ಹಾಸ್ಟೆಲ್ ಹುಡುಗಿಯರನ್ನು ಕಾಡುವ ನೈಟ್ ರೋಮಿಯೋ!

Jul 22, 2018, 11:39 AM IST

ಮೈಸೂರು(ಜು.22): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೈಟ್ ರೋಮಿಯೋ ಉಪಟಳ ಶುರುವಾಗಿದೆ. ಇಲ್ಲಿನ ಕೆಆರ್ ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿದ ಸೈಕೋ ಕಳ್ಳನೋರ್ವ, ವಿದ್ಯಾರ್ಥಿನಿ ಕೋಣೆಗೆ ನುಗ್ಗಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ.

  
ಸೆಕ್ಯೂರಿಟಿ ಗಾರ್ಡ್ ಕ್ಯಾಪ್ ಹಾಕಿಕೊಂಡು ಹಾಸ್ಟೆಲ್ ಗೆ ನುಗ್ಗಿದ ಕಳ್ಳ, ವಿದ್ಯಾರ್ಥಿನಿ ಕೋಣೆಗೆ ನುಗ್ಗಿ ಮೊಬೈಲ್ ಕದ್ದಿದ್ದಾನೆ. ಈ ವೇಳೆ ಈತನನ್ನು ಗಮನಿಸಿದ ವಿದ್ಯಾರ್ಥಿನಿಗೆ ಕತ್ತು ಹಿಸುಕಿ ಅಸಭ್ಯ ವರ್ತನೆ ತೋರಿದ್ದಾನೆ.
 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..