‘ಪುಟಗೋಸಿ’ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ದಿನೇಶ್ ಗುಂಡೂರಾವ್

By Web DeskFirst Published Jan 6, 2019, 9:12 PM IST
Highlights

ವಿಧಾನಸೌಧದಲ್ಲಿ ಕಂತೆ ಕಂತೆ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಾಗ ‘ಪುಟಗೋಸಿ’  ಎಂದಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅದಕ್ಕೊಂದು ಸ್ಪಷನೆ ನೀಡಿದ್ದಾರೆ.

ಚಿತ್ರದುರ್ಗ[ಜ.06]  ತಾವೇ ಬಳಸಿದ್ದ ಪುಟಗೋಸಿ ಶಬ್ದಕ್ಕೆ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿ,  ನಾನು ಮೋದಿ ಅವರ ರಫೆಲ್ ಹಗರಣದ 30 ಸಾವಿರ ಕೋಟಿ ರೂ. ಬಗ್ಗೆ ಮಾತಾಡುವಾಗ ಸಿಕ್ಕ 26 ಲಕ್ಷದ ಬಗ್ಗೆ ಮಾಧ್ಯಮದವರು ಕೇಳಿದ್ದರು. ಹಾಗಾಗಿ ನಾನು ಪುಟಗೋಸಿ ಎಂಬ ಶಬ್ದ ಉಪಯೋಗಿಸಿದೆ ಎಂದರು.

ನಾನು ಆ ಪದ ಬಳಸಬಾರದಿತ್ತು. ಬಳಸಿದ್ದೇನೆ. ಅದು ಸರಿಯಲ್ಲ.ನಾನು ಹೇಳಿದ್ದು ಒಂದು ಮಾಧ್ಯಮಗಳು ಅರ್ಥ‌ಮಾಡಿಕೊಂಡಿದ್ದು ಒಂದು. ಯಾರೇ ತಪ್ಪು ಮಾಡಿದ್ದರೂ ಸರಿಯಾದ ತನಿಖೆ ನಡೆಯಲಿ. ನಮ್ಮವರ ಪಾತ್ರ ಇದ್ದರೆ ಹತ್ತು ರೂಪಾಯಿ ಅವ್ಯವಹಾರ ಆಗಿದ್ರೂ‌ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ದಿನೇಶ್ ನಡುವೆಯೂ ವಾಕ್ಸಮರ ನಡೆದಿತ್ತು. ಸಚಿವ ಪುಟ್ಟರಂಗಶೆಟ್ಟಿ ಸಿಬ್ಬಂದಿ ಬಳಿ ವಿಧಾನಸೌಧದಲ್ಲೇ 26 ಲಕ್ಷ ರೂ, ನಗದು ಪತ್ತೆಯಾಗಿತ್ತು.

click me!