ಕೇಂದ್ರ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಲು ಸಜ್ಜು ..?

By Kannadaprabha NewsFirst Published Jul 18, 2018, 9:43 AM IST
Highlights

ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದೀಗ ಮತ್ತೊಂದು ಶಾಕ್ ಕಾದಿದೆ. ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು ವಿಪಕ್ಷಗಳು ಇದೀಗ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ಸಜ್ಜಾಗಿವೆ.  

ನವದೆಹಲಿ : ಈ ಹಿಂದಿನ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ವಿಫಲ ಯತ್ನ ನಡೆಸಿದ್ದ ಪ್ರತಿಪಕ್ಷಗಳು ಈ ಅಧಿವೇಶನದಲ್ಲಿ ಪುನಃ ಅವಿಶ್ವಾಸ ನಿಲುವಳಿ ಮಂಡಿ ಸಲು ನಿರ್ಧರಿಸಿವೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರ ಣೆಗೆ ಸಂಬಂಧಿಸಿದಂತೆ ಅವಿಶ್ವಾಸ ನಿರ್ಣಯ ಮಂಡನೆಗೆ ಸಮ್ಮತಿ ಸೂಚಿಸಲಾಗಿದೆ’ ಎಂದು ಕಾಂಗ್ರೆಸ್ ನಾಯಕ ಖರ್ಗೆ ತಿಳಿಸಿದರು. 

ಸಂಸತ್ತಿನ ಮುಂಗಾರು ಅಧಿವೇಶನ ಬುಧವಾರದಿಂದ ಆರಂಭವಾಗುತ್ತಿದ್ದು, ಯಥಾಪ್ರಕಾರ ಕೋಲಾಹಲ ಎಬ್ಬಿಸುವ ನಿರೀಕ್ಷೆಯಿದೆ. ಮಕ್ಕಳ ಕಳ್ಳರೆಂದು ಅಮಾಯಕರನ್ನು ಬಡಿದು ಕೊಲ್ಲುವುದು, ನಿರುದ್ಯೋಗ, ಮಹಿಳಾ ಸುರಕ್ಷತೆ, ಜಮ್ಮು-ಕಾಶ್ಮೀರ ಪರಿಸ್ಥಿತಿ, ಕದನ ವಿರಾಮ ಉಲ್ಲಂಘನೆ, ಬೆಲೆಯೇರಿಕೆ - ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿಲು ಕಾಂಗ್ರೆಸ್ ಮುಂದಾಳತ್ವದ ಪ್ರತಿಪಕ್ಷಗಳು ನಿರ್ಧರಿಸಿವೆ. ಈ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಿದರೆ ಮಾತ್ರ ಸುಗಮ ಸಂಸತ್ ಕಲಾಪಕ್ಕೆ ಅವಕಾಶ ನೀಡುವುದಾಗಿ ಹೇಳಿವೆ.

click me!