ದೇಶಾದ್ಯಂತ ರಿಲಯನ್ಸ್ ಬಂಕ್‌ ಓಪನ್, ಪೆಟ್ರೋಲ್ 20 ರೂ. ಅಗ್ಗ!?

By Web DeskFirst Published Sep 15, 2018, 7:44 PM IST
Highlights

ತೈಲ ದರ ಏರಿಕೆಯಾಗಿದೆ ಎಂದು ಆರೋಪಿಸಿ ಭಾರತ ಬಂದ್ ಮಾಡಲಾಗಿದೆ. ದಿನೇ ದಿನೇ ಏರುತ್ತಿದೆಯೇ ವಿನಾ ಪೆಟ್ರೋಲ್ ದರದಲ್ಲಿ ಯಾವ ಬದಲಾವಣೆ ಆಗುತ್ತಿಲ್ಲ. ಈ ನಡುವೆ ಒಂದು ಸಂತಸದ ಸುದ್ದಿ ಹೊರಬಿದ್ದಿದೆ. ಏನಪ್ಪಾ ಅಂತೀರಾ!

ಮುಂಬೈ[ಸೆ.15]  ಪ್ರತಿಯೊಬ್ಬ ಭಾರತೀಯನಿಗೂ ಮುಕೇಶ್ ಅಂಬಾನಿ ಒಂದು ವಿಶೇಷವಾದ ಯೋಜನೆಯನ್ನು ತಂದಿದ್ದಾರೆ, ಅದೇನು ಅಂದರೆ ಈಗಾಗಲೇ ಅಂಬಾನಿಯ ರಿಲೆನ್ಸ್ ಜಿಯೋ ಮಾರುಕಟ್ಟೆಗೆ ಲಗ್ಗೆ ಇಟ್ಟು ಕ್ರಾಂತಿ ಮಾಡಿದೆ. ಜಿಯೋ ಹೊಡೆತಕ್ಕೆ ಸಿಕ್ಕ ಉಳಿದ ಕಂಪನಿಗಳು ಡಾಟಾ ದಾರವನ್ನು ಇಳಿಸಿವೆ. ಅಂತಿಮ ಲಾಭ ಗ್ರಾಹಕನಿಗೆ ಸಿಕ್ಕಿದೆ.

ಅದೇ ರೀತೀ ಒಂದು ದೊಡ್ಡ ಖುಷಿ ಸಮಾಚಾರ ಹೊರಬಿದ್ದಿದೆ ಅದೇನೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಗಳು ಲೀಟರ್ ಗೆ 20 ರೂ. ಕಡಿಮೆ ನೀಡಲು ಅಂಬಾನಿ ಒಡೆತನದ ರಿಲಯನ್ಸ್ ಮುಂದಾಗಿದೆ.

ಮೋದಿ ಹೆಸರಲ್ಲಿ ಪೆಟ್ರೋಲ್ ಬೇಕಿರದ ಬೈಕ್ ಸಂಶೋಧಿಸಿದ ಮುಸ್ಲಿಂ ಯುವಕ

ಇದಕ್ಕೆ ಕಾರಣ ಹಲವು ವರ್ಷಗಳಿಂದ ನಿಂತುಹೋಗಿದ್ದ ರಿಲೈನ್ಸ್ ಪೆಟ್ರೋಲಿಯಂ ಅನ್ನು ಮತ್ತೆ ಶುರುಮಾಡಿದೆ ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಎಲ್ಲ ಬಂಕ್ ಗಳಲ್ಲಿಯೂ 20 ರೂ. ಕಡಿಮೆಗೆ ಪೆಟ್ರೋಲ್ ನೀಡಲಾಗುತ್ತದೆ.

ಭಾರತದಲ್ಲಿ ಇರುವ ರಿಲೈನ್ಸ್ ನ 1400 ಬಂಕ್ ಗಳಲ್ಲಿ 1100 ಬಂಕ್ ಗಳನ್ನೂ ಇನ್ನು ಮೂರೂ ತಿಂಗಳುಗಳಲ್ಲಿ ಶುರು ಮಾಡಲಿದ್ದೇವೆ ಎಂದು ಕಂಪನಿ ತಿಳಿಸಿದೆ.

ಸೂಚನೆ: ಇಂಥದ್ದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಆಧಾರಗಳು ಇಲ್ಲದೇ ಇರಬಹುದು. ಆದರೆ  ಇಂಥದ್ದೊಂದು ಸಾಧ್ಯತೆಯನ್ನು ನಾವೆಲ್ಲರೂ ಎದುರು ನೋಡಲು ಅಡ್ಡಿಯಿಲ್ಲ. ಕನಸು ಕಂಡರೆ ಕಳೆದುಕೊಳ್ಳುವುದೇನಿದೆ?

 

click me!