
ಬೆಂಗಳೂರು, (ಏ.19): ಕೊರೋನಾ ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಸಂಕಷ್ಟ ತಂದಿಟ್ಟಿದೆ. ಮಾಹಾಮಾರಿ ಅಟ್ಟಹಾಸಕ್ಕೆ ಎಲೆಂದರಲ್ಲೇ ಲಾಕ್ ಮಾಡಲಾಗಿದೆ. ಜನರ ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ.
ಅದರಲ್ಲೂ ಬಹಳ ಅನಾರೋಗ್ಯವಿಲ್ಲದಿರುವವರಿಗೆ ಔಷಧಿ ಅಥವಾ ಆಸ್ಪತ್ರೆಗೆ ಹೋಗಲು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಹೌದು...ಆಸ್ಪತ್ರೆಗೆ ಹೋಗಲು ಗರ್ಭಿಣಿ ಮಹಿಳೆಯೊಬ್ಬರ ಪರದಾಟ ಇಲ್ಲಿದೆ ನೋಡಿ.
ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ
ಹೆರಿಗೆ ಬೇನೆ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗರ್ಭಿಣಿ ಮತ್ತು ಆಕೆಯ ಪತಿ ಯಾವುದಾದರೂ ಆಸ್ಪತ್ರೆಯೊ, ಕ್ಲಿನಿಕ್ ಸಿಗಬಹುದು ಎಂದು 7 ಕಿಲೋ ಮೀಟರ್ ನಡೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ಕೊನೆಗೆ ಒಂದು ಡೆಂಟಲ್ ಕ್ಲಿನಿಕ್ ತೆರೆದಿರುವುದು ಅವರ ಕಣ್ಣಿಗೆ ಕಾಣಿಸಿತು. ಅಲ್ಲಿಗೆ ಬಂದು ದಂತ ವೈದ್ಯೆ ಸಹಾಯ ಕೋರಿದ್ದಾರೆ. ಕೂಡಲೇ ಅವರನ್ನು ಕರೆಸಿಕೊಂಡ ವೈದ್ಯೆ ಮಹಿಳೆಯ ಹೆರಿಗೆಗೆ ನೆರವಾದರು.
ಶಿಶು ಜನನವಾದ ಕೂಡಲೇ ಅಮ್ಮ ಮತ್ತು ಮಗುವನ್ನು ವೈದ್ಯೆ ಡಾ. ರಮ್ಯಾ ಅವರು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಬೇರೊಂದು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಓರ್ವ ದಂತ ವೈದ್ಯೆಯಾಗಿದ್ದರೂ ಸಹ ಗರ್ಭಿಣಿಯ ಸಂಕಟ ನೋಡಲಾಗದೇ ಡಾ. ರಮ್ಯಾ ಅವರೇ ಹೆರಿಗೆ ಮಾಡಿಸಿರುವುದು ವಿಶೇಷ. ಇವರಿಗೊಂದು ಸೆಲ್ಯೂಟ್ ಹೇಳಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ