ಏಷ್ಯಾನೆಟ್ ವರದಿ ಇಂಪ್ಯಾಕ್ಟ್; ಕೇರಳ ಸಚಿವ ರಾಜೀನಾಮೆ

By Suvarna Web DeskFirst Published Nov 16, 2017, 10:18 AM IST
Highlights

ಚಾಂಡಿ ಪಾಲು ಹೊಂದಿರುವ ಕಂಪನಿ ಭೂ ಒತ್ತುವರಿಯಲ್ಲಿ ಭಾಗಿಯಾಗಿದೆ ಎಂದು ಸೆಪ್ಟೆಂಬರ್'ನಲ್ಲಿ ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಏಷ್ಯಾನೆಟ್ ನ್ಯೂಸ್’ ವರದಿ ಮಾಡಿತ್ತು.

ತಿರುವನಂತಪುರ(ನ.16): ಭೂಹಗರಣದಲ್ಲಿ ಸಿಲುಕಿರುವ ಕೇರಳದ ಸಾರಿಗೆ ಸಚಿವ, ಎನ್‌'ಸಿಪಿ ಮುಖಂಡ ಥಾಮಸ್ ಚಾಂಡಿ ಬುಧವಾರ ರಾಜೀನಾಮೆ ನೀಡಿದ್ದಾರೆ.

ಚಾಂಡಿ ಪಾಲು ಹೊಂದಿರುವ ಕಂಪನಿ ಭೂ ಒತ್ತುವರಿಯಲ್ಲಿ ಭಾಗಿಯಾಗಿದೆ ಎಂದು ಸೆಪ್ಟೆಂಬರ್'ನಲ್ಲಿ ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಏಷ್ಯಾನೆಟ್ ನ್ಯೂಸ್’ ವರದಿ ಮಾಡಿತ್ತು. ಬಳಿಕ ಇದನ್ನು ಆಲಪ್ಪುಳ ಜಿಲ್ಲಾಧಿಕಾರಿಗಳ ವರದಿ ಖಚಿತಪಡಿಸಿತ್ತು. ವರದಿಯನ್ನು ಕೇರಳ ಹೈಕೋರ್ಟ್‌ನಲ್ಲಿ ಥಾಮಸ್ ಪ್ರಶ್ನಿಸಿದ್ದರು.

ಆದರೆ ಅವರ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿತ್ತು. ಎಲ್‌'ಡಿಎಫ್ ಸರ್ಕಾರಕ್ಕೆ ರಾಜೀನಾಮೆ ನೀಡುತ್ತಿರುವ 3ನೇ ಸಚಿವ ಚಾಂಡಿ ಆಗಿದ್ದಾರೆ.

click me!