ಜಮಾಲ್ ದೇಹ ಆ್ಯಸಿಡ್‌ನಲ್ಲಿ ಸುಟ್ಟು ಚರಂಡಿಗೆ ಎಸೆದಿದ್ದ ಹಂತಕರು!

By Web DeskFirst Published Nov 10, 2018, 7:51 PM IST
Highlights

ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣ! ಆ್ಯಸಿಡ್‌ನಲ್ಲಿ ದೇಹ ಕರಗಿಸಿ ಚರಂಡಿಗೆ ಎಸೆದ ಹಂತಕರು! ಚರಂಡಿಯಲ್ಲಿ ಆ್ಯಸಿಡ್ ಅವಶೇಷ ಪತ್ತೆ ಎಂದ ಟರ್ಕಿ ಮಾಧ್ಯಮ! ದೇಹವನ್ನು ದ್ರವರೂಪದಲ್ಲಿ ಶೇಖರಿಸಿ ಚರಂಡಿಗೆ ಎಸೆದ ಕೊಲೆಗಾರರು

ಅಂಕರಾ(ನ.10): ಭೀಕರವಾಗಿ ಹತ್ಯೆಗೀಡಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ದೇಹವನ್ನು ಕೊಲೆಗಾರರು ಆ್ಯಸಿಡ್‌ನಲ್ಲಿ ಕರಗಿಸಿ ಚರಂಡಿಗೆ ಎಸೆದಿದ್ದರು ಎಂದು ಟರ್ಕಿ ಪತ್ರಿಕೆಯೊಂದು ವರದಿ ಮಾಡಿದೆ.

ಇಸ್ತಾನ್ ಬುಲ್ ನಲ್ಲಿರುವ ಸೌದಿ ಕಾನ್ಸುಲೇಟ್‌ನಲ್ಲಿ ಚರಂಡಿಯಿಂದ ಸಂಗ್ರಹಿಸಲಾದ ಅವಶೇಷಗಳಲ್ಲಿ ಆ್ಯಸಿಡ್ ಅಂಶವಿರುವುದು ಪತ್ತೆಯಾಗಿದೆ ಎಂದು ಟರ್ಕಿ ಸರ್ಕಾರಿ ಸ್ವಾಮ್ಯದ ದಿನಪತ್ರಿಕೆ ಸಬಾಹ್ ವರದಿ ಮಾಡಿದೆ. ಜಮಾಲ್ ದೇಹವನ್ನು ದ್ರವರೂಪದಲ್ಲಿ ಶೇಖರಿಸಿ ಚರಂಡಿಗೆ ಎಸೆಯಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ.

59 ವರ್ಷದ ಜಮಾಲ್ ತಮ್ಮ ವಿವಾಹದ ದಾಖಲೆ ಪಡೆದುಕೊಳ್ಳುವುದಕ್ಕಾಗಿ ಅಕ್ಟೋಬರ್ 2ರಂದು ಸೌದಿ ಕಾನ್ಸುಲೇಟ್‌ಗೆ ಆಗಮಿಸಿದ್ದರು. ಆ ಬಳಿಕ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದಾಗಿ ಸ್ವಲ್ಪ ದಿನಗಳಲ್ಲಿ ಜಮಾಲ್ ಹತ್ಯೆಯಾಗಿರುವುದಾಗಿ ಸೌದಿ ಸರ್ಕಾರ ಒಪ್ಪಿಕೊಂಡಿತ್ತು.

ಇದೊಂದು ಯೋಜಿತ ಹತ್ಯೆ, ಸೌದಿ ಸರ್ಕಾರದ ಪ್ರಮುಖ ಅಧಿಕಾರಿಗಳು ಇದರಲ್ಲಿ ಭಾಗಿಗಳಾಗಿದ್ದಾರೆ ಎಂದು ಟರ್ಕಿ ಆರೋಪಿಸಿದೆ. ಇದೇ ವೇಳೆ ಜಮಾಲ್ ಗೆ ಸೇರಿದ ಎಲ್ಲಾ ದಾಕಲೆಗಲನ್ನು ರಿಯಾದ್, ಪ್ಯಾರಿಸ್ ಹಾಗೂ ವಾಷಿಂಗ್ಟನ್ ಗಳಿಗೆ ಕಳಿಸಿರುವುದಾಗಿ ಟರ್ಕಿ ಅಧ್ಯಕ್ಷರು ಹೇಳಿದ್ದಾರೆ.

click me!