ಲೋಕಸಭಾ ಚುನಾವಣೆ 2024: ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಸಾವು

Published : May 07, 2024, 09:55 AM IST
ಲೋಕಸಭಾ ಚುನಾವಣೆ 2024: ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಸಾವು

ಸಾರಾಂಶ

 ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಜರುಗಿದೆ. 

ಬೀದರ್(ಮೇ.07):  ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಜರುಗಿದೆ. ಬೀದರ್‌ನ ನಿರ್ಣಾ ಗ್ರಾಮದಲ್ಲಿ ರೈತ ಸಂಪರ್ಕ ಕಚೇರಿಯಲ್ಲಿ ಸಹಾಯಕ ಅಧಿಕಾರಿಯಾಗಿದ್ದ ಆನಂದ (32) ಅವರು ಕರ್ತವ್ಯದ ಸಂದರ್ಭ ಕೋಡಂಬಲ್ ಚೆಕ್ ಪೋಸ್ಟ್‌ನಲ್ಲಿ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಅವರನ್ನು ಸಿಪಿಐ ಶ್ರೀನಿವಾಸ್‌ ಅಲ್ಲಾಪುರೆ ಅವರುಹುಮನಾಬಾದ್ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ನಿಧನರಾಗಿದ್ದಾರೆ.

ಕುಸಿದುಬಿದ್ದು ಸಾವು: 

ಬಾಗಲಕೋಟೆಯ ಮುಧೋಳ ನಗರದಲ್ಲಿ ಜಮಖಂಡಿ ತಾಲೂಕಿನ ಬಿದರಿ ಪ್ರಾಥಮಿಕ ಶಾಲೆ ಶಿಕ್ಷಕ ಗೋವಿಂದಪ್ಪ ಸಿದ್ದಾಪುರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ಬಿಜೆಪಿಗರಿಗೆ ನಾಚಿಕೆಯಾಗಬೇಕು, ಸಲೀಂ ಅಹಮದ್ ವಾಗ್ದಾಳಿ

ಬಿಸಿಲಿ ತಾಪಕ್ಕೆ ಸಿಬ್ಬಂದಿಗೆ ಸ್ಟ್ರೋಕ್‌ 

ಸುರಪುರ: ಯಾದಗಿರಿ ಜಿಲ್ಲೆ ಸುರಪುರದಲ್ಲಿ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲ ತಾಪ ದಿಂದಾಗಿ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ಪಾರ್ಶವಾಯು (ಸ್ಟ್ರೋಕ್‌) ಆಗಿ ಅಸ್ವಸ್ಥಗೊಂಡ ಘಟನೆ ಸೋಮವಾರ ಮಧ್ಯಾಹ್ನ ಇಲ್ಲಿನ ಶ್ರೀಪ್ರಭು ಕಾಲೇಜಿನ ಆವರಣದಲ್ಲಿ ನಡೆದಿದೆ. ಲೋಕಸಭೆ, ವಿಧಾನಸಭೆ ಉಪಚುನಾವಣೆ ನಿಮಿತ್ತ ನಗರದ ಶ್ರೀ ಪ್ರಭು ಕಾಲೇಜಲ್ಲಿ ಬೆಳಗಿನಿಂದಲೇ ಮತಯಂತ್ರಗಳ ವಿತರಣೆ ನಡೆಯುತ್ತಿ ತ್ತು. ಆಗ ಮಲ್ಲಿಕಾರ್ಜುನ (55) ಎಂಬುವರಿಗೆ ಸ್ಟ್ರೋಕ್‌ ಆಗಿದ್ದು, ತಕ್ಷಣ ವೈದ್ಯರು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!