ನೂತನ ಶಾಸಕರ ಖಾತೆ ಕ್ಯಾತೆ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗೆ ಏನಾಗೈತೆ; ಫೆ.08ರ ಟಾಪ್ 10 ಸುದ್ದಿ!

By Suvarna News  |  First Published Feb 8, 2020, 4:00 PM IST

ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸಚಿವರು ಪ್ರಮುಖ ಖಾತೆ ನೀಡುವಂತೆ ಬೇಡಿಕೆ ಇಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಗೆ ಸ್ಥಾನ ಹಂಚಿಕೆ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಪದವಿ ಅಸಲಿ ಅಥವಾ ನಕಲಿ ಅನ್ನೋ ಚರ್ಚೆ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಗೂಗಲ್ ಸರ್ಚ್‌ನಲ್ಲಿ ಡಿಬಾಸ್ ದರ್ಶನ್, ದೆಹಲಿ ಚುನಾವಣೆ ಸೇರಿದಂತೆ ಫೆಬ್ರವರಿ 8ರ ಟಾಪ್ 10 ಸುದ್ದಿ ಇಲ್ಲಿವೆ.


ಸಿದ್ದು ಕಾನೂನು ಪದವಿ ಅಸಲಿಯೋ? ನಕಲಿಯೋ?

Tap to resize

Latest Videos

ನೂತನ ಸಚಿವರಾಗಿರುವ ಬಿ ಸಿ ಪಾಟೀಲ್ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಕಾನೂನು ಪದವಿ ಅಸಲಿಯೋ ನಕಲಿಯೋ ಎಂದು ಪ್ರಶ್ನೆ ಮಾಡಿದ್ದಾರೆ. 

ಯಡಿಯೂರಪ್ಪ ನಿವಾಸಕ್ಕೆ ಕಾಂಗ್ರೆಸ್ ನಾಯಕರು ದೌಡು: ಕಾರಣ..?.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಸಂಭಾಷಣೆ ಪ್ರಕರಣದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ

ಚಲಿಸುತ್ತಿದ್ದ ಬಸ್‌ ಹಿಂದೆ ನೇತಾಡಿ ಬಾಲಕನ ಸರ್ಕಸ್: ವಿಡಿಯೋ ವೈರಲ್

ಸ್ಕೂಲ್ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಬಸ್ಸಿನ ಹಿಂಭಾಗದಲ್ಲಿ ಕುಳಿತುಕೊಂಡು ಸರ್ಕಸ್ ಮಾಡುತ್ತಿದ್ದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಸ್ಕೂಲ್‌ ಬಸ್‌ನ ಹಿಂದೆ ನೇತಾಡುವ ಸ್ಥಿತಿಯಲ್ಲಿ ಬಾಲಕ ಕುಳಿತುಕೊಂಡ ಬಾಲಕನ ವಿಡಿಯೋ ವೈರಲ್ ಆಗಿದೆ.

ಆಪ್ ಕಾರ್ಯಕರ್ತನ ಕೆನ್ನೆಗೆ ರಪ್ ಅಂತಾ ಬಾರಿಸಲೆತ್ನಿಸಿದ ಅಲ್ಕಾ: ಮತಗಟ್ಟೆ ಬಳಿ ಹೋಯ್ಕ ಬಡ್ಕಾ!

ಚುನಾವಣಾ ದಿನದವರೆಗೂ ಬಹುತೇಕ ಶಾಂತವಾಗಿಯೇ ಇದ್ದ ರಾಷ್ಟ್ರ ರಾಜಧಾನಿ ನವದೆಹಲಿ, ಮತದಾನದ ದಿನ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿದೆ. ಮತಗಟ್ಟೆ ಸಮೀಪ ಆಪ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾರಾಮಾರಿ ನಡೆಸಿದ್ದಾರೆ.

ಗೂಗಲ್‌ನಲ್ಲೂ ದರ್ಶನ್ ಮುಂದು; ಅಭಿಮಾನಿಗಳು ಏನೆಲ್ಲಾ ಸರ್ಚ್‌ ಮಾಡ್ತಾರೆ ನೋಡಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕ್ಲಾಸ್ ಮಾಸ್ ಎಂಥದ್ದೇ ಪಾತ್ರಕ್ಕೂ ಸೈ ಅನ್ನೋ ಕಲಾವಿದ. ಸಿನಿಮಾರಂಗ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರೋ ಡಿ ಬಾಸ್ ಬಗ್ಗೆ ತಿಳಿದುಕೊಳ್ಳಲು ಜನರಿಗೆ ತೀರ ಕುತೂಹಲ. ಅದಕ್ಕಾಗಿ ಗೂಗಲ್ ನಲ್ಲಿ ಜನರು ದರ್ಶನ್ ಬಗ್ಗೆ ಹೆಚ್ಚು ಹೆಚ್ಚು ಸರ್ಚ್ ಮಾಡ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಬಗ್ಗೆ ಗೂಗಲ್ ನಲ್ಲಿ ಜನರು ಯಾವ ವಿಚಾರವನ್ನ ಹೆಚ್ಚು ಸರ್ಚ್ ಮಾಡ್ತಾರೆ ಅನ್ನೋದನ್ನ ನೋಡಿದ್ರೆ ಅಚ್ಚರಿಯಾಗ್ತೀರಿ!  

ಎಟಿಎಂಗಳಲ್ಲಿ ಇನ್ನು 2000 ರು. ನೋಟು ಸಿಗಲ್ಲ

 2000 ರು. ನೋಟುಗಳ ಚಲಾವಣೆಯನ್ನು ವಿತ್‌ಡ್ರಾವಲ್‌ ಸಮಯದಲ್ಲಿ ನಿರ್ಬಂಧಿಸಬೇಕು. ಎಟಿಎಂಗಳಲ್ಲೂ ಈ ನೋಟು ಹಾಕ ಕೂಡದು ಎಂದು ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕೊಂದು ಸೂಚಿಸಿದೆ.

ದಿಲ್ಲಿ ವಿಧಾನಸಭೆ ಚುನಾವಣೆ : ಆಪ್‌-ಬಿಜೆಪಿ ನೇರ ಸ್ಪರ್ಧೆ

ದೇಶವೇ ಕಾತರದಿಂದ ಎದುರು ನೋಡುತ್ತಿರುವ ದಿಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ.  ಏಕಹಂತದಲ್ಲಿ ಚುನಾವಣೆ ನಡೆಯುತ್ತಿದೆ. ದಿಲ್ಲಿಯ 70 ಸದಸ್ಯಬಲದ ವಿಧಾನಸಭೆಯಲ್ಲಿ ಈಗ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ (ಆಪ್‌) ಅಧಿಕಾರದಲ್ಲಿದೆ. ಆಪ್‌ ಮಣಿಸಲು ಬಿಜೆಪಿ ಹರಸಾಹಸ ನಡೆಸುತ್ತಿದೆ.

ಸಂಸದ ನಳಿನ್ ಆಯ್ತು, ಈಗ ಶಾಸಕ ಖಾದರ್ ಸಿಕ್ಕಾಪಟ್ಟೆ ಟ್ರೋಲ್..! ಕಾಮೆಡಿ ವಿಡಿಯೋ ವೈರಲ್

ಸಿಕ್ಕಾಪಟ್ಟೆ ಟ್ರೋಲ್ ಆಗಿ ಕೊನೆಗೂ ಉದ್ಘಾಟನೆಯಾದ ಮಂಗಳೂರು ಫ್ಲೈ ಓವರ್ ನಂತರ ಇದೀಗ ಮಂಗಳೂರಿನಲ್ಲಿ ಇನ್ನೊಂದು ಟ್ರೋಲ್ ಸೌಂಡ್ ಮಾಡ್ತಿದೆ. ಪಂಪ್‌ವೆಲ್‌ ಫ್ಲೈ ಓವರ್ ಟ್ರೋಲ್ ಮಾಡಿದ್ದ ಧನರಾಜ್ ಆಚಾರ್ ಎಂಬವರೇ ಯು. ಟಿ. ಖಾದರ್ ಅವರನ್ನೂ ಟ್ರೋಲ್ ಮಾಡಿದ್ದಾರೆ. ಟಿಕ್‌ಟಾಕ್‌ ವಿಡಿಯೋ ಮೂಲಕ ಪಂಪ್‌ವೆಲ್‌ ಫ್ಲೈಓವರ್ ಟ್ರೋಲ್ ಮಾಡಿದ್ದು, ಇದೀದ ಅದಕ್ಕೆ ಸಂಬಂಧಿಸಿದಂತೆ ಯು.ಟಿ. ಖಾದರ್ ಅವರನ್ನೂ ಟ್ರೋಲ್ ಮಾಡಲಾಗಿದೆ.

ಖಾತೆ ಹಂಚಿಕೆ ಲಿಸ್ಟ್ ರೆಡಿ ಎಂದ BSY: ಯಾರಿಗೆ ಯಾವ ಖಾತೆ...?...

ಕೊನೆಗೂ ರಾಜ್ಯ ಸಂಪುಟ ವಿಸ್ತರಣೆಯಾಗಿದ್ದು, 10 ಜನರು ಸಚಿವರಾಗಿ ಗುರುವಾರ ರಾಜಭನವದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಆದ್ರೆ, ಇದೀಗ ಖಾತೆ ಕ್ಯಾತೆ ಶುರುವಾಗಿದ್ದು, ಇದಕ್ಕೆ ಶನಿವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸೈನಿ-ಜಡೇಜಾ ಹೋರಾಟ, ದಡ ಸೇರಲಿಲ್ಲ ಭಾರತ; ನ್ಯೂಜಿಲೆಂಡ್‌ಗೆ ಏಕದಿನ ಕಿರೀಟ!

ಇನ್ನೇನು ಪಂದ್ಯ ಸೋತಾಯಿತು, ಸರಣಿ ಕೈಚೆಲ್ಲಿ ಆಯಿತು ಅನ್ನುವಷ್ಟರಲ್ಲೇ ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿ ಪಂದ್ಯ ರೋಚಕ ತಿರುವು ನೀಡಿದ್ದರು. ಹೀನಾಯ ಸೋಲೇ ಗತಿ ಎಂದು ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಹೊಸ ಹುರುಪ ನೀಡಿದ್ದರು. ಆದರೆ ಸೈನಿ ವಿಕೆಟ್ ಪತನದೊಂದಿಗೆ ಭಾರತದ ಕನಸು ನಚ್ಚು ನೂರಾಯಿತು. ಪಂದ್ಯ ಸೋತಿದ್ದಲ್ಲದೇ ಸರಣಿ ಕೈಚೆಲ್ಲಿತು. 

click me!