5 ದಶಕದ ನಂಟನ್ನು ಕಡಿದುಕೊಂಡು ಮತ್ತೊಂದು ಪಕ್ಷದತ್ತ ಮುಖಂಡ

By Web DeskFirst Published Nov 12, 2018, 11:33 AM IST
Highlights

ಪಕ್ಷದೊಂದಿಗಿನ 5 ದಶಕಗಳ ನಂಟನ್ನು ಕಡಿದುಕೊಂಡು, ಹೊಸದಾಗಿ ರಚನೆ ಆದ ಶ್ರೀಲಂಕಾ ಪೀಪಲ್ಸ್ ಪಕ್ಷಕ್ಕೆ ಮಹಿಂದ ರಾಜಪಕ್ಸೆ ಭಾನುವಾರ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅಧ್ಯಕ್ಷ ಸಿರಿಸೇನಾ ಅವರಿಗೇ ಸಡ್ಡು ಹೊಡೆದಿದ್ದಾರೆ.

ಕೊಲಂಬೋ: ರಾಜಕೀಯ ಬಿಕ್ಕಟ್ಟಿನ ಮಧ್ಯೆಯೇ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಮಹಿಂದ ರಾಜಪಕ್ಸೆ,  ತಮ್ಮನ್ನು ಪ್ರಧಾನಿ ಹುದ್ದೆಗೆ ನಿಯೋಜಿಸಿದ ಅಧ್ಯಕ್ಷ ಸಿರಿಸೇನಾ ಅವರಿಗೇ ಸಡ್ಡು ಹೊಡೆದಿದ್ದಾರೆ.

ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ ಜೊತೆಗಿನ 5 ದಶಕಗಳ ನಂಟನ್ನು ಕಡಿದುಕೊಂಡು, ಹೊಸದಾಗಿ ರಚನೆ ಆದ ಶ್ರೀಲಂಕಾ ಪೀಪಲ್ಸ್ ಪಕ್ಷಕ್ಕೆ ರಾಜಪಕ್ಸೆ ಭಾನುವಾರ ಸೇರ್ಪಡೆಯಾಗಿದ್ದಾರೆ. 

ಜ. 5 ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮದೇ ಆದ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವುದಾಗಿ ರಾಜಪಕ್ಸೆ ಘೋಷಿಸಿದ್ದಾರೆ. ರಾಜಪಕ್ಸೆ  ರಾಜಕೀಯ ಮರುಪ್ರವೇಶಕ್ಕಾಗಿ ಬೆಂಬಲಿಗರು ಕಳೆದ ವರ್ಷ ಶ್ರೀಲಂಕಾ ಪೀಪಲ್ಸ್ ಪಕ್ಷವನ್ನು ಸ್ಥಾಪಿಸಿದ್ದರು.

click me!