ಕರ್ನಾಟಕ ಅಬಕಾರಿ ಇಲಾಖೆಯಿಂದ ಹೊರ ಬಿತ್ತು ಮತ್ತೊಂದು ಹೊಸ ಆದೇಶ..!

By Suvarna News  |  First Published Apr 19, 2020, 3:41 PM IST

ಬಹು ದಿನಗಳಿಂದ ಕಾಯುತ್ತಿರುವ ನಾಲಿಗೆಗೆ ಮದ್ಯದ ರುಚಿ ತೋರಿಸಬಹುದು ಎಂದುಕೊಂಡವರಿಗೆ ಅಬಕಾರಿ ಇಲಾಖೆ ಮತ್ತೆ ಶಾಕ್ ಕೊಟ್ಟಿದೆ.


ಬೆಂಗಳೂರು, (ಏ.19): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಕಾರಣದಿಂದ ಲಾಕ್ ಡೌನ್ ಅನ್ನು ಮೇ.3ರ ವರೆಗೆ ಮುಂದೂಡಿಕೆಯಾಗಿದೆ. 

ಹೀಗಾಗಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಮೇ.3ರ ವರೆಗೆ ಮುಂದುವರಿಸಿ ಅಬಕಾರಿ ಇಲಾಖೆ ಆದೇಶಿಸಿದೆ. ಈ ಹಿಂದೆ ಎಪ್ರಿಲ್ 20ವರೆಗೆ ಎಲ್ಲಾ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿತ್ತು. 

Latest Videos

undefined

ಮಂಗಳವಾರ ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್‌..? 

ಈಗ ಲಾಕ್ ಡೌನ್ ಮುಂದುವರಿಕೆಯಾದ ಕಾರಣ ಮದ್ಯ ಮಾರಾಟವನ್ನು ಮೇ.3ರ ವರೆಗೆ ನಿಷೇಧಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮದ್ಯ ಸಿಗದೆ ಪರಿತಪಿಸುತ್ತಿರುವ ಮದ್ಯ ಪ್ರಿಯರಿಗೆ ಏಪ್ರಿಲ್ 20ರ ಸೋಮವಾರ ಲಾಕ್‌ಡೌನ್ ನಿರ್ಬಂಧ ಸಡಿಲವಾಗುತ್ತದೆ. ಎಂಎಸ್‌ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಿಗುತ್ತದೆ.

ಬಹು ದಿನಗಳಿಂದ ಕಾಯುತ್ತಿರುವ ನಾಲಿಗೆಗೆ ಮದ್ಯದ ರುಚಿ ತೋರಿಸಬಹುದು ಎಂದುಕೊಂಡವರಿಗೆ ಅಬಕಾರಿ ಇಲಾಖೆ ಮತ್ತೆ ಶಾಕ್ ಕೊಟ್ಟಿದೆ. ಇದರಿಂದ ಮದ್ಯವ್ಯಸನಿಗಳು ಮೇ.03ರ ವರೆಗೆ ಕಾಯಲೇ ಬೇಕು.

 

click me!