ಸಾವಿರಾರು ಕೋಟಿ ವಂಚಕ ನೀರವ್ ಮೋದಿ ಈಗ ಅಮೆರಿಕಾದ ಈ ಊರಲ್ಲಿ

First Published Apr 26, 2018, 10:30 PM IST
Highlights

ಈ ವರ್ಷದ ಜನವರಿ 1 ರಂದು ಭಾರತದಿಂದ ಪಲಾಯನಗೖದ ನೀರವ್ ಫೆಬ್ರವರಿಯಲ್ಲಿ ಯುಎಇನಲ್ಲಿ, ಅದೇ ಫೆಬ್ರವರಿ 14ಕ್ಕೆ ಹಾಂಕ್’ಕಾಂಗ್’ಗೆ ತೆರಳಿದ್ದ. ಈಗ ನ್ಯೂಯಾರ್ಕ’ನಲ್ಲಿ ಉಳಿದುಕೊಂಡಿದ್ದಾನೆ.  ಭಾರತ ಸರ್ಕಾರ ಫೆಬ್ರವರಿಯಲ್ಲಿ ಈತನ ಪಾಸ್’ಪೋರ್ಟ್’ಅನ್ನು ರದ್ದುಗೊಳಿಸಿದೆ.   

ನವದೆಹಲಿ(ಏ.26): ದೇಶಕ್ಕೆ ಸಾವಿರಾರು ವಂಚಿಸಿದ ಮಲ್ಯ ಲಂಡನ್ ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್’ಗೆ ವಂಚಿಸಿರುವ ನೀರವ್ ಮೋದಿ ಅಮೆರಿಕಾದ ನ್ಯೂಯಾರ್ಕ್ ಪಟ್ಟಣದಲ್ಲಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಈ ವರ್ಷದ ಜನವರಿ 1 ರಂದು ಭಾರತದಿಂದ ಪಲಾಯನಗೖದ ನೀರವ್ ಫೆಬ್ರವರಿಯಲ್ಲಿ ಯುಎಇನಲ್ಲಿ, ಅದೇ ಫೆಬ್ರವರಿ 14ಕ್ಕೆ ಹಾಂಕ್’ಕಾಂಗ್’ಗೆ ತೆರಳಿದ್ದ. ಈಗ ನ್ಯೂಯಾರ್ಕ’ನಲ್ಲಿ ಉಳಿದುಕೊಂಡಿದ್ದಾನೆ.  ಭಾರತ ಸರ್ಕಾರ ಫೆಬ್ರವರಿಯಲ್ಲಿ ಈತನ ಪಾಸ್’ಪೋರ್ಟ್’ಅನ್ನು ರದ್ದುಗೊಳಿಸಿದೆ.   
ವಜ್ರೋದ್ಯಮಿಯಾದ ನೀರವ್ ತಮ್ಮ ಸಂಬಂಧಿ ಮೆಹುಲ್ ಚೋಕ್ಸಿ ಹೆಸರಿನಲ್ಲಿ ಭಾರತದ 2ನೇ ಪ್ರತಿಷ್ಠಿತ ಬ್ಯಾಂಕ್’ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್’ಗೆ 12 ಸಾವಿರ ಕೋಟಿ ವಂಚಿಸಿದ್ದಾನೆ. ಕೇಂದ್ರ ಸರ್ಕಾರ ನೀರವ್ ಸೇರಿದಂತೆ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು 1997 ರ ಆರ್ಥಿಕ ಅಪರಾಧಿಗಳ ಹಸ್ತಾಂತರ ಒಪ್ಪಂದದ ಕಾಯ್ದೆಯನ್ವಯ ಭಾರತಕ್ಕೆ ಕರೆತರಲು ನಿರಂತರ ಪ್ರಯತ್ನ ನಡೆಸುತ್ತಿದೆ.

click me!