ತ್ಯಾಜ್ಯ ವಿಲೇವಾರಿ ಪ್ರಕರಣ: ಬಿಬಿಎಂಪಿಗೆ 5 ಕೋಟಿ ದಂಡ!

Oct 25, 2018, 1:48 PM IST

ನವದೆಹಲಿ(ಅ.25): ಬಾಗಲೂರಿನ ಕ್ವಾರಿಗಳಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ. ಬಿಎಂಪಿಗೆ 5 ಕೋಟಿ ರೂ. ದಂಡ ಹಾಕಿದೆ. ಕ್ವಾರಿಗಳಲ್ಲಿನ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಬೇಕು ಎಂಬ ಹಸಿರು‌ ನ್ಯಾಯಾಧಿಕರಣದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಈ ದಂಡ ವಿಧಿಸಲಾಗಿದೆ. ಒಂದು ತಿಂಗಳೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದಂಡ ಪಾವತಿಸುವಂತೆ ಸೂಚನೆ ಕೂಡ ನೀಡಿದೆ. ಅಲ್ಲದೇ  ದಂಡದ ಹಣವನ್ನು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಸೂಚಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..