ಬಿಜೆಪಿ ಮುಖಂಡರ ಅಸಮಾಧಾನ to ಕಾಶ್ಮೀರ ವಿವಾದ: ಆಗಸ್ಟ್ 28ರ ಟಾಪ್ 10 ಸುದ್ದಿ!

By Web DeskFirst Published Aug 28, 2019, 5:44 PM IST
Highlights

ಆಗಸ್ಟ್ 28 ರಂದು ಕರ್ನಾಟಕ ರಾಜಕೀಯ, ಕೇಂದ್ರದಲ್ಲಿ ಕಾಶ್ಮೀರ ವಿವಾದ ಹಾಗೂ ದೆಹಲಿ ಚುನಾವಣಾ ತಯಾರಿಗಳು ಜನರ ಕುತೂಹಲ ಹಿಡಿದಿಟ್ಟುಕೊಂಡಿತು. ನಟ ವಿಜಯ್ ದೇವರಕೊಂಡ ಕುರಿತು ನಟಿ ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಸಿನಿ ಪ್ರಿಯರಲ್ಲಿ ಗೊಂದಲ ಮೂಡಿಸಿದ್ದು ಸುಳ್ಳಲ್ಲ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧುಗೆ ಸನ್ಮಾನ ಸೇರಿದಂತೆ  ಹಲವು ಸ್ಮರಣೀಯ ಘಟನೆಗಳು ಇಂದು ದಾಖಲಾಗಿದೆ. ಆಗಸ್ಟ್ 28 ರಂದು ಸಂಚಲನ ಸೃಷ್ಟಿಸಿದ ಹತ್ತು ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಬೆಂಗಳೂರು(ಆ.28): ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುರ ರಚನೆ ಬಿಕ್ಕಟ್ಟು, ಮಖಂಡರ ಅಸಮಧಾನ, ಬೆಳಗಾವಿ ಘಟಕದಲ್ಲಿನ ವೈಮನಸ್ಸು ಸೇರಿದಂತೆ ಕರ್ನಾಟಕ ರಾಜ್ಯ ರಾಜಕೀಯ ಇಂದೂ(ಆ.28) ಕೂಡ ದೇಶದ ಗಮನಸೆಳೆಯಿತು. ಅತ್ತ ಜಮ್ಮು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ, ಭಾರತದ ಆರ್ಥಿಕತೆ ಸವಾಲು ಹಾಗೂ ದೆಹಲಿ ಚುನಾವಣೆ ತಯಾರಿಗಳು ಕೇಂದ್ರದಲ್ಲಿ ಸದ್ದು ಮಾಡಿತು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧುಗೆ ಸನ್ಮಾನ, ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವಿನ ಬಿರುಕು ಸಿನಿ ರಸಿಕರಿಗೆ ಆಘಾತ ನೀಡಿದೆ. ಆಗಸ್ಟ್ 28 ರಂದು ಸಂಚಲನ ಸೃಷ್ಟಿಸಿದ ಹತ್ತು ಸುದ್ದಿಗಳ ವಿವರ ಇಲ್ಲಿದೆ.

ಕೊಳಚೆ ನೀರಲ್ಲೂ ದುಡ್ಡು ಹೊಡೆದ ಮಾಜಿ ಸಚಿವರ ಕಥೆ

ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಮೆತ್ರಿ ಸರ್ಕಾರದಲ್ಲಿ ಕೊಳಚೆ ನೀರಲ್ಲೂ ದುಡ್ಡು ಹೊಡೆದಿರುವುದು ಬಟಾಬಯಲಾಗಿದೆ. ಕೊಳಚೆ ನೀರು ಬಿಡದ ಮಾಜಿ ಸಚಿವರ ಕಥೆ ನಿಜಕ್ಕೂ ಈ ದೇಶದ ದುರಂತದಲ್ಲೊಂದು.  

ಲಕ್ಷ್ಮಣ ಸವದಿಗೆ ಉಪ ಮುಖ್ಯಮಂತ್ರಿ ಪಟ್ಟ; ಕಿಡಿ ಕಾರಿದ ಮಾಜಿ ಮುಖ್ಯಮಂತ್ರಿ!


ನೀತಿ ಪಾಠ ಹೇಳುತ್ತಿರುವ ಬಿಜೆಪಿ ಇದೀಗ ಬ್ಲೂ ಫಿಲಂ ನೋಡಿದವರನ್ನು ಉಪಮುಖ್ಯಮಂತ್ರಿ ಮಾಡಿದೆ. ಜನರಿಂದ ಆಯ್ಕೆಯಾದ ಸರ್ಕಾರ ಈ ರೀತಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದಿದೆ. ಇದೇ ಕಾರಣಕ್ಕೆ ಸಿಕ್ಕ ಸಿಕ್ಕವರನ್ನು ಉಪಮುಖ್ಯಮಂತ್ರಿ ಮಾಡುತ್ತಿದದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಇತ್ತ ಬಿಜೆಪಿ ಪಾಳಯದಲ್ಲೇ ಸವದಿ ಡಿಸಿಎಂ ಹುದ್ದೆಗೆ ಅಸಮಧಾನ ಸ್ಫೋಟಗೊಂಡಿದೆ. 


ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ಬೇಡ ಎಂದ ರಾಹುಲ್‌ಗೆ ಪಾಕ್ ತಿರುಗೇಟು!

ಜಮ್ಮು ಮತ್ತು ಕಾಶ್ಮೀರ ಮೇಲಿನ ವಿಶೇಷ ಸ್ಥಾನಮಾನ ರದ್ದು  ಮಾಡಿದ ಬಳಿಕ ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕಾಶ್ಮೀರ ಮೇಲೆ ಹಿಡಿತ ಸಾಧಿಸಿಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದೀಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾಶ್ಮೀರ ಭಾರತದ ಆತಂರಿಕ ವಿಚಾರ, ಇದರಲ್ಲಿ ಪಾಕ್ ಮೂಗು ತೂರಿಸುವ ಅಗತ್ಯವಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಮುತ್ತಾತ ಜವಾಹರ್ ಲಾಲ್ ನೆಹರೂ ರೀತಿ ಯೋಚಿಸಿ, ನಿಮ್ಮ ರಾಜಕೀಯ ಜೀವನದಲ್ಲಿ ಗೊಂದಲ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಪಾಕ್ ತಿರುಗೇಟು ನೀಡಿದೆ.


ಪಾಕ್ ವಾಯುಮಾರ್ಗದಲ್ಲಿ ಭಾರತದ ವಿಮಾನ ಹಾರಾಟಕ್ಕೆ ಮತ್ತೆ ನಿಷೇಧಿಸಲು ನಿರ್ಧಾರ!

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಭಾರತದ ನಡೆಗೆ ಪಾಕಿಸ್ತಾನ ಸಿಡಿಮಿಡಿಗೊಂಡಿದೆ. ಹತಾಶ ಪಾಕ್ ಭಾರತ ತನ್ನ ನಿರ್ಧಾರ ಹಿಂಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದು, ಎಲ್ಲವೂ ವಿಫಲಗೊಳ್ಳುತ್ತಿದೆ. ಇದೀಗ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಪುನರಾರಂಭಗೊಂಡಿದ್ದ, ಅಫ್ಘಾನಿಸ್ತಾನದ ಜೊತೆ ವಾಣಿಜ್ಯ ವಹಿವಾಟಿಗಾಗಿ ಬಳಸಿಕೊಳ್ಳುತ್ತಿರುವ ಭೂ ಮಾರ್ಗ ಮತ್ತು ಪಾಕ್ ಮೂಲಕ ಸಾಗುವ ವಾಯುಮಾರ್ಗದಲ್ಲಿ ಭಾರತೀಯ ವಿಮಾನಗಳ ಹಾರಾಟ ನಿಷೇಧಿಸಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.


ಮೋದಿ ಹೊಗಳಿದ ತರೂರ್‌ಗೆ ಕಾಂಗ್ರೆಸ್‌ ನೋಟಿಸ್‌!

ಧಾನಿ ಮೋದಿಯನ್ನು ಹೊಗಳಿದ್ದಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಶಶಿ ತರೂರ್‌ ವಿರುದ್ಧ ಕಾಂಗ್ರೆಸ್‌ ಕೆಂಡವಾಗಿದ್ದು, ವಿವರಣೆ ನೀಡುವಂತೆ ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ನೋಟಿಸ್‌ ಜಾರಿ ಮಾಡಿದೆ. ಮೋದಿಯನ್ನು ಹೊಗಳುವುದಿದ್ದರೆ ತರೂರ್‌ ಬಿಜೆಪಿಗೆ ಸೇರಲಿ, ಕಾಂಗ್ರೆಸ್‌ಗೆ ಮುಜುಗರ ತರುವುದು ಬೇಡ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ಇನ್ನೆರಡು ವರ್ಷ ರಶ್ಮಿಕಾ ಬೇಡ; ದೇವರಕೊಂಡ ನಿರ್ಧಾರ! ರಶ್ಮಿಕಾ ಉತ್ತರ ಶಾಕಿಂಗ್

ಸ್ಯಾಂಡಲ್‌ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ  ತೆಲುಗು ಸ್ಟಾರ್ ವಿಜಯ್ ದೇವರ ಕೊಂಡ ಗಾಸಿಪ್‌ಗಳಿಂದಲೇ ಮನೆಮಾತಾಗಿದ್ದಾರೆ. ಇವರಿಬ್ಬರ ಆತ್ಮೀಯತೆ ಹಲವು ಬಾರಿ ಚರ್ಚೆಯಾಗಿದೆ. ಇದೀಗ  ವಿಜಯ್ ದೇವರಕೊಂಡ ನನ್ನ ಜೊತೆ ಇನ್ನೆರಡು ವರ್ಷ ಸಿನಿಮಾ ಮಾಡೋದಿಲ್ಲ ಎಂದು ರಶ್ಮಿಕಾ ಅಭಿಮಾನಿಯೊಬ್ಬರಿಗೆ ಉತ್ತರ ನೀಡಿದ್ದಾರೆ. ರಶ್ಮಿಕಾ ಉತ್ತರ ಹಲವರಿಗೆ ಶಾಕ್ ನೀಡಿದೆ. 

ನುಡಿದಂತೆ ನಡೆದ ಬಿಗ್-ಬಿ; ಮಗ-ಮಗಳಿಗೆ ಆಸ್ತಿ ಸಮಪಾಲು

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮಾತಿಗೆ ತಪ್ಪಿದವರಲ್ಲ. ಒಂದು ಬಾರಿ ಕಮಿಟ್ ಆದರೆ ಸಾಕು, ಮತ್ತೆ ಮರೆಯುವುದಿಲ್ಲ, ತಪ್ಪುವುದೂ ಇಲ್ಲ. ಈ ಮೊದಲು ಹೇಳಿದಂತೆ ತಮ್ಮ ಆಸ್ತಿ ಹಂಚಿಕೆಯಲ್ಲೂ ಶಿಸ್ತು ಪಾಲಿಸಿದ್ದಾರೆ. ಬಿಗ್ ಬಿ ಆಸ್ತಿ ಹಂಚಿಕೆಯ ಇಂಟ್ರೆಸ್ಟಿಂಗ್ ಮಾಹಿತಿಗಾಗಿ  ನುಡಿದಂತೆ ನಡೆದ ಬಿಗ್ ಬಿ ಸುದ್ದಿ ಕ್ಲಿಕ್ ಮಾಡಿ.

ಚಾಂಪಿಯನ್ ಸಿಂಧುಗೆ ಮೋದಿ ಅಭಿನಂದನೆ; ಕ್ರೀಡಾ ಇಲಾಖೆ ಭರ್ಜರಿ ಬಹುಮಾನ!


ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಇತಿಹಾಸ ನಿರ್ಮಿಸಿ ತವರಿಗೆ ಆಗಮಿಸಿದ ಸಿಂಧೂಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಕರಿಣ್ ರಿಜಿಜು ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಕ್ರೀಡಾ ಇಲಾಖೆ ಸಿಂಧುಗೆ  ಬಹುಮಾನ ನೀಡಿ ಗೌರವಿಸಿದೆ. 

ರೆನಾಲ್ಟ್ ಟ್ರೈಬರ್ MPV ಕಾರು ಲಾಂಚ್; ಬೆಲೆ 4.95 ಲಕ್ಷ ರೂ! 

ಬಹುನಿರೀಕ್ಷಿತ ರೆನಾಲ್ಟ್ ಟ್ರೈಬರ್ MPV ಕಾರು ಬಿಡುಗಡೆಯಾಗಿದೆ. ದಾಟ್ಸನ್ ಗೋ +, ಮಹೀಂದ್ರ TUV300 ಸೇರಿದಂತೆ ಸಬ್ 4 ಮೀಟರ್ MPV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಟ್ರೈಬರ್ ಕಾರು ಬಿಡುಗಡೆಯಾಗಿದೆ. ಈ ವಿಭಾಗದ ಇತರ ಕಾರುಗಳಿಗೆ ಹೋಲಿಸಿದರೆ ಬೆಲೆಯೂ ಕಡಿಮೆಯಾಗಿದೆ. ರೆನಾಲ್ಟ್ ಕ್ವಿಡ್ ಮಾದರಿಯಲ್ಲೇ ಕಡಿಮೆ ಬೆಲೆ ಹಾಗೂ ಹೆಚ್ಚಿನ ಫೀಚರ್ಸ್‍‌ನೊಂದಿಗೆ ಟ್ರೈಬರ್ ಮಾರುಕಟ್ಟೆ ಪ್ರವೇಶಿಸಿದೆ.

ಹೀಗೂ ಮಾಡ್ತಾರಾ? ATMನಲ್ಲಿ ಹಣ ಡ್ರಾ ಮಾಡುವ ಮುನ್ನ ವಿಡಿಯೋ ತಪ್ಪದೇ ನೋಡಿ

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ವಿಡಿಯೋ ಒಂದನ್ನು ಟ್ವೀಟ್ ಮಾಡುತ್ತಾ ATMನಿಂದ ಹಣ ಡ್ರಾ ಮಾಡುವ ಮುನ್ನ ಜನರು ಎಚ್ಚರಿಕೆಯಿಂದಿರಬೇಕು ಎಂದಿದ್ದರು. ವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಯಾವ ರೀತಿ ಎಟಿಎಂ ಕಾರ್ಡ್ ಮಾಹಿತಿಯನ್ನು ಕದಿಯುತ್ತಾರೆ ಎಂದು ತೋರಿಸಲಾಗಿದೆ. ಹಣ ಡ್ರಾ ಮಾಡುವ ಮುನ್ನ ಈ ವಿಡಿಯೋ ನೋಡಿ ಎಚ್ಚರವಹಿಸಿವುದು ಉತ್ತಮ.
 

click me!