ವೇಶ್ಯೆಯ ಗಿರಾಕಿ ಮೇಲೆ ವೇಶ್ಯಾವಾಟಿಕೆ ಕೇಸ್‌ ಹಾಕುವಂತಿಲ್ಲ

By ವೆಂಕಟೇಶ್ ಕಲಿಪಿFirst Published May 5, 2017, 4:48 AM IST
Highlights

ಮೊದಲು ಎಫ್‌ಐಆರ್‌ ದಾಖಲಿ ಬಳಿಕ ದಾಳಿ

ಅನೈತಿಕ ವ್ಯವಹಾರ ನಿಷೇಧ ಕಾಯ್ದೆಯ ಅಧಿನಿಯಮಗಳ ಪ್ರಕಾರ ಯಾವುದೇ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಮಾಹಿತಿ ಬಂದಾಗ, ಮೊದಲು ಆ ಬಗ್ಗೆ ಎಫ್‌ಐಆರ್‌ ದಾಖಲಿಸಿ ನಂತರ ದಾಳಿ ನಡೆಸಬೇಕು. ಆದರೆ, ಈ ಎರಡು ಪ್ರಕರಣಗಳಲ್ಲಿ ಪೊಲೀಸರು ಮೊದಲು ದಾಳಿ ನಡೆಸಿ, ಸ್ಥಳದಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡ ಬಳಿಕ ಎಫ್‌ಐಆರ್‌ ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ ಕ್ರಮ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ವೇಶ್ಯಾವಾಟಿಕೆಯ ಗಿರಾಕಿಗಳ ಮೇಲೆ ಅನೈತಿಕ ವ್ಯವಹಾರಗಳ ನಿಷೇಧ ಕಾಯ್ದೆಯಡಿ ಯಾವ ಸೆಕ್ಷನ್‌ಗಳಡಿಯೂ ದೂರು ದಾಖಲಿಸಲು ಅವಕಾ ಶವಿಲ್ಲ ಎಂಬುದು ನಮ್ಮ ವಾದ. ನಮ್ಮ ವಾದವನ್ನು ನ್ಯಾಯಾಲಯ ಪರಿಗಣಿಸಿದೆ.

ಅರುಣ್‌ ಶ್ಯಾಮ್‌ ಹರೀಶ್‌ ಪರ ವಕೀಲ.

ಬೆಂಗಳೂರು (ಮೇ.05) : ವೇಶ್ಯೆಯರ ಬಳಿಗೆ ತೆರಳುವ ಗಿರಾಕಿಗಳು ವಿರುದ್ಧ ಅನೈತಿಕ ವ್ಯವಹಾರ ನಿಷೇಧ ಕಾಯ್ದೆ-1956ರಡಿ ‘ವೇಶ್ಯಾವಾಟಿಕೆ ನಡೆಸಿದ ಅಥವಾ ವೇಶ್ಯಾವಾಟಿಕೆಗೆ ಪ್ರೋತ್ಸಾಹಿಸಿದ' ಆರೋಪಗಳಡಿ ದೂರು ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಆದೇಶ ಮಾಡಿದೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ನಾಲ್ವರು ಗಿರಾಕಿಗಳ ವಿರುದ್ಧ ವೇಶ್ಯಾ ವಾಟಿಕೆ ನಡೆಸಿದ ಹಾಗೂ ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಿದ ವಿವಿಧ ಆರೋಪಗಳಡಿ ಪೊಲೀಸರು ದೂರು ದಾಖಲಿಸಿದ್ದರು. ಪೊಲೀ ಸರ ಈ ಕ್ರಮ ಪ್ರಶ್ನಿಸಿ ಗಿರಾಕಿಗಳು ಹೈಕೋರ್ಟ್‌ ಮೆಟ್ಟಿಲೇರಿ, ವೇಶ್ಯಾವಾಟಿಕೆಯ ಗಿರಾಕಿಗಳ ವಿರುದ್ಧ ಅನೈತಿಕ ವ್ಯವಹಾರ ನಿಷೇಧ ಕಾಯ್ದೆ- 1956ರಡಿ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಅರ್ಜಿದಾರರ (ಗಿರಾಕಿಗಳ) ವಾದ ಮಾನ್ಯ ಮಾಡಿದ ಹೈಕೋರ್ಟ್‌, ಅವರ ವಿರುದ್ಧ ಪೊಲೀಸರು ದಾಖಲಿಸಿದ ದೂರು ರದ್ದುಪಡಿಸಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ, ಪೊಲೀಸ್‌ ವೆಬ್‌ಸೈಟ್‌ ಮತ್ತು ಟ್ವೀಟರ್‌ನಂತಹ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿರುವ ಅರ್ಜಿದಾರರ ಫೋಟೋ ಹಾಗೂ ಇತರೆ ಮಾಹಿತಿಯನ್ನು ಕೂಡಲೇ ತೆಗೆದುಹಾಕಬೇಕು ಎಂದು ಪೊಲೀ ಸರಿಗೆ ತಾಕೀತು ಸಹ ಮಾಡಿದೆ. ಈ ಮಧ್ಯೆ ಪ್ರಕರಣದಲ್ಲಿ ಅರ್ಜಿದಾರರಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 370 (ದೈಹಿಕ ಅಥವಾ ಲೈಂಗಿಕ ಶೋಷಣೆ ಆರೋಪ) ಅನ್ವ ಯಿಸುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಪ್ರಕರಣ-1: ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನ ಕಲ್ಯಾಣನಗರದ ಗೆಲಾಕ್ಸಿ ಸ್ಪಾನಲ್ಲಿ ಕೆಲ ವ್ಯಕ್ತಿಗಳು ಅನೈತಿಕ ಚಟುವಟಕೆಗಳಲ್ಲಿ ನಿರತರಾಗಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಬಾಣಸವಾಡಿ ಠಾಣೆ ಪೊಲೀಸರು 2017ರ ಏ.2ರಂದು ಸ್ಪಾ ಮೇಲೆ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದ್ದರು. ದಾಳಿ ವೇಳೆ ಐವರು ಮಹಿಳೆಯನ್ನು ರಕ್ಷಿಸಿದ್ದಾಗಿ ಪೊಲೀಸರು ಹೇಳಿಕೊಂಡಿದ್ದರು. ದಾಳಿ ವೇಳೆ ಗಿರಾಕಿಯಾಗಿದ್ದ ಹೆಬ್ಬಾಳದ ಕೆಂಪಾಪುರದ ಕಾಫಿ ಬೋರ್ಡ್‌ ಲೇಔಟ್‌ ನಿವಾಸಿಯೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

ಪ್ರಕರಣ-2: ಮೈಸೂರಿನ ಲಕ್ಷ್ಮೇನಗರ ಬಳಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ವೇಶ್ಯಾ ವಾಟಿಕೆ ನಡೆಸುತ್ತಿರುವ ಹಾಗೂ ಕೆಲ ಅಮಾಯಕ ಯುವತಿಯರನ್ನು ಬಲವಂತವಾಗಿ ವೇಶ್ಯಾವಾ ಟಿಕೆಗೆ ತಳ್ಳುತ್ತಿರುವ ಮಾಹಿತಿ ವಿಜಯನಗರ ಠಾಣೆ ಪೊಲೀಸರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2015ರ ಸೆ.9ರಂದು ಆ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ, ವೇಶ್ಯಾವಾಟಿಕೆ ಸ್ಥಳಕ್ಕೆ ತೆರಳಿ, ತಲಾ 1000 ರು. ಪಾವತಿಸಿ ಅಲ್ಲಿನ ಯುವತಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿ ದ್ದರು. ಈ ಎರಡು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಅನೈತಿಕ ವ್ಯವಹಾರ ನಿಷೇಧ ಕಾಯ್ದೆ-1956ರ ಸೆಕ್ಷನ್‌ 3, 4, 5, 6, 7 ಮತ್ತು ಐಪಿಸಿ ಸೆಕ್ಷನ್‌ 370 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಪೊಲೀಸರು ದಾಖಲಿಸಿದ ಎಫ್‌ಐಆರ್‌ ರದ್ದು ಕೋರಿ ಎಲ್ಲ ಆರೋಪಿಗಳು ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಗಿರಾಕಿಗಳು ವೇಶ್ಯಾವಾಟಿಕೆ ನಡೆಸುವವರಲ್ಲ: ಪ್ರಕರಣಗಳ ವಿಚಾರಣೆ ನಡೆಸಿದ ಹೈಕೋರ್ಟ್‌, ಅರ್ಜಿದಾರರು ವೇಶ್ಯಾವಾಟಿಕೆಯ ಗಿರಾಕಿಗಳ ಷ್ಟೇ ಆಗಿದ್ದಾರೆ. ಅರ್ಜಿದಾರರ (ಗಿರಾಕಿಗಳ) ವಿರುದ್ಧದ ಎಫ್‌ಐಆರ್‌ನಲ್ಲಿ ಯಾವ ಸೆಕ್ಷನ್‌ನ ಆರೋಪಗಳೂ ಇಲ್ಲ ಮತ್ತು ಗಿರಾಕಿಗಳಿಗೆ ಈ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ ಎಂದು ಹೇಳಿತು. ನಂತರ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿತು.

click me!