ಮೋದಿ ಮೇಲೆ ಕೆಮಿಕಲ್ ದಾಳಿ ಬೆದರಿಕೆ : ಸೆಕ್ಯೂರಿಟಿ ಗಾರ್ಡ್ ಅರೆಸ್ಟ್

By Web DeskFirst Published Jul 30, 2018, 4:45 PM IST
Highlights

ಪ್ರಧಾನಿ ನರೇಂದ್ರ ಮೋದಿ ಮೇಲೆ ಕೆಮಿಕಲ್ ದಾಳಿ ಮಾಡುವುದಾಗಿ  ಬೆದರಿಕೆ ಹಾಕಿದ್ದ ಸೆಕ್ಯೂರಿಟಿ ಗಾರ್ಡ್ ಇದೀಗ ಅರೆಸ್ಟ್ ಆಗಿದ್ದಾನೆ. 

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಸಾಯನಿಕ ದಾಳಿ ಮಾಡುವುದಾಗಿ ಎನ್ ಎಸ್ ಜಿ ಕಂಟ್ರೋಲ್ ರೂಮ್ ಗೆ ಕರೆ ಮಾಡಿದವನನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ. 

ಕಾಶಿನಾಥ್ ಮಂಡಲ್ ಎನ್ನುವ ಈ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ಡಿ.ಬಿ ಮಾರ್ಗ ಪೊಲೀಸರು ಈತನನ್ನೆ ಕಳೆದ ಜುಲೈ  27ರಂದೇ ಬಂಧಿಸಿದ್ದಾರೆ. 

ದಿಲ್ಲಿಯ ಎನ್ ಎಸ್ ಜಿ ಕಂಟ್ರೋಲ್ ರೂಮ್ ಕರೆ ಮಾಡಿದ್ದು ಶುಕ್ರವಾರ  ಪ್ರಧಾನಿ  ಮೇಲೆ ರಾಸಾಯನಿಕ ದಾಳಿ ಮಾಡುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ದೂರವಾಣಿ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದ ಪೊಲೀಸರು ಆತನನ್ನು ಮುಂಬೈ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಂಧನದ ವೇಳೆ ಆತನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಇತ್ತೀಚೆಗಷ್ಟೇ ನಕ್ಸಲ್ ದಾಳಿಯಲ್ಲಿ  ಈತನ ಸ್ನೇಹಿತರೋರ್ವರು ಮೃತಪಟ್ಟಿದ್ದು, ಇದರಿಂದ ಪ್ರಧಾನಿಯನ್ನು ಭೇಟಿ ಮಾಡಬೇಕಿತ್ತು ಈ ನಿಟ್ಟಿನಲ್ಲಿ ಇಂತಹ ಪ್ಲಾನ್ ಮಾಡಿದ್ದಾಗಿ ಹೇಳಿದ್ದಾನೆ. 

click me!