ರುವಾಂಡಾದಲ್ಲಿ ಪ್ರಧಾನಿ ಮೋದಿಯಿಂದ ಗೋದಾನ!

First Published Jul 24, 2018, 8:15 PM IST
Highlights

ರುವಾಂಡಾ ಜನರಿಗೆ ಗೋದಾನ ಮಾಡಿದ ಮೋದಿ

ಗಿರಿಂಕಾ ಕಾರ್ಯಕ್ರಮದಡಿ ಮೋದಿ ಗೋದಾನ

ರುವಾಂಡಾ ಅಧ್ಯಕ್ಷರ ಸಮ್ಮುಖದಲ್ಲಿ ಗೋವು ಹಸ್ತಾಂತರ

ಮೋದಿ ಗೋದಾನಕ್ಕೆ ಟ್ವಿಟ್ಟರ್‌ನಲ್ಲಿ ಕುಹುಕ

ಕಿಗಾಲಿ(ಜು.24): ಹಸುಗಳನ್ನೇ ಹೊಂದಿರದ ರುವಾಂಡಾದ ಗ್ರಾಮಸ್ಥರಿಗಾಗಿ ಪ್ರಧಾನಿ ನರೇಂದ್ರ ಮೋದಿ  200 ಗೋವುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

The Girinka Programme is helping transform the lives of people across rural Rwanda.

I also told President about the initiatives we are taking in India for the development of our villages. pic.twitter.com/po4fH6X5df

— Narendra Modi (@narendramodi)

ರುವಾಂಡಾ ಸರ್ಕಾರದ ಗಿರಿಂಕಾ ಕಾರ್ಯಕ್ರಮದಡಿ ಪ್ರಧಾನಿ ಮೋದಿ ಈ ಗೋವುಗಳನ್ನು ರುವಾಂಡಾ ಅಧ್ಯಕ್ಷ ಪೌಲ್‌ ಕಗಾಮೆ ಅವರ ಉಪಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಉಡುಗೊರೆಯಾಗಿ ನೀಡಿದರು. 

ರುವಾಂಡಾದ ಗ್ರಾಮೀಣ ಜನರ ಆರ್ಥಿಕಾಭಿವೃದ್ಧಿಗಾಗಿ ಭಾರತ ಗೋವುಗಳನ್ನು ಉಡುಗೊರೆಯಾಗಿ ನೀಡಿರುವುದು ಭಾರತೀಯರಿಗೆ ಅಚ್ಚರಿ ಹಾಗೂ ಸಂತಸ ಉಂಟು ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Mass alert to all gau-rakshaks: Go protect these cows in Rwanda pls.
Go.
Go now. https://t.co/ZhTop5B2so

— Meghnad (@Memeghnad)

ಇದೇ ವೇಳೆ ಪ್ರಧಾನಿ ಮೋದಿ ರುವಾಂಡಾ ಗ್ರಾಮಸ್ಥರಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ಟ್ವಿಟ್ಟರ್ ನಲ್ಲಿ ಕೆಲವರು ಕುಹುಕವಾಡಿದ್ದಾರೆ. ರುವಾಂಡಾದ ಜನರು ಗೋಭಕ್ಷಕರಾಗಿದ್ದು, ಮೋದಿ ತಮ್ಮ ಕೈಯಾರೆ ಭಾರತೀಯ ಗೋವುಗಳನ್ನು ಅವರಿಗೆ ತಿನ್ನಲು ಕೊಟ್ಟಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Modi's gift of 200 cows to the Rawandas is a tad confusing they like cows in that country everywhere but especially on the table, may have to raise an expeditionary Gau rakshak force - i can see them para-dropping haphazardly overnight!

— ninadsheth (@ninadsheth)
click me!