ಮರಾಠಾ ಮೀಸಲಾತಿ: ಮಹಾರಾಷ್ಟ್ರ ಪ್ರಕ್ಷುಬ್ದ!

Jul 25, 2018, 6:02 PM IST

ಮುಂಬೈ(ಜು.25): ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಮರಾಠ ಸಮುದಾಯದವರು ಬೀದಿಗಿಳಿದಿದ್ದಾರೆ. ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಬಂದ್ ಪರಿಣಾಮ ಮರಾಠ ಸಮುದಾಯ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಳಗ್ಗೆಯಿಂದಲೇ ಹಲವೆಡೆ ರಸ್ತೆ ತಡೆ ನಡೆಸಲಾಗಿದೆ. ಸಕಾಲ ಮರಾಠ ಸಮಾಜ ಹಾಗೂ ಮರಾಠ ಕ್ರಾಂತಿ ಮೋರ್ಚ ಸಂಘಟನೆಗಳ ಕಾರ್ಯಕರ್ತರು ನೆವಿ ಮುಂಬೈ ಪೆನೆವೆಲ್ ಪ್ರದೇಶದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದು ಎರಡು ಬಸ್ಗಳ ಮೇಲೆ ಕಲ್ಲು ತೂರಿದ್ದಾರೆ.

ಮುಂಬೈ ಮಹಾನಗರಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಅರೆ ಸೇನಾಪಡೆ ಯೋಧರು ಬೀಡುಬಿಟ್ಟಿದ್ದಾರೆ. ಇನ್ನೂ ಪಂಢರಪುರ ದರ್ಶನಕ್ಕೆ ಬಂದಿದ್ದ 15 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಸಂಚಾರ ವ್ಯವಸ್ಥೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ನವಿಮುಂಬೈನಲ್ಲಿ ಬಂದ್ ವೇಳೆ ಅಂಬ್ಯುಲೆನ್ಸ್ ಸಿಲಕಿಕೊಂಡು ರೋಗಿ ಪರದಾಡಬೇಕಾಯಿತು. ಬಂದ್ ಹಿನ್ನೆಲೆ ಇಡೀ ಮಹಾರಾಷ್ಟ್ರವೇ ಪ್ರತಿಭಟನಾಕಾರರ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..