
ಬೆಂಗಳೂರು (ಜ.31): ರಾಜಧಾನಿ ಸೇರಿದಂತೆ ತುಮಕೂರು, ಬೀದರ್, ದಾವಣಗೆರೆ ಹಾಗೂ ರಾಯಚೂರು- ಕರ್ನಾಟಕದ ಅತಿ ಮಲಿನ ನಗರಗಳು ಎಂದು ಪರಿಸರ ಸ್ವಯಂಸೇವಾ ಸಂಸ್ಥೆಯಾದ ‘ಗ್ರೀನ್ ಪೀಸ್’ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ರಾಜ್ಯದ 10 ಅತಿ ಹೆಚ್ಚು ವಾಯುಮಾಲಿನ್ಯಪೀಡಿತ ನಗರಗಳಲ್ಲಿ ಇವು ಮೊದಲ 5 ಸ್ಥಾನ ಪಡೆದಿವೆ.
ಇನ್ನು ಕರ್ನಾಟಕದ ಇತರ ಹೆಚ್ಚು ಮಲಿನ ನಗರಿಗಳೆಂದರೆ ಹುಬ್ಬಳ್ಳಿ, ಧಾರವಾಡ, ಕೋಲಾರ, ಕಲಬುರಗಿ ಹಾಗೂ ಬೆಳಗಾವಿ. ಈ ನಗರಗಳಲ್ಲಿ ಅತಿ ಹೆಚ್ಚು ಧೂಳಿನ ಪ್ರಮಾಣವಿದ್ದು, ಇದು ಶ್ವಾಸಕೋಶಕ್ಕೆ ಹೋಗಿ ಗಂಭೀರ ಆರೋಗ್ಯ ಪರಿಣಾಮ ಬೀರುತ್ತದೆ ಎಂದು ವರದಿ ಎಚ್ಚರಿಸಿದೆ. ಇದೇ ವೇಳೆ ಕರ್ನಾಟಕದ 18 ಪ್ರಮುಖ ನಗರಗಳಲ್ಲಿ ಯಾವ ನಗರದ ಮಾಲಿನ್ಯ ಪ್ರಮಾಣವೂ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷತಾ ಮಿತಿ (ಪ್ರತಿ ಕ್ಯೂಬಿಕ್ ಮೀಟರ್‌ಗೆ 20 ಮೈಕ್ರೋಗ್ರಾಂ) ಒಳಗೆ ಇಲ್ಲ. ಇನ್ನು 10 ನಗರಗಳಂತೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (60 ಮೈಕ್ರೋಗ್ರಾಂ/ ಪ್ರತಿ ಕ್ಯೂಬಿಕ್ ಮೀಟರ್‌ಗೆ) ನಿಗದಿಪಡಿಸಿದ ಮಾನದಂಡಕ್ಕಿಂತ ಬಹುದೂರ ಸಾಗಿವೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಆದರೆ ಉತ್ತರ ಭಾರತಕ್ಕಿಂತ ವಾಯುಮಾಲಿನ್ಯದಲ್ಲಿ ದಕ್ಷಿಣ ಭಾರತ ಉತ್ತಮ ಎಂಬ ಸಮಾಧಾನದ ಅಂಶ ಕೂಡ ವರದಿಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.