ಬಾಬಾ ರಾಮ್ ದೇವ್‌ಗೆ ಪ್ರಧಾನಿ ಪಟ್ಟ?

By Web DeskFirst Published Jul 28, 2018, 12:46 PM IST
Highlights

ಯೋಗಗುರು ಹಾಗೂ ಪತಂಜಲಿ ಉತ್ಪನ್ನಗಳ ಸಂಸ್ಥಾಪಕರಾದ ಬಾಬಾ ರಾಮ್ ದೇವ್ ಅವರು ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್  ವರದಿ ಮಾಡಿದೆ.

ವಾಷಿಂಗ್ಟನ್ : ಯೋಗ ಗುರು ಬಾಬಾ ರಾಮ್ ದೇವ್ ಅವರು ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಗಳ್ಲಿಯೂ ಕೂಡ ಫೇಮಸ್ ಆಗಿದ್ದಾರೆ. ಅವರನ್ನು ನ್ಯೂ ಯಾರ್ಕ್ ಟೈಮ್ಸ್  ಪತ್ರಿಇಕೆಯು ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಕೆ ಮಾಡಿದ್ದು, ಅವರು ದೇಶದ ಮುಂದಿನ ಪ್ರಧಾನಿಯಾಗಲು ಅವರು ಸಮರ್ಥರಿದ್ದಾರೆ ಎಂದು ಹೇಳಿದೆ.   

ರಾಮ್ ದೇವ್ ಅವರು ಯೋಗ  ಹಾಗೂ ಪತಂಜಲಿ ಉತ್ಪನ್ನಗಳಿಂದ ಫೇಮಸ್ ಆಗಿದ್ದು, ಹೆಚ್ಚು ಕಾಂಟ್ರವರ್ಸಿ ಲೀಡರ್ ಎನಿಸಿಕೊಂಡ  ಟ್ರಂಪ್ ಅವರ ವ್ಯಕ್ತಿತ್ವದೊಂದಿಗೆ ಹೋಲಿಸಲಾಗಿದೆ. 

ಪ್ರಧಾನಿಯಾಗಿ ದೇಶ ಮುನ್ನಡೆಸುವ ಸಾಮರ್ಥ್ಯ ರಾಮ್ ದೇವ್ ಅವರಿಗೆ ಇದ್ದು, ಟ್ರಂಪ್ ರಂತೆಯೇ ಅವರೂ ಕೂಡ ಕೊಟ್ಯಂತರ ಮೌಲ್ಯದ ವ್ಯವಹಾರ ನಡೆಸುತ್ತಿದ್ದಾರೆ.  ಅಲ್ಲದೇ ಮಾಧ್ಯಮ ಸ್ನೇಹಿ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳಿದೆ. 

ಸದ್ಯ ಅಮೆರಿಕ ಅಧ್ಯಕ್ಷರಾಗಿರುವ ಟ್ರಂಪ್ ರಂತೆಯೇ ರಾಮ್ ದೇವ್ ಕೂಡ ದೇಶವನ್ನು ಮುನ್ನಡೆಸಲು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ.  ದೇಶಕ್ಕೆ  ರಾಮ್ ದೇವ್ ಅವರು ಪವರ್ ಫುಲ್ ಪ್ರಧಾನಿ ಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಹೇಳಲಾಗಿದೆ. 

click me!