'ವಿಶ್ವನಾಥ್, ಎಂಟಿಬಿ ಬಿಟ್ರೇ ಎಚ್‌ಡಿಕೆ ಗತಿಯೇ ಯಡ್ಯೂರಪ್ಪಗೂ ಬರುತ್ತೆ'

By Suvarna NewsFirst Published Feb 8, 2020, 3:56 PM IST
Highlights

ಉಪಚುನಾವಣೆಯಲ್ಲಿ ಸೋಲುಕಂಡಿರುವ ಎಂಟಿಬಿ ನಾಗರಜ್ ಹಾಗೂ ವಿಶ್ವಾನಾಥ್ ಅವರನ್ನು ಸಂಪುಟ ವಿಸ್ತರಣೆದಿಂದ ಕೈಬಿಟ್ಟಿರುವುದಕ್ಕೆ ಮಾಜಿ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದು ಈ ಕೆಳಗಿನಂತಿದೆ.

ಮೈಸೂರು, (ಫೆ.08):  ಕರ್ನಾಟಕದಲ್ಲಿ ಮೋದಿ ಆಟ ನಡೆಯೋಲ್ಲ. ಇಲ್ಲೇನಿದ್ದರೂ ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ‌ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.

ಇಂದು (ಶನಿವಾರ) ಮೈಸೂರಿನಲ್ಲಿ ಮಾತನಾಡಿರುವ ವರ್ತೂರು ಪ್ರಕಾಶ್,  ವಿಶ್ವನಾಥ್, ಎಂಟಿಬಿ ನಾಗರಾಜ್ ಅವರನ್ನು ಬಿಟ್ಟರೆ ಬಿಜೆಪಿ ಪ್ಲಾಪ್ ಆಗಲಿದೆ. ಕುಮಾರ‌ಸ್ವಾಮಿ ಗತಿಯೇ ಯಡುಯೂರಪ್ಪಗೂ ಬರುತ್ತೆ  ಎಂದು ಭವಿಷ್ಯ ನುಡಿದರು.

'ಹಳ್ಳಿಹಕ್ಕಿ'ಗೆ ಬೇಕೆ ಬಿರುದು ಸನ್ಮಾನ... ಪ್ರಮಾಣ ವಚನ!

ಯಡಿಯೂರಪ್ಪ ಅವರು ಜೂನ್ ಒಳಗೆ ವಿಶ್ವನಾಥ್, ಎಂಟಿಬಿರನ್ನ ಸಚಿವರನ್ನಾಗಿ ಮಾಡಬೇಕು‌. ಇಲ್ಲವಾದಲ್ಲಿ ವಚನ ಭ್ರಷ್ಟತೆ ಆರೋಪ ಮತ್ತೆ ಯಡಿಯೂರಪ್ಪ ಮೇಲೆ ಬರುತ್ತೆ ಎಂದು ಹೇಳಿದರು.

105 ಸೀಟು ಗೆದ್ದರೂ ಯಡಿಯೂರಪ್ಪ ಒಂದೇ ದಿನಕ್ಕೆ ಸಿಎಂ ಸ್ಥಾನದಿಂದ ಹೊರ ಬಂದರು. ಆದ್ರೆ ನಾಲ್ಕು ಜನ ಕುರುಬರು ಯಡಿಯೂರಪ್ಪ ಜೊತೆ ಹೋಗಿದ್ದಕ್ಕೆ ಈಗ ಮತ್ತೆ ಸಿಎಂ ಆಗಿದ್ದಾರೆ. ಅವರ ಋಣ ತೀರಿಸುವ ಕೆಲಸವನ್ನ ಬಿಎಸ್‌ವೈ ಮಾಡಬೇಕು ಎಂದು ಹೇಳಿದರು.

'ಹಾಗೇ ಆಗ್ಬೇಕು'..! ಹಳ್ಳಿ ಹಕ್ಕಿಗೆ ಕುಟುಕಿದ ಮಾಜಿ ಸಿಎಂ

ಸಿದ್ದರಾಮಯ್ಯ ತಾವು ನಾಯಕರಾದದರೂ ಕುರುಬ ಸಮಾಜದವರನ್ನ ಮಂತ್ರಿ ಮಾಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ವಿಶ್ವನಾಥ್ ಎಂಟಿಬಿ ಮಂತ್ರಿಯಾಗಬೇಕು‌. ಇಲ್ಲವಾದಲ್ಲಿ ರಾಜ್ಯದಲ್ಲಿ ಬಿಜೆಪಿ ದೂಳಿಪಟ ಆಗಲಿದೆ ಎಂದು ತಿಳಿಸಿದರು.

ಉಪಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಇನ್ನು ಹುಣಸೂರಿನಲ್ಲಿ ಎಚ್.ವಿಶ್ವನಾಥ್ ಪರಾಭವಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ.

click me!