ಏಮ್ಸ್‌ನಿಂದ ಅಧಿಕೃತ ಪ್ರಕಟಣೆ, ವಾಜಪೇಯಿ ಸ್ಥಿತಿ ಗಂಭೀರ

By Web DeskFirst Published Aug 15, 2018, 9:11 PM IST
Highlights

ದೆಹಲಿ ಏಮ್ಸ್ ಆಸ್ಪತ್ರೆ ವಾಜಪೇಯಿ ಆರೋಗ್ಯದ ಮಾಹಿತಿ ಬಿಡುಗಡೆ  ಮಾಡಿದೆ. ಮುಂದಿನ 24 ಗಂಟೆ ಏನು ಹೇಳಲು ಸಾಧ್ಯವಿಲ್ಲ. ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ

ನವದೆಹಲಿ[ಆ.15]  ದೆಹಲಿ ಏಮ್ಸ್ ಆಸ್ಪತ್ರೆ ವಾಜಪೇಯಿ ಆರೋಗ್ಯದ ಮಾಹಿತಿ ಬಿಡುಗಡೆ  ಮಾಡಿದೆ. ಮುಂದಿನ 24 ಗಂಟೆ ಏನು ಹೇಳಲು ಸಾಧ್ಯವಿಲ್ಲ. ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ. ವೆಂಟಿಲೆಟರ್ ಮೂಲಕ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ಭೇಟಿ ನೀಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದ ವಿವರ ಪಡೆದುಕೊಂಡಿದ್ದಾರೆ.

ವಾಜಪೇಯಿ ಅವರ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿಯನ್ನು ಯಾರೂ ನೀಡಿಲ್ಲ. ಮೂತ್ರಪಿಂಡದ ಸೋಂಕು, ಎದೆ ನೋವಿನಿಂದ ಬಳಲುತ್ತಿರುವ ಮುತ್ಸದ್ಧಿ ವಾಜಪೇಯಿ ಜೂನ್ 11 ರಂದು ಏಮ್ಸ್ ಗೆ ದಾಖಲಾಗಿದ್ದಾರೆ. 93 ವರ್ಷ ವಯಸ್ಸಿನ  ಅಜಾತಶತ್ರು ವಾಜಪೇಯಿ ಮಧುಮೇಹವನ್ನು ಎದುರಿಸುತ್ತಿದ್ದಾರೆ.

click me!