‘ದೇಶಕ್ಕೆ ಎಂದಿಗೂ ಅಚ್ಛೇ ದಿನ ಬರುವುದೇ ಇಲ್ಲ'

By Web DeskFirst Published Nov 8, 2018, 8:14 PM IST
Highlights

ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ 2 ವರ್ಷ. ದೇಶದ ಜನತೆಗೆ ಅಚ್ಛೆ ದಿನ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಜೇಶನ್ ಮಾಡಿ ಮುಗಿಸಿದ್ದರು. ಆದರೆ ಈಗ ದೇಶದ ಜನತೆಗೆ ಎಂದಿಗೂ ಅಚ್ಛೆ ದಿನ ಬರಲ್ಲ ಎಂದು ‘ಮೋದಿಯೇ’ ಹೇಳಿದ್ದಾರೆ! ಯಾಕೆ ಅರ್ಥ ಆಗ್ತಾ ಇಲ್ಲವೇ?

ಛತ್ತೀಸ್ ಗಢ[ನ.08]  ದೇಶಕ್ಕೆ ಅಚ್ಛೇ ದಿನ ಬರಲು ಸಾಧ್ಯವೇ ಇಲ್ಲ ಎಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ ಅಲ್ಲ. ನರೇಂದ್ರ ಮೋದಿ ಅವರನ್ನೇ ಹೋಲುವ, ಅವರ ಶೈಲಿಯಲ್ಲೇ ಮಾತನಾಡುವ ಅಭಿನಂದನ್ ಪಾಠಕ್!

ಅವರೇ ಛತ್ತೀಸ್ ಗಢ ನಕ್ಸಲ್ ಪೀಡಿತ ಪ್ರದೇಶ ಬಸ್ತಾರ್ ನ ಕಾಂಗ್ರೆಸ್ ಪ್ರಚಾರಕ ಅಭಿನಂದನ್ ಪಾಠಕ್  ಅಚ್ಛೆ ದಿನ ಬರುವುದೇ ಇಲ್ಲ ಎಂದು ವಾದಿಸುತ್ತಾರೆ. ಕಳೆದ ತಿಂಗಳು ನಟ, ರಾಜಕಾರಣಿ ರಾಜ್ ಬಬ್ಬರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರಿದ್ದಾರೆ.  ಇದಕ್ಕೂ ಮುನ್ನ ಬಿಜೆಪಿ ನೇತೃತ್ವದ ಎನ್ ಡಿಎ ಸಹಯೋಗಿ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ [ಅಠವಾಳೆ]ದ ಉತ್ತರಪ್ರದೇಶ ರಾಜ್ಯದ ಉಪಾಧ್ಯಕ್ಷರಾಗಿದ್ದರು.

ನಾನು ನೋಡಲು ಮೋದಿಯವರಂತೆ ಇದ್ದ ಕಾರಣ ಜನರು ನನ್ನ ಬಳಿ ಎಲ್ಲಿ ಅಚ್ಛೆ ದಿನ್ ಎಂದು ಕೇಳುತ್ತಿದ್ದರು. ಆದರೆ ಮೋದಿ ಆಡಳಿತದಲ್ಲಿ ಸಾಮಾನ್ಯ ಪ್ರಜೆ  ಮತ್ತಷ್ಟು ಕೆಳಕ್ಕೆ ತಳ್ಳಲ್ಪಟ್ಟಿದ್ದಾನೆ. ಅಚ್ಛೇ ದಿನ್ ಒಂದು ಕನಸು ಮಾತ್ರ ಎಂದು ಹೇಳಿದ್ದಾರೆ.


 

click me!