ಹೊಸ ಆದೇಶದಿಂದ ಕುಡುಕರಿಗೆ ಬೇಸರ, ದೂರವಾಯ್ತಾ ರಾಬರ್ಟ್ ರಾಣಿ ಸಡಗರ? ಏ.19ರ ಟಾಪ್ 10 ಸುದ್ದಿ!

By Suvarna News  |  First Published Apr 19, 2020, 5:13 PM IST

ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಕುರಿತು ಅಬಕಾರ ಇಲಾಖೆ ಹೊಸ ಆದೇಶ ಜಾರಿ ಮಾಡಿದೆ. ಅದೆಷ್ಟೇ ಮನವಿ ಮಾಡಿದರೂ ಇದೀಗ ಬೆಂಗಳೂರಿಲ್ಲಿನ 64 ತಬ್ಲೀಘಿಗಳು ಇನ್ನೂ ಪರೀಕ್ಷೆಗೆ ಒಳಗಾಗಿಲಿಲ್ಲ. ಕೇಂದ್ರ ಸರ್ಕಾರ ಹೊಸ ಬಂಡವಾಳ ಹೂಡಿಕೆ ನೀತಿಗೆ ಚೀನಾ ಬೆಚ್ಚಿ ಬಿದ್ದಿದೆ. ಕನ್ನಡದ ರಾಬರ್ಟ್ ಚಿತ್ರದ ನಾಯಕಿಗೆ ಇದೀಗ ಹೊಸ ಚಿಂತೆ ಶುರುವಾಗಿದೆ. ಡೇವಿಡ್ ವಾರ್ನರ್ ಡ್ಯಾನ್ಸ್, ಕರುವನ್ನು ರಕ್ಷಿಸಿದ ಮಹಮ್ಮದ್ ರಫಿ ಸೇರಿದಂತೆ ಏಪ್ರಿಲ್ 19ರ ಟಾಪ್ 10 ಸುದ್ದಿ ಇಲ್ಲಿವೆ.


ಕರ್ನಾಟಕ ಅಬಕಾರಿ ಇಲಾಖೆಯಿಂದ ಹೊರ ಬಿತ್ತು ಮತ್ತೊಂದು ಹೊಸ ಆದೇಶ..!

Latest Videos

undefined

ಬಹು ದಿನಗಳಿಂದ ಕಾಯುತ್ತಿರುವ ನಾಲಿಗೆಗೆ ಮದ್ಯದ ರುಚಿ ತೋರಿಸಬಹುದು ಎಂದುಕೊಂಡವರಿಗೆ ಅಬಕಾರಿ ಇಲಾಖೆ ಮತ್ತೆ ಶಾಕ್ ಕೊಟ್ಟಿದೆ.ಏಪ್ರಿಲ್ 20ಕ್ಕೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಸರ್ಕಾರದ ನಿರ್ಧಾರ ಇದೀಗ ಏನಾಗಿದೆ? ಈ ಸ್ಟೋರಿಯಲ್ಲಿದೆ ವಿವರ.


ಇನ್ನೂ ಪರೀಕ್ಷೆಗೊಳಗಾಗಿಲ್ಲ ಬೆಂಗಳೂರಿನ 64 ತಬ್ಲೀಘಿಗಳು..!...

ತಬ್ಲೀಘಿಗಳಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ರಾಜ್ಯದಿಂದಲೂ ಸಾಕಷ್ಟು ಮಂದಿ ಡೆಲ್ಲಿಯ ನಿಜಾಮುದ್ದೀನ್ ಮಸೀದಿಯ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಹಲವರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಆದರೆ ಬೆಂಗಳೂರಿಲ್ಲಿರುವ 64 ತಬ್ಲೀಘಿಗಳು ಎಲ್ಲಿದ್ದಾರೆ ? ಉತ್ತರ ಇಲ್ಲಿದೆ.

ಕಸಾಯಿಖಾನೆ ಸೇರುತ್ತಿದ್ದ ಕರುವನ್ನು ರಕ್ಷಿಸಿದ ಮಹಮ್ಮದ್ ರಫಿ.

ಕರುವಿಗೆ ಭೀಮಾ ಎಂದು ನಾಮಕರಣ ಮಾಡಲಾಗಿದ್ದು, ಕಳೆದ 18 ದಿನಗಳಿಂದ ಕರುವನ್ನು ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಇದೀಗ ಠಾಣೆಯಲ್ಲೇ ಭೀಮನನ್ನು ಸಾಕಲು ಪೊಲೀಸರು ನಿರ್ಧರಿಸಿದ್ದಾರೆ.


ಕತ್ರೀನಾ ‘ಶೀಲಾ ಕಿ ಜವಾನಿ’ ಹಾಡಿಗೆ ಪುತ್ರಿ ಜತೆ ಡೇವಿಡ್ ವಾರ್ನರ್‌ ಡ್ಯಾನ್ಸ್‌!...

ಸನ್‌ರೈಸರ್‌ ತಂಡದ ನಾಯಕ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಲಾಕ್‌ಡೌನ್ ನಡುವೆಯೂ ಕುಟುಂಬದ ಜತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಮಗಳ ಜತೆ ವಾರ್ನರ್ ಬಾಲಿವುಡ್‌ ಚಿತ್ರ ಖ್ಯಾತ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ರಾಕಿಭಾಯ್ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಚಾರಗಳಿವು!

ಕೆಜಿಎಫ್ ಸ್ಟಾರ್ ಯಶ್ ಸೂಪರ್‌ ಸ್ಟಾರ್ ಆದ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. ಇವರ ಮೊದಲ ಸಿನಿಮಾ  'ಮೊಗ್ಗಿನ ಮನಸು' ಯಿಂದ ಹಿಡಿದು 'ಕೆಜಿಎಫ್' ವರೆಗೆ ನಡೆದು ಬಂದ ದಾರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರು ಏನೇ ಕೆಲಸ ಮಾಡ್ಬೇಕು ಅಂದ್ರೂ ಪಕ್ಕಾ ಪ್ಲಾನಿಂಗ್‌ನಲ್ಲೇ ಮಾಡ್ತಾರೆ. 

ಚೀನಾಗೆ ಕೇಂದ್ರದ ಶಾಕ್: ಭಾರತದಲ್ಲಿ ಹೂಡಿಕೆಗೆ ಬ್ರೇಕ್!

ಕೊರೋನಾ ವೈರಸ್‌ ಸಮಸ್ಯೆಯಿಂದಾಗಿ ಭಾರತದ ಆರ್ಥಿಕತೆ ಹಿಂಜರಿಕೆಯಲ್ಲಿರುವುದರಿಂದ ಚೀನಾ ಇದರ ಲಾಭ ಪಡೆಯಲು ಯತ್ನಿಸಬಹುದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿಯನ್ನೇ ಬದಲಿಸಿದೆ.

ಲಾಕ್‌ಡೌನ್ ಸಂಕಷ್ಟದ ನಡುವೆ ಜಿಲ್ಲಾಧಿಕಾರಿ ಜೀಪಿನಲ್ಲಿ ಪತ್ನಿಗೆ ಡ್ರೈವಿಂಗ್ ಕ್ಲಾಸ್

ಲಾಕ್‌ಡೌನ್ ಕಾರಣ ಜನರು ಹೊರಗೆ ಬರುತ್ತಿಲ್ಲ. ಬಹುತೇಕ ಎಲ್ಲರೂ ನಿಯಮ ಪಾಲಿಸುತ್ತಿದ್ದಾರೆ. ಇತ್ತ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಆಯಾ ಜಿಲ್ಲೆಯಲ್ಲಿ ಕೊರೋನಾ ಸೋಂಕು ತೊಲಗಿಸಲು ಸೂಚಿಸಿದೆ. ಆದರೆ ಈ ಲಾಕ್‌ಡೌನ್ ವೇಳೆ ಖಾಲಿ ರಸ್ತೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಸರ್ಕಾರದ ವಾಹನವನ್ನು ಡ್ರೈವಿಂಗ್ ಕಲಿಯಲು ಬಳಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ.

ರಾಬರ್ಟ್ ರಾಣಿ ಆಶಾಭಟ್‌ಗೆ ಶುರುವಾಗಿದೆ ಹೊಸ ಚಿಂತೆ!

ರಾಬರ್ಟ್ ರಾಣಿ ಆಶಾ ಭಟ್‌ಗೆ ಹೊಸ ಚಿಂತೆ ಶುರುವಾಗಿದೆ. ಲಾಕ್‌ಡೌನ್, ಕೊರೋನಾ ಸಂಕಷ್ಟಗಳೆಲ್ಲವೂ ಯಾವಾಗ ಕಳೆಯುತ್ತದೋ ಎಂದು ಕಾಯುತ್ತಿದ್ದಾರಂತೆ.  ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ, ಯಾವಾಗ ಪ್ರಚಾರಕ್ಕೆ ಹೋಗೋದು ಅಂತ ಕಾಯ್ತಿದ್ದಾರಂತೆ! ಆದಷ್ಟು ಬೇಗ ಎಲ್ಲವೂ ಸರಿ ಹೋಗಲಿ ಅಂತ ಹಾರೈಸೋಣ ಬಿಡಿ! 


72 ಗಂಟೆಯಲ್ಲಿ ವೆಂಟಿಲೇಟರ್‌ ತಯಾರಿ, 9 ಕೇಜಿ ತೂಕದ ಜೀವವಾಯು

ಕೋವಿಡ್‌-19 ಸಾಂಕ್ರಾಮಿಕ ರೋಗದ ಪ್ರಸ್ತುತದ ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸುವ ಸಲುವಾಗಿ ಮೆಸೂರಿನ ಜೆಕೆ ಟೈರ್‌ ಮತ್ತು ಇಂಡಸ್ಟ್ರೀಸ್‌ ಸಂಸ್ಥೆಯ ಎಂಜಿನಿಯರ್‌ಗಳ ತಂಡವು ಮಿತವ್ಯಯಕಾರಿ, ಕೈಗೆಟುಕುವ ಹಾಗೂ ಸಾಗಿಸಲು ಸುಲಭವಾದ ವೆಂಟಿಲೇಟರನ್ನು ದಾಖಲೆಯ ಅವಧಿಯಲ್ಲಿ ತಯಾರಿಸಿದ್ದಾರೆ.

7 ಕಿ.ಮೀ ನಡೆದುಕೊಂಡು ಬೆಂಗಳೂರಿಗೆ ಬಂದು ಡೆಂಟಲ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ!...

ಹೆರಿಗೆ ನೋವು ತಾಳಲಾರದೇ ಸುಮಾರು ಏಳು ಕಿ.ಮೀ. ಓಡೋಡಿ ಬಂದ ಗರ್ಭಿಣಿಗೆ ನೆರವಾಗಿದ್ದು ಓರ್ವ ದಂತ ವೈದ್ಯೆ. ಹೌದು..ತಾವು ಡೆಂಟಲ್ ಡಾಕ್ಟರ್ ಆಗಿದ್ರೂ ಹೆರಿಗೆ ಮಾಡಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

click me!