100 ಕೋಟಿ ಆಸ್ತಿ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ

First Published Apr 21, 2018, 12:44 PM IST
Highlights

ಯುವಸಮೂಹ ಐಷಾರಾಮಿ ಜೀವನದ ಹಿಂದೆ ಓಡುತ್ತಿರುವ ದಿನಗಳಲ್ಲೇ ಕೋಟ್ಯಂತರ ಆಸ್ತಿ, ಅಂತಸ್ತನ್ನು ತೊರೆದ ಮುಂಬೈ ಮೂಲದ ಲೆಕ್ಕಪರಿಶೋಧಕ ಮೋಕ್ಷೇಶ್ ಸೇಠ್ (24) ಶುಕ್ರವಾರ ಸನ್ಯಾಸತ್ವ ಸ್ವೀಕರಿದ್ದಾರೆ.

ಅಹಮದಾಬಾದ್: ಯುವಸಮೂಹ ಐಷಾರಾಮಿ ಜೀವನದ ಹಿಂದೆ ಓಡುತ್ತಿರುವ ದಿನಗಳಲ್ಲೇ ಕೋಟ್ಯಂತರ ಆಸ್ತಿ, ಅಂತಸ್ತನ್ನು ತೊರೆದ ಮುಂಬೈ ಮೂಲದ ಲೆಕ್ಕಪರಿಶೋಧಕ ಮೋಕ್ಷೇಶ್ ಸೇಠ್ (24) ಶುಕ್ರವಾರ ಸನ್ಯಾಸತ್ವ ಸ್ವೀಕರಿದ್ದಾರೆ.

100 ಕೋಟಿ ರು.ಗೂ ಹೆಚ್ಚಿನ ಆಸ್ತಿ ಹೊಂದಿರುವ ವಜ್ರ, ಲೋಹ, ಸಕ್ಕರೆ ಕಾರ್ಖಾನೆ ಉದ್ಯಮ ನಡೆಸುವ ಜೆ.ಕೆ. ಕಾರ್ಪೊರೇಶನ್ ಉದ್ಯಮ ಸಂಸ್ಥೆಯ ಕುಟುಂಬದಿಂದ ಬಂದಿರುವ ಸೇಠ್ ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಜೈನ ಮುನಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಅವರು ಇನ್ನು ‘ಕರುಣಾಪ್ರೇಮ್ ವಿಜಯ್ ಜೀ’ ಎಂದು ಕರೆಸಿಕೊಳ್ಳಲಿದ್ದಾರೆ.

‘ಅಕೌಂಟ್ ಪುಸ್ತಕಗಳನ್ನು ತಿರುವಿ ಹಾಕುವ ಬದಲಿಗೆ, ಸಾಧಾರಣ ವಿದ್ಯಾರ್ಥಿಯಾಗಿ ಧರ್ಮದ ಲೆಕ್ಕಕ್ಕೆ ಮುಂದಾಗಿದ್ದೇನೆ. 15ನೇ ವರ್ಷದಲ್ಲೇ ನಾನು ಜೈನ ಮುನಿಯಾಗುವ ಬಗ್ಗೆ ಯೋಚಿಸಿದ್ದೆ. ಭೌತಿಕ ಪ್ರಪಂಚದಲ್ಲಿ ದೊರೆಯದ ಆಂತರಿಕ ಶಾಂತಿಯನ್ನು ನಾನು ಬಯಸಿದ್ದೇನೆ. ನನಗಾಗಿ ಮಾತ್ರವಲ್ಲದೇ ಎಲ್ಲರ ಸಂತೋಷದಿಂದ ಇರುವುದನ್ನು ನಾನು ಬಯಸುತ್ತೇನೆ,’ ಎಂದು ಸೇಠ್ ಹೇಳಿದ್ದಾರೆ.

click me!