಅಲ್ಲು ಅರ್ಜುನ್ರನ್ನ(Allu Arjun) ಅಣಕಿಸಿದ್ರು.

ಇದನ್ನೂ ವೀಕ್ಷಿಸಿ:  Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more